ಬುಲೆಟ್​ ರೈಲಿಗೂ ಮೊದಲು ಯೋಧರಿಗೆ ಬುಲೆಟ್​ ಪ್ರೂಫ್​ ಜಾಕೆಟ್​ಗಳು ಸಿಗಬೇಕಲ್ಲವೇ?

ಕೋಲ್ಕತಾ: ದೇಶದಲ್ಲಿ ಬುಲೆಟ್​ ರೈಲುಗಳಿಗಿಂತಲೂ ಮಿಗಿಲಾಗಿ ನಮ್ಮನ್ನು ಕಾಯುತ್ತಿರುವ ಯೋಧರಿಗೆ ಬುಲೆಟ್​ ಪ್ರೂಫ್​ ಜಾಕೆಟ್​ಗಳ ಅಗತ್ಯ ಹೆಚ್ಚಿದೆ ಎಂದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ನ ಸಂಸದ ಅಭಿಷೇಕ್​ ಬ್ಯಾನರ್ಜಿ ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಕೋಲ್ಕತಾದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ, ” ಸೈನಿಕರು ನಮ್ಮ ಗಡಿಯನ್ನು ಕಾಯುತ್ತಿದ್ದಾರೆ. ಅವರ ತ್ಯಾಗ ಬಲಿದಾನಗಳಿಂದಷ್ಟೇ ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ. ದೇಶದಲ್ಲಿ ಬುಲೆಟ್​ ರೈಲುಗಳು ಓಡಾಡುವುದಕ್ಕೂ ಮೊದಲು ನಮ್ಮನ್ನು ಕಾಯುತ್ತಿರುವ ಸೈನಿಕರಿಗೆ ಬುಲೆಟ್​ ಜಾಕೆಟ್​ಗಳು ಸಿಗಬೇಕು. ಈ ವಿಚಾರವಾಗಿ ಸೈನಿಕರ ಬೆನ್ನಿಗೆ ನಿಂತು ಒತ್ತಾಯಿಸಲು ಇದು ಸರಿಯಾದ ಸಮಯ ಎಂದು ಅವರು ಹೇಳಿದ್ದಾರೆ.

ದೇಶದ ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬರು ಸೇನೆಗೆ ಬರಬೇಕು ಎಂಬ ವಾದ ವರ್ಷಗಳು ಕಳೆದಂತೆ ಬಲಗೊಳ್ಳುತ್ತಿದೆ. ಈ ವಿಚಾರದ ಕುರಿತು ಶಾಸನ ಸಭೆಗಳಲ್ಲಿ ಚರ್ಚಿಸಲು ಇದು ಸೂಕ್ತ ಸಮಯ ಎಂದೂ ಅವರು ಹೇಳಿದರು.