Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಶುರುವಾಗಿದೆ ‘ಬೀಗಬೇಡ’ ನ್ಯೂ ಟ್ರೆಂಡ್​!

Thursday, 09.08.2018, 9:40 AM       No Comments

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಬೀಗಬೇಡ’ ಎಂಬ ಟ್ರೆಂಡ್​ ಕ್ರಿಯೇಟ್ ಆಗಿದ್ದು, ಅದರಲ್ಲೂ ಉತ್ತರ ಕರ್ನಾಟಕದವರ ಯಾರದ್ದೇ ವಾಟ್ಸ್​ ಆ್ಯಪ್​, ಫೇಸ್​ ಬುಕ್​ ನೋಡಿದ್ರೂ ಇದೇ ಸ್ಟೇಟಸ್​ ಹೆಚ್ಚಾಗಿ ಕಂಡು ಬರುತ್ತಿದೆ.

ಹಾಗಾದರೆ ಏನಿದು ಬೀಗ ಬೇಡ, ಈ ಟ್ರೆಂಡ್ ಹುಟ್ಟಿಕೊಂಡದ್ದು ಹೇಗೆ ಎಂಬ ವಿವರ ಇಲ್ಲಿದೆ. ಮುಂದೆ ಓದಿ…

ಬೀಗಬೇಡ ಜನಕ ಯಾರು?
ಚಾನೆಲ್​​ವೊಂದರ ಸಂದರ್ಶನದಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್​​​​ ಅವರು ಜೀವನದ ಮೌಲ್ಯ ಸಾರುವ ಮಾತುಗಳನ್ನಾಡಿದ್ದರು. ಹೀಗೆ ಮಾತನಾಡುತ್ತಾ ಬೀಗ ಬೇಡ ಎಂಬ ಪದವನ್ನು ಕಾಯಿನ್​ ಮಾಡಿದ್ರು. ಅಲ್ಲಿಂದ ಈ ಟ್ರೆಂಡ್​ ಶುರುವಾಗಿದೆ.

ಅಂದಹಾಗೆ ಬೀಗಬೇಡ ಎಂದರೆ, ಮನೆಯ ಬಾಗಿಲಿಗೋ ಅಂಗಡಿಯ ಬಾಗಿಲಿಗೋ ಹಾಕುವ ಬೀಗವಲ್ಲ. ಬೀಗಬೇಡ ಎಂದರೆ ಜಂಬ ಪಡಬೇಡ ಎಂದರ್ಥ. ಪ್ರಾಣೇಶ್​ ಅವರ ಬೀಗಬೇಡ ಸ್ಟೈಲ್​ಗೆ ಮನಸೋತ ಮಂದಿ ಈಗ ತಮ್ಮ ಧಾಟಿಯಲ್ಲಿ ಟ್ರೋಲ್​ ಶುರು ಮಾಡಿದ್ದಾರೆ.

ಕಾಮಿಕ್ ಡೈಲಾಗ್ ಬಳಸಿ ಬೀಗಬೇಡಾ ಎಂಬುದನ್ನು ಟ್ರೋಲ್​ ಮಾಡುವುದರ ಜತೆ ಬದುಕಿನ ಪಾಠವನ್ನೂ ಅಳವಡಿಸುವಂಥ ಡೈಲಾಗ್​ಗಳನ್ನು ನೆಟ್ಟಿಗರು ಪೋಸ್ಟ್​ ಮಾಡುತ್ತಿದ್ದಾರೆ. ಇಂಥ ಟ್ರೋಲ್​ಗಳ ಕೆಲವೊಂದು ಝಲಕ್​ ಇಲ್ಲಿದೆ…

  • ಗೆಲವು ನಂದೆ ಎಂದು ಬೀಗಬೇಡ.. ಸೋತವರಿಬ್ಬರು ಸೇರಿ ಸರ್ಕಾರ ಮಾಡೋದನ್ನೂ ನಾನು ಕಂಡಿದ್ದೀನಿ.
  • ಬರೀ ಡ್ರೈ ಫ್ರೂಟ್ಸ್​​​​ ತಿನ್ನುತ್ತೇನೆಂದು ಬೀಗಬೇಡ.. ಚಿತ್ರಾನ್ನದಲ್ಲಿ ಕಡಲೇಬೀಜ ಆರಿಸಿಕೊಂಡು ತಿನ್ನೋದನ್ನ ನೋಡಿದ್ದೀನಿ.
  • ಮನುಷ್ಯನಾಗಿ ಹುಟ್ಟಿದ್ದಕ್ಕೆ ಬೀಗಬೇಡ.. ಮನುಷ್ಯರೂಪಿ ರಾಕ್ಷಸರನ್ನು ನಾನು ನೋಡಿದ್ದೀನಿ.
  • ಡಿಎಸ್​​​ಎಲ್ಆರ್​​ ಕ್ಯಾಮೆರಾದಲ್ಲಿ ಫೋಟೋ ಚೆನ್ನಾಗಿ ಬಂತೆಂದು ಬೀಗಬೇಡ. ನಿನ್ನ ಆಧಾರ್​ ಕಾರ್ಡ್​ ಫೋಟೋವನ್ನೂ ನೋಡಿದ್ದಿನಿ.
  • ಸ್ಟೈಲ್​​ ಎಂದು ಹರಿದ ಪ್ಯಾಂಟ್​​​​ನ್ನು ಹಾಕಿಕೊಂಡು ಅಲೆಯಬೇಡ. ರೋಡ್​​​ನಲ್ಲಿ ಅರೆಬೆತ್ತಲಾಗಿ ಅಲೆದಾಡೋರನ್ನು ನಾನು ನೋಡಿದ್ದೀನಿ.
  • ನಾವೇ ರಾಜ-ರಾಣಿ ಎಂದು ಬೀಗಬೇಡಿ.. ರಾಣಿ ಸೈನಿಕನ ಜತೆ ಓಡಿ ಹೋಗದನ್ನು ನಾನು ನೋಡಿದ್ದೀನಿ.

Leave a Reply

Your email address will not be published. Required fields are marked *

Back To Top