ಸಿನಿಮಾ

ವಿಜೃಂಭಣೆಯಿಂದ ನಡೆದ ಹಳ್ಳಿಗಟ್ಟು ಬೇಡು ಹಬ್ಬ

ಮಡಿಕೇರಿ:

ಪೊನ್ನಂಪೇಟೆ ತಾಲೂಕು ಬೊಟ್ಟಿಯತ್ ನಾಡ್ ಹಳ್ಳಿಗಟ್ಟು ಗ್ರಾಮಕ್ಕೆ ಸೇರಿದ ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಶನಿವಾರ ಮತ್ತು ಭಾನುವಾರ ವಿಜೃಂಭಣೆಯಿಂದ ನಡೆಯಿತು. ಶನಿವಾರ ಮಧ್ಯಾಹ್ನ ಊರು ತಕ್ಕರಾದ ಚಮ್ಮಟೀರ ಕುಟುಂಬದಿಂದ ಪೊಲವಂದೆರೆ ಹೊರಡುವ ಮೂಲಕ ವಾರ್ಷಿಕ ಬೋಡ್ ನಮ್ಮನೆಗೆ ಚಾಲನೆ ದೊರೆಯಿತು. ಸಂಜೆ ಗುಂಡಿತ್ ಅಯ್ಯಪ್ಪ ದೇವರ ಅವುಲ್ ಬಳಿಕ ರಾತ್ರಿ ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಗಳಲ್ಲಿ ಬೋಡ್ ನಮ್ಮೆಯ ಮನೆ ಮನೆ ಕಳಿ ಗಮನ ಸೆಳೆಯಿತು.

ಭಾನುವಾರ ಮಧ್ಯಾಹ್ನ ಚಮ್ಮಟೀರ ಕುಟುಂಬದಿಂದ ಒಂದು ಕುದುರೆ ಹಾಗೂ ಮೊಗ, ಮೂಕಳೇರ ಕುಟುಂಬದಿಂದ ಒಂದು ಕುದುರೆ ಹಾಗೂ ಮೊಗ ಒಂದೆಡೆ ಸೇರಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಹತ್ತಿರದ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಎರಚಾಡಿಕೊಂಡು ಊರಿನವರು ಸಂಭ್ರಮಿಸಿದರು,. ಹತ್ತಾರು ವಿವಿಧ ವೇಷಧಾರಿಗಳು ಗಮನ ಸೆಳೆದರು. ಬಳಿಕ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ ವಾರ್ಷಿಕ ಬೋಡ್ ನಮ್ಮೆ ಸಂಪನ್ನಗೊಂಡಿತು.

Latest Posts

ಲೈಫ್‌ಸ್ಟೈಲ್