ದೆಹಲಿ ಸೇರಿದಂತೆ ಉತ್ತರಭಾರತದ ವಿವಿಧ ಭಾಗಗಳಲ್ಲಿ ವಿಪರೀತ ಚಳಿ ಆವರಿಸಿದೆ. 2019ರ ಡಿಸೆಂಬರ್ 30 ದೆಹಲಿಯಲ್ಲಿ ಶತಮಾನದಲ್ಲೇ ಅತ್ಯಂತ ಚಳಿ ದಿನ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿತ್ತು.
ಸೈಕಲ್ ರಿಕ್ಷಾ ಓಡಿಸುವವರೊಬ್ಬರು ಒಂದು ನಾಯಿಯನ್ನು ಹೊದಿಕೆಯಿಂದ ಬೆಚ್ಚಗೆ ಸುತ್ತಿ ತನ್ನ ಸೈಕಲ್ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಯಾತ್ ಎನ್ನುವವರು ಈ ದೃಶ್ಯದ ಭಾವಚಿತ್ರವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಸಾವಿರಾರು ಜನ ಹಂಚಿಕೊಂಡಿದ್ದಾರೆ.