More

  ಬೀಡಾಡಿ ದನಗಳ ನಿಯಂತ್ರಣಕ್ಕೆ ಕ್ರಮವಹಿಸಿ

  ಕಂಪ್ಲಿ: ಪಟ್ಟಣದಲ್ಲಿ ಬೀಡಾಡಿ ದನಗಳ ಉಪಟಳ ಹೆಚ್ಚಾಗಿದೆ. ಕೆಲ ದಿನಗಳಿಂದ ಕರುವುಳ್ಳ ಹಸುವೊಂದು ದಾರಿ ಹೋಕರ ಮೇಲೆ ದಾಳಿ ನಡೆಸಿದೆ. ಸುದ್ದಿ ತಿಳಿದ ಪುರಸಭೆ ಪೌರ ಕಾರ್ಮಿಕರು ಬೀಡಾಡಿ ದನಗಳನ್ನು ಊರ ಹೊರಗೆ ಶನಿವರ ಒಡೆದುಕೊಂಡು ಹೋದರು.

  ಇದನ್ನೂ ಓದಿ: ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ

  ಇಲ್ಲಿನ ದೇವಾಂಗಪೇಟೆಯ ಮಡ್ಡಿಕಟ್ಟೆ ಬಳಿ ಅ.6ರಂದು ಬೀಡಾಡಿ ದನವೊಂದು ಕರುವಿಗೆ ಜನ್ಮನೀಡಿತ್ತು. ಕರುವಿನೊಂದಿಗೆ ಹಾದಿಬೀದಿಯಲ್ಲಿ ಸುತ್ತುತ್ತಿರುವ ತಾಯಿ ಹಸು ದಾರಿ ಹೋಕರ ಮೇಲೆ ದಾಳಿ ಮಾಡಿ ಆರೆಂಟು ಜನರನ್ನು ಗಾಯಗೊಳಿಸಿದೆ. ಇದರಿಂದ ದಾರಿಹೋಕರು ಬೆಸ್ತು ಬಿದ್ದಿದ್ದಾರೆ.

  ಬೀಡಾಡಿ ದನಗಳನ್ನು ಗೋಶಾಲೆಗೆ ಸಾಗಿಸಬೇಕು. ಮಾಲೀಕರಿದ್ದರೂ ದನಗಳನ್ನು ರಸ್ತೆಗೆ ಬೀಡುತ್ತಿದ್ದು ಅಂತಹ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅನಿಲ್, ಸುನಿಲ್, ಶರಣಪ್ಪ, ಪಂಪಾಪತಿ, ಮಂಜುನಾಥ, ಚಿದಾನಂದ, ನಾಗರಾಜ ಸೇರಿ ಅನೇಕರು ಒತ್ತಾಯಿಸಿದ್ದಾರೆ.

  ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಪ್ರತಿಕ್ರಿಯಿಸಿ, ಬೀಡಾಡಿ ದನಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕ ಮೂಲಕ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಬೀಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts