19.5 C
Bangalore
Wednesday, December 11, 2019

‘ಕೊಹ್ಲಿ ಹುಟ್ಟುವ ಮೊದಲೇ ಭಾರತ ಕ್ರಿಕೆಟ್​ ತಂಡ ಗೆದ್ದಿತ್ತು ಎಂಬುದು ನೆನಪಿರಲಿ, ದಾದಾ ಬಿಸಿಸಿಐ ಅಧ್ಯಕ್ಷ ಎಂಬುದು ನನಗೂ ಗೊತ್ತು’ ಎಂದ ಸುನೀಲ್​ ಗಾವಸ್ಕರ್​

Latest News

ಪ್ರಸಾದನ ಕಲಾವಿದ ರಾಮಕೃಷ್ಣ ಕನ್ನರ್ಪಾಡಿಗೆ ಜೋಳದರಾಶಿ ದೊಡ್ಡನಗೌಡ ಪುರಸ್ಕಾರ

ಬಳ್ಳಾರಿ: ರಂಗತೋರಣ ಸಂಸ್ಥೆಯ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರಕ್ಕೆ ಬೆಂಗಳೂರಿನ ಪ್ರಸಾದನ ಕಲಾವಿದ ರಾಮಕೃಷ್ಣ ಕನ್ನರ್ಪಾಡಿ ಆಯ್ಕೆಯಾಗಿದ್ದಾರೆ. ನಗರದ ರಾಘವ ಕಲಾಮಂದಿರದಲ್ಲಿ ಡಿ.28ರಂದು ಸಂಜೆ 5.45ಕ್ಕೆ...

ಡಿ.14 ರಂದು ಬೆಂಗಳೂರಿನಲ್ಲಿ ಮೀನುಗಾರರ ಸಮಾವೇಶ

ಮೈಸೂರು: ರಾಷ್ಟ್ರೀಯ ಮೀನುಗಾರರ ಸಂಘದ ವತಿಯಿಂದ ಡಿ. 14 ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಮೀನುಗಾರರ ಸ್ವಾಭಿಮಾನ ಸಮಾವೇಶ...

ಪರಸ್ಪರ ಭಾವನಾತ್ಮಕ ಸಂದೇಶ ಮೂಲಕ 2ನೇ ವಿವಾಹ ವಾರ್ಷಿಕೋತ್ಸವವನ್ನು ರಮಣೀಯವಾಗಿಸಿದ ವಿರುಷ್ಕಾ ದಂಪತಿ!

ನವದೆಹಲಿ: ತಾರಾ ದಂಪತಿಯಾದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಂದು ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ನೆನಪಿನ ಕ್ಷಣವನ್ನು...

ತಳೇವಾಡ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು: ಇಂದು ಮೃತ ದೇಹ ಪತ್ತೆ

ವಿಜಯಪುರ: ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ತಳೇವಾಡ ಗ್ರಾಮದಲ್ಲಿ ಸಂಭವಿಸಿದೆ. ಸುದೀಪ (10)...

ಗ್ರಾಹಕರಿಗೆ ಸಿಹಿ ಸುದ್ದಿ: ಹೊಸ ಬೆಳೆಯ ಆಗಮನದಿಂದ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆ

ನವದೆಹಲಿ: ಇತ್ತೀಚಿನ ವಾರಗಳಲ್ಲಿ ಗ್ರಾಹಕರಿಗೆ ಗಗನಕುಸುಮವಾಗಿದ್ದ ಈರುಳ್ಳಿ ಬೆಲೆಯು ಕೊಂಚ ಕೊಂಚವಾಗಿ ಇಳಿಯುವ ಲಕ್ಷಣಗಳು ಕಾಣುತ್ತಿವೆ. ರೈತರು ಹೊಸ ಬೆಳೆಯನ್ನು ಗುಜರಾತ್​ ಮತ್ತು...

ಮುಂಬೈ: ಕೋಲ್ಕತ್ತದ ಈಡನ್​ಗಾರ್ಡ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಿಂಕ್​ಬಾಲ್ ಟೆಸ್ಟ್​ನಲ್ಲಿ ಮೂರನೇ ದಿನ ಭಾರತ ಇನ್ನಿಂಗ್ಸ್​ ಗೆಲುವು ಸಾಧಿಸಿದೆ.

ಈ ಮೂಲಕ ಟೀಂ ಇಂಡಿಯಾ ನಾಲ್ಕನೇ ಸತತ ಇನ್ನಿಂಗ್ಸ್​ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಟೆಸ್ಟ್​ ಗೆಲುವಿನ ಬಳಿಕ ಮಾತನಾಡಿದ್ದ ವಿರಾಟ್​ ಕೊಹ್ಲಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​, ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರನ್ನು ಹೊಗಳಿದ್ದರು. ಗೆಲುವಿನ ಗೌರವವನ್ನು ಅವರಿಗೇ ಅರ್ಪಿಸಿದ್ದರು.

ತಂಡದಲ್ಲಿ ಗೆಲುವಿನ ಸಂಸ್ಕೃತಿ ಹುಟ್ಟುಹಾಕಿದ್ದು ದಾದಾ. ಈ ಯಶಸ್ಸು ಪ್ರಾರಂಭವಾಗಿದ್ದು ದಾದಾ ಕಟ್ಟಿದ ಟೀಂನಿಂದ. ನಾವದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಅಷ್ಟೇ ಎಂದು ಹೇಳಿದ್ದರು.
ವಿರಾಟ್​ ಕೊಹ್ಲಿಯವರ ಈ ಹೇಳಿಕೆಗೆ ಭಾರತ ತಂಡ ಮಾಜಿ ಬ್ಯಾಟ್ಸ್​ಮನ್​ ಸುನೀಲ್ ಗಾವಸ್ಕರ್​ ತಿರುಗೇಟು ನೀಡಿದ್ದಾರೆ. ಭಾರತ ಕ್ರಿಕೆಟ್​ ತಂಡ 1970, 1980ರ ವೇಳೆಯಲ್ಲೂ ಗೆಲುವು ಸಾಧಿಸಿತ್ತು ಎಂಬುದನ್ನು ವಿರಾಟ್​ ಕೊಹ್ಲಿಗೆ ನೆನಪಿಸಿದ್ದಾರೆ.

ಟೀಂ ಇಂಡಿಯಾ ಇನ್ನಿಂಗ್ಸ್​ ಗೆದ್ದಿದ್ದು ಅದ್ಭುತ ಜಯ ಎನ್ನುವುದು ಸತ್ಯ. ಆದರೆ ನಾನೊಂದು ವಿಷಯವನ್ನು ಹೇಳಲೇಬೇಕು. ಈ ಗೆಲುವಿನ ಪಯಣ ಶುರುವಾಗಿದ್ದು ದಾದಾ ಟೀಂನಿಂದ ಎಂದು ವಿರಾಟ್​ ಕೊಹ್ಲಿ ಹೇಳಿದ್ದಾರೆ. ದಾದಾ ಈಗ ಬಿಸಿಸಿಐ ಅಧ್ಯಕ್ಷ ಎಂಬುದು ಎಲ್ಲರಿಗೂ ಗೊತ್ತು. ಇದೇ ಕಾರಣಕ್ಕೆ ಅವರ ಪರವಾಗಿ ಕೊಹ್ಲಿ ಮಾತನಾಡುತ್ತಿರಬಹುದು. ಆದರೆ 70, 80ರ ದಶಕದಲ್ಲೂ ಭಾರತ ಕ್ರಿಕೆಟ್​ ತಂಡ ಜಯ ಸಾಧಿಸಿತ್ತು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೊಹ್ಲಿ ಆಗ ಇನ್ನೂ ಹುಟ್ಟಿರಲಿಲ್ಲ ಎಂದು ಹೇಳಿದ್ದಾರೆ.

ಅನೇಕ ಜನರು ಕ್ರಿಕೆಟ್​ ಪ್ರಾರಂಭವಾಗಿದ್ದೇ 2000ನೇ ಇಸ್ವಿಯಿಂದ ಎಂಬಂತೆ ಮಾತನಾಡುತ್ತಾರೆ. ಆದರೆ ಟೀಂ ಇಂಡಿಯಾ 70ರ ದಶಕದಲ್ಲಿ ವಿದೇಶಕ್ಕೆ ಹೋಗಿ ಆಟ ಆಡಿ ಗೆದ್ದಿದೆ. 1986ರಲ್ಲೂ ಗೆಲುವು ಸಾಧಿಸಿದೆ ಎಂದು ಸುನೀಲ್ ಗಾವಸ್ಕರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...