Tips For Men : ಹುಡುಗಿಯರಿಗೆ ಹೋಲಿಸಿದರೆ ಹುಡುಗರು ಈ ಸೌಂದರ್ಯದ ಕಡೆ ಗಮನ ಕೊಡುವುದು ಕಡಿಮೆ. ಪುರುಷರಿಗೂ ಚರ್ಮದ ಆರೈಕೆ ಬಹಳ ಮುಖ್ಯ. ನೀವು ಆಕರ್ಷಕವಾಗಿ ಕಾಣುಬೇಕು ಎಂದು ಬಯಸಿದ್ದರೆ ಮೊದಲು ಈ ಕೆಲಸಗಳನ್ನು ಮಾಡಿ…ಎಲ್ಲರೂ ನಿಮ್ಮತ್ತ ನೋಡುತ್ತಾರೆ.
ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್ ಬಳಸುವುದರಿಂದ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಸೂರ್ಯನ ಕಿರಣಗಳು ಮಹಿಳೆಯರಿಗಿಂತ ಪುರುಷರ ಚರ್ಮವನ್ನು ಹೆಚ್ಚು ಹಾನಿಗೊಳಿಸುತ್ತವೆ. ಆದ್ದರಿಂದ ಸನ್ ಸ್ಕ್ರೀನ್ ಬಳಸುವುದು ಅತ್ಯಗತ್ಯ.
ನಿಮ್ಮ ಗಡ್ಡ ಮತ್ತು ಮೀಸೆಯ ಆರೈಕೆಯಿಂದ ನೀವು ಉತ್ತಮವಾಗಿ ಕಾಣಬಹುದಾಗಿದೆ. ಹಾಗಾಗಿ ಫ್ರೆಂಚ್ ಕಟ್ ಮಾಡಿ, ಗಡ್ಡವನ್ನು ಟ್ರಿಮ್ ಮಾಡಿ, ಗಡ್ಡ, ಕೂದಲನ್ನು ನಿಮ್ಮದೇ ಆದ ರೀತಿಯಲ್ಲಿ ಹೊಂದಿಸಿ. ಕೆಲವರು ಗಡ್ಡ ಮತ್ತು ಮೀಸೆಯನ್ನು ಬೇಗನೆ ಬೆಳೆಸುತ್ತಾರೆ. ಗಡ್ಡ ಮತ್ತು ಮೀಸೆಯನ್ನು ಟ್ರಿಮ್ ಮಾಡಲು ಗಮನ ಕೊಡಿ. ಇದು ನಿಮ್ಮ ಮುಖವನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ.
ಮೊಡವೆಗಳಾಗಿದ್ದರೆ ಶೇವಿಂಗ್ ಕಷ್ಟವಾಗುತ್ತದೆ. ಆದರೆ ಮೊಡವೆ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳನ್ನು ಬಳಸುವುದಕ್ಕಿಂತ ಮನೆಮದ್ದುಗಳನ್ನು ಬಳಸುವುದು ಉತ್ತಮ. ಹಾಗಾಗಿ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಅಡುಗೆ ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ.
ಸಂದರ್ಭಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳುವುದು ಉತ್ತಮ. ಬಟ್ಟೆಗಳನ್ನು ಆಯ್ಕೆ ಮಾಡುವಾಗ ಬಣ್ಣಗಳು, ಟ್ರೆಂಡಿ ಬಟ್ಟೆಗಳಿಗೆ ಗಮನ ಕೊಡಿ. ಬಟ್ಟೆಯ ಆಯ್ಕೆಯು ನಿಮ್ಮನ್ನು ಸ್ಟೈಲಿಶ್ ಮಾಡುತ್ತದೆ.