ತೋಟಗಳಲ್ಲಿ ಕಾಣಿಸಿಕೊಂಡು ರೈತರಲ್ಲಿ‌ ಆತಂಕ ಮೂಡಿಸಿದ್ದ ಕರಡಿ ಸೆರೆ, ಜೋಗಿಮಟ್ಟಿ ಅರಣ್ಯಕ್ಕೆ ರವಾನೆ

ಚಿತ್ರದುರ್ಗ: ತೋಟಗಳಲ್ಲಿ ಪ್ರತ್ಯಕ್ಷವಾಗಿ ರೈತರಲ್ಲಿ‌ ಆತಂಕ ಮೂಡಿಸಿದ್ದ ಕರಡಿಯನ್ನು ಸೆರೆ ಹಿಡಿಯಲಾಗಿದೆ.

ನಿನ್ನೆ ಅಡಕೆ ತೋಟಗಳಲ್ಲಿ ಕರಡಿ ಪ್ರತ್ಯಕ್ಷವಾಗಿ ಹೊಳಲ್ಕೆರೆ, ಹೊಸದುರ್ಗ ಗಡಿ ಭಾಗದ ಜಾನಕಲ್ ಪ್ರದೇಶದಲ್ಲಿ ಸಂಚಾರ ನಡೆಸಿತ್ತು. ವಿಷಯ ತಿಳಿದು ರಾತ್ರಿ ಕಾರ್ಯಾಚರಣೆ ನಡೆಸಿದ ಹೊಸದುರ್ಗ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ‌ಯನ್ನು ಸೆರೆಹಿಡಿದಿದ್ದಾರೆ.

ಕರಡಿಯನ್ನು ಚಿತ್ರದುರ್ಗ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *