ಸಿನಿಮಾ

ಕರಡಿ ದಾಳಿಗೆ ತಬ್ಬಿಬ್ಬಾದ ಜನ

ಕಲಘಟಗಿ: ಕರಡಿಯೊಂದು ಮೂವರು ರೈತರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಹೊರ ವಲಯದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಶಂಕರ ಶೀಲವಂತರ, ಚನ್ನಬಸಪ್ಪ ಜೈನರ, ಗಂಗನಗೌಡ ನಡುವಿನಮನಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಶಂಕರ ಶೀಲವಂತರ ಅವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿದೆ.

ಸೂರಶೆಟ್ಟಿಕೊಪ್ಪ-ಬೋಗೆನಾಗರಕೊಪ್ಪ ಗ್ರಾಮಗಳ ಮಾರ್ಗ ಮಧ್ಯದ ಪ್ರದೇಶದಲ್ಲಿ ಆಹಾರ-ನೀರು ಅರಸಿ ಬಂದಿದೆ ಎನ್ನಲಾಗಿದೆ.

ಕರಡಿ ಪ್ರತ್ಯಕ್ಷವಾದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕಟ್ಟಿಗೆ, ಬಡಿಗೆ ಹಿಡಿದು ಕೂಗು ಹಾಕಿ ಓಡಿಸಲು ಪ್ರಯತ್ನಿಸಿದರು.

ಈ ವೇಳೆ ಮೂರ್ನಾಲ್ಕು ಜನರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಕರಡಿಯು ಎತ್ತರ ಪ್ರದೇಶದಲ್ಲಿ ಓಡುತ್ತಿರುವ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

Latest Posts

ಲೈಫ್‌ಸ್ಟೈಲ್