ಹುರುಳಿ ಮೆದೆ ಭಸ್ಮ

ಗುಂಡ್ಲುಪೇಟೆ: ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿದ್ದ ಹುರುಳಿ ಮೆದೆಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದೆ.

ಗ್ರಾಮದ ಶಿವಲಿಂಗಪ್ಪ ಎಂಬುವರಿಗೆ ಸೇರಿದ ಹುರುಳಿ ಮೆದೆಗೆ ಬೆಂಕಿ ತಗುಲಿರುವುದನ್ನು ಕಂಡ ಗ್ರಾಮಸ್ಥರು ಬೆಂಕಿ ನಂದಿಸಲು ಮುಂದಾದರೂ ನಿಯಂತ್ರಣಕ್ಕೆ ಬಾರದೆ ಸಂಪೂರ್ಣ ಭಸ್ಮವಾಗಿದೆ. ಘಟನೆಯಿಂದ ಸುಮಾರು 15 ಸಾವಿರ ರೂ.ನಷ್ಟ ಸಂಭವಿಸಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.