ನಂದೇಶ್ವರ: ಪಾಲನೆಯಾಗಲಿ ಡಾ.ಮಹಾಂತ ಶಿವಯೋಗಿಗಳ ತತ್ತ್ವಾದರ್ಶ

ನಂದೇಶ್ವರ: ಜೀವನದುದ್ದಕ್ಕೂ ಬಸವಣ್ಣನವರ ತತ್ತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅನುಸರಿಸಿಕೊಂಡು ಬಂದ ಶ್ರೇಯಸ್ಸು ಡಾ.ಮಹಾಂತ ಶಿವಯೋಗಿಗಳಿಗೆ ಸಲ್ಲುತ್ತದೆ. ಬಸವ ತತ್ತ್ವದ ಪ್ರಚಾರಕ್ಕೆ ಡಾ.ಮಹಾಂತಪ್ಪಗಳು ಹಗಲಿರುಳು ಶ್ರಮಿಸಿದ್ದಾರೆ. ಇಂದಿನ ದಿನಗಳಲ್ಲಿ ಬಸವಣ್ಣನವರ ಹೆಸರು ಹೇಳಿ ಅದರ ಪ್ರತಿಲ ಪಡೆದವರು ಲಕ್ಷ ಲಕ್ಷ ಜನರಿದ್ದಾರೆ. ಸ್ವಾರ್ಥಕ್ಕಾಗಿ ಬಸವಣ್ಣನವರ ಹೆಸರನ್ನು ಬಳಸುವ ಬದಲು ಬಸವಾದಿ ಶರಣರ ತತ್ತ್ವಗಳ ಪ್ರಚಾರಕ್ಕಾಗಿ ಹೆಸರು ಬಳಸಬೇಕೆಂದು ಬಸವ ಬೆಳವಿಯ ಶರಣ ಬಸವ ದೇವರು ಹೇಳಿದ್ದಾರೆ.

ಸಮೀಪದ ಸವದಿ ಗ್ರಾಮದ ಲಿಂ.ಸಂಗನಬಸವ ಶಿವಯೋಗಿಗಳ 77ನೇ ಪುಣ್ಯ ಸ್ಮರಣೋತ್ಸವ, ಲಿಂ.ಡಾ.ಮಹಾಂತ ಶಿವಯೋಗಿಗಳ ಪ್ರಥಮ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರಿಗೆ ನಿಜವಾದ ವಾರಸುದಾರರಿಗಿಂತ ಲಾನುಭವಿಗಳೆ ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿ
ಎಂದರು.

ಸಾನ್ನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸವದಿ ಗ್ರಾಮದ ಲಿಂ.ಸಂಗನಬಸವ ಶಿವಯೋಗಿಗಳ ಹಾಗೂ ಡಾ.ಮಹಾಂತ ಶಿವಯೋಗಿಗಳ ಮಹತ್ವದ ಕಾರ್ಯಗಳನ್ನು ಕೈಗೊಳ್ಳಲುವ ಮೂಲಕ ಇತರರ ಬದುಕಿಗೆ ದಾರಿದೀಪವಾಗಿದ್ದಾರೆ ಎಂದರು.

ಮುಖಂಡ ಚಿದಾನಂದ ಸವದಿ, ಮಧುರಖಂಡಿ ಬಸವಜ್ಞಾನ ಗುರುಕುಲದ ಡಾ.ಈಶ್ವರ ಮಂಟೂರ, ಚಿಕ್ಕೋಡಿ ಡಿಡಿಪಿಐ ಎಂ.ಜಿ.ದಾಸರ, ಗುಳೆದಗುಡ್ಡದ ಗುರುಬಸವ ದೇವರು, ಸಾಹಿತಿ ಯಶವಂತ ಕೊಕ್ಕನವರ ಮಾತನಾಡಿದರು.

ಸವದಿ-ಇಳಕಲ್ ಮಠದ ಗುರು ಮಹಾಂತ ಸ್ವಾಮೀಜಿ, ನಾಗಣಸೂರಿನ ಶ್ರೀಗಳು, ಲೋಕಾಪುರದ ಮಹಾಂತ ದೇವರು, ಸವದಿ ಗ್ರಾಪಂ ಅಧ್ಯಕ್ಷ ಮಲ್ಲನಗೌಡ ಪಾಟೀಲ, ತಾಪಂ ಸದಸ್ಯ ರಾಚುಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಗುರವ, ಎಪಿಎಂಸಿ ಸದಸ್ಯ ಶ್ರೀಶೈಲ ದುಲಾರಿ, ಬಾಬಾಗೌಡ ಪಾಟೀಲ, ಅಪ್ಪಾಲಾಲ್ ಪಾರ್ಥನಳ್ಳಿ, ಸಂಗನಗೌಡ ಪಾಟೀಲ, ಯುವ ಗಾಯಕರಾದ ಸರಸ್ವತಿ ಸಬರದ, ಶ್ರೀಶೈಲ ಜಕ್ಕಪ್ಪನವರ, ಅಶೋಕ ಪಾರ್ಥನಳ್ಳಿ ಇತರರು ಇದ್ದರು. ಸಂಗಣ್ಣ ಗೂಗವಾಡ ಸ್ವಾಗತಿಸಿದರು. ಜಯಶ್ರೀ ಅವಟಿ ನಿರೂಪಿಸಿದರು. 120 ಕ್ಕೂ ಹೆಚ್ಚು ಶರಣ ದಂಪತಿಗೆ ಬಸವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಮಠದಿಂದ ಗೌರವ ಸತ್ಕಾರ ಸ್ವೀಕರಿಸಿದ 120 ಜನ ನ್ಯಾಯವಾದಿ ದಂಪತಿಗಳಿಗೆ, 110 ಜನ ಕೃಷಿಕ ದಂಪತಿಗಳಿಗೆ, 120 ಜನ ಶರಣ ದಂಪತಿಗಳಿಗೆ ಬಸವಾದಿ ಶರಣರ , ಸಂಗನಬಸವ ಶಿವಯೋಗಿಗಳು, ಡಾ.ಮಹಾಂತ ಶಿವಯೋಗಿಗಳ ಆಶೀರ್ವಾದ ದೊರೆಯಲಿದೆ. ಬಸವ ತತ್ತ್ವದ ದಂಡನಾಯಕರಾಗಿದ್ದ ಡಾ.ಮಹಾಂತ ಶಿವಯೋಗಿಗಳು ತೋರಿದ ದಾರಿಯಲ್ಲಿ ಎಲ್ಲರೂ ಸಾಗೋಣ.
– ಗುರು ಮಹಾಂತ ಮಹಾಸ್ವಾಮೀಜಿ. ವಿಜಯಮಹಾಂತೇಶ್ವರ ಮಠ ಸವದಿ-ಇಳಕಲ್