ಅತಿಥಿಯಾಗಿ ಜನಿಸಿ, ಅತಿಥಿಯಾಗಿ ತೆರಳದಿರಿ

ಚಿಕ್ಕಮಗಳೂರು: ಮಾನವರು ಕೇವಲ ಅತಿಥಿಯಾಗಿ ಜನಿಸಿ, ಅತಿಥಿಯಾಗಿ ತೆರಳಬಾರದು. ಪ್ರಕೃತಿಯ ಸಕಲ ಸೌಲಭ್ಯ ಬಳಸಿಕೊಳ್ಳುವ ಮನುಷ್ಯರು ಭವಿಷ್ಯದಲ್ಲಿ ಪರಿಸರವನ್ನು ಹಾನಿಗೊಳಿಸದಂತೆ ಮುಂಜಾಗ್ರತೆ ವಹಿಸಿ ಸಂರಕ್ಷಿಸುವ ಕಾರ್ಯದಲ್ಲಿ ನಿರತರಾಗಬೇಕು ಎಂದು ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ತಿಳಿಸಿದರು.

ನಗರದ ನೂತನ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ಧ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಎಂಬ ಕೇಂದ್ರ ಸರ್ಕಾರದ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಸರ್ಕಾರ ತಾಯಿಗೊಂದು ಸಸಿ ಎಂಬ ಭಾರತಾದ್ಯಂತ ಹಮ್ಮಿಕೊಂಡಿರುವ ಅಭಿಯಾನದಡಿ ಇಂದು ವಿವಿಧ ಇಲಾಖೆಗಳ ಸಹಯೋಗದಲ್ಲಿ ನೂತನ ನ್ಯಾಯಾಲದ ಆವರಣದಲ್ಲಿ ಸಸಿ ನೆಟ್ಟು ಪೋಷಿಸಲಾಗುತ್ತಿದೆ. ಪರಿಸರ ನಮ್ಮೆಲ್ಲರ ಹೆತ್ತತಾಯಿಯಂತೆ. ಹಾಗಾಗಿ ಪರಿಸರ ಮಾತೆ ಹಚ್ಚಹಸಿರಿನಿಂದ ಕೂಡಿರಲು ಎಲ್ಲರು ಸಹಕರಿಸಬೇಕು ಎಂದರು.
ಭವಿಷ್ಯದಲ್ಲಿ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ರಪಂಚದಲ್ಲಿ ಪರಿಸರ ಹಾನಿಗೊಂಡರೆ ಆ ವ್ಯಾಪ್ತಿಯಲ್ಲಿ ಜೀವಸಂಕುಲ ಸರ್ವನಾಶವಾದಂತೆ. ಒಂದೆಡೆ ಪರಿಸರ ಸಂರಕ್ಷಿಸಲು ಹೇಳುತ್ತೇವೆ, ಇನ್ನೊಂದೆಡೆ ದುರಾಸೆಯಿಂದ ಮಾನವರು ಅರಣ್ಯ ನಾಶ ಮತ್ತು ಪರಿಸರ ಕಲುಷಿತಗೊಳಿಸಿ ವಿನಾಶದಡೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಮುಖ್ಯವಾಗಿ ತಾಯಿಗೊಂದು ಸಸಿ ಎಂಬ ಕಾರ್ಯಕ್ರಮವು ಎಲ್ಲೆಡೆ ಹಮ್ಮಿಕೊಳ್ಳಬೇಕು. ವಿಶೇಷವಾಗಿ ಶಾಲಾ-ಕಾಲೇಜು, ಸಂಘ-ಸAಸ್ಥೆಗಳು, ಎನ್‌ಜಿಓಗಳಿಂದ ಕೂಡಿಕೊಂಡು ನಡೆದರೆ ಮಾತ್ರ ಈ ಅಭಿಯಾನವು ಜಿಲ್ಲೆಯಾದ್ಯಂತ ಯಶಸ್ವಿಗೊಳ್ಳಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಭಾನುಮತಿ, ತಾಯಿಯ ಮಹತ್ವ ಅರಿಯುವುದು ಹಾಗೂ ಪರಿಸರ ಕಾಪಾಡುವ ದೃಷ್ಟಿ ಯಿಂದ ಕೇಂದ್ರ ಸರ್ಕಾರ ಉತ್ತಮ ಕಾರ್ಯ ಕ್ರಮ ಹಮ್ಮಿಕೊಂಡಿದೆ. ಅದರಂತೆ ನ್ಯಾಯಾಲಯ ಆವರಣದ ಸುತ್ತಮುತ್ತಲು ಹಲಸು, ಹೊಂಗೆ, ಮಾವು ಸೇರಿದಂತೆ ವಿವಿಧ ತಳಿಗಳ ಸಸಿಗಳನ್ನು ನೆಡಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಜೀವರಾಶಿಗಳ ಜೀವನಾನುಸಾರಕ್ಕೆ ಆಮ್ಲ ಜನಕ ಅವಶ್ಯವಾಗಿದೆ. ಅತಿ ಹೆಚ್ಚಿನ ಮಟ್ಟದಲ್ಲಿ ಮರಗಳಿಂದ ಪರಿಶುದ್ಧ ಆಮ್ಲಜನಕ ಉತ್ಪತ್ತಿಯಾಗುತ್ತಿದ್ದು, ಅವುಗಳನ್ನು ಸಂರಕ್ಷಿಸುವುದು ಹಾಗೂ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿಯಾನ ಆರಂಭಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶರತ್‌ಚಂದ್ರ, ಕಾರ್ಯದರ್ಶಿ ಅನಿಲ್‌ಕುಮಾರ್, ಸಹ ಕಾರ್ಯದರ್ಶಿ ಪ್ರಿಯದರ್ಶಿನಿ, ವಿವಿಧ ವಿಭಾಗಗಳ ನ್ಯಾಯಾಧೀಶರಾದ ಪ್ರಕಾಶ್, ಮಂಜುನಾಥ್, ಗುರುಪ್ರಸಾದ್ ರಾಘವೇಂದ್ರ ಕುಲಕರ್ಣಿ, ವೀರಭದ್ರಯ್ಯ, ದ್ಯಾವಪ್ಪ, ಜೆ.ಕೃಷ್ಣ, ಮಂಜು, ಹರೀಶ್, ನಂದಿನಿ, ವಕೀಲರಾದ ಬಿ.ಆರ್.ಜಗದೀಶ್, ಎಚ್.ಟಿ.ಸುನೀಲ್ ಉಪಸ್ಥಿತರಿದ್ದರು.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…