ಮೇ 17ರಂದು ಬಿಡಿಎ ಫ್ಲ್ಯಾಟ್ ಮೇಳ

blank

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇತ್ತೀಚಿಗೆ ಆಯೋಜಿಸಿದ್ದ ವಿಲ್ಲಾ ಮೇಳದಲ್ಲಿ ಹೆಚ್ಚಿನ ಘಟಕಗಳು ಮಾರಾಟವಾದ ಬೆನ್ನಲ್ಲೇ, ಇದೀಗ ಬಾಕಿ ಉಳಿದಿರುವ ಫ್ಲ್ಯಾಟ್‌ಗಳನ್ನು ವಿಲೇವಾರಿ ಮಾಡಲು ಮತ್ತೊಂದು ಸುತ್ತಿನ ಮೇಳ ನಡೆಸಲು ಮುಂದಾಗಿದೆ.

blank

ಈ ತಿಂಗಳ 17ರಂದು ಕೊಮ್ಮಘಟ್ಟದಲ್ಲಿ ಮೇಳ ನಿಗದಿಯಾಗಿದೆ. ಈ ಮೇಳದಲ್ಲಿ ಕೊಮ್ಮಘಟ್ಟ, ಕಣಮಿಣಿಕೆ, ಕೋನದಾಸಪುರ ಸಹಿತ ಇತರ ಕಡೆಗಳಲ್ಲಿ ಪ್ರಾಧಿಕಾರ ನಿರ್ಮಿಸಿರುವ ಫ್ಲ್ಯಾಟ್ ಯೋಜನೆಯಲ್ಲಿ ಬಾಕಿ ಉಳಿದಿರುವ ಘಟಕಗಳನ್ನು ಮಾರಾಟ ಮಾಡಲಾಗುತ್ತದೆ. ಆಯಾ ಫ್ಲ್ಯಾಟ್ ಮೌಲ್ಯದ ಶೇ.25 ಹಣವನ್ನು ಆರಂಭಿಕ ಠೇವಣಿಯಾಗಿ ಪಾವತಿಸಿದರೆ ಸ್ಥಳದಲ್ಲೇ ಖರೀದಿದಾರರಿಗೆ ಹಂಚಿಕೆ ನೀಡಲಾಗುತ್ತದೆ. ಮೇಳವು ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೂ ನಡೆಯಲಿದೆ ಎಂದು ಬಿಡಿಎ ಮುಖ್ಯ ಲೆಕ್ಕಾಧಿಕಾರಿ (ಸಿಎಒ) ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

75 ವಿಲ್ಲಾ ಮಾರಾಟ:

ಕಳೆದ ಏ.26ರಂದು ಹುಣ್ಣಿಗೆರೆಯ ಡಾ. ಪುನೀತ್ ರಾಜ್‌ಕುಮಾರ್ ವಸತಿ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಮೇಳದಲ್ಲಿ 60 ಘಟಕಗಳನ್ನು ಖರೀದಿಸಲು ನಾಗರಿಕರು ಆರಂಭಿಕ ಠೇವಣಿ ಪಾವತಿಸಿ ಹಂಚಿಕೆ ಪತ್ರ ಪಡೆದಿದ್ದರು. ಒಟ್ಟು 322 ವಿಲ್ಲಾಗಳು ಮಾರಾಟಕ್ಕೆ ಲಭ್ಯವಿದ್ದು, ಈಗಾಗಲೇ 75 ಘಟಕಗಳನ್ನು ಜನರು ಖರೀದಿಸಿದ್ದಾರೆ. ಆರಂಭಿಕ ಠೇವಣಿ ಹಣ ಹೊರತುಪಡಿಸಿ ಉಳಿದ ಹಣ ಪಾವತಿಗೆ 3 ತಿಂಗಳು ಕಾಲಾವಕಾಶ ನೀಡಲಾಗಿದೆ. ಪೂರ್ಣ ಮೊತ್ತವನ್ನು ಪಾವತಿಸಿದವರಿಗೆ ತಕ್ಷಣವೇ ವಾಸ ಮಾಡಲು ಅವಕಾಶ ಮಾಡಿಕೊಡಲಾಗುವುದು. ನೀರು, ವಿದ್ಯುತ್ ಸಹಿತ ಎಲ್ಲ ಮೂಲಸೌಕರ್ಯ ಲಭ್ಯವಿರುವುದರಿಂದ ವಿಲ್ಲಾಗಳಲ್ಲಿ ವಾಸ ಮಾಡಬಹುದಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ವಾಣಿಜ್ಯ ಸೈಟ್ ಇ-ಹರಾಜು:

ಬನಶಂಕರಿ 6ನೇ ಘಟ್ಟದ ತಲಘಟ್ಟಪುರ, ಬಾಣಸವಾಡಿ, ಹೆಮ್ಮಿಗೇಪುರ ಸೇರಿದಂತೆ ನಗರದ ವಿವಿಧೆಡೆ ಪ್ರಾಧಿಕಾರ ನಿರ್ಮಿಸಿರುವ ಬಡಾವಣೆಗಳಲ್ಲಿ ಬಾಕಿ ಉಳಿದಿರುವ ವಸತಿ/ವಾಣಿಜ್ಯ ಸೈಟ್‌ಗಳನ್ನು ಮಾರಾಟ ಮಾಡಲು ಇ-ಹರಾಜು ಪ್ರಕಟಣೆ ಹೊರಡಿಸಲಾಗಿದೆ. ಈ ತಿಂಗಳ 13ರಂದು ನಿಗದಿಯಾಗಿರುವ ಇ-ಹರಾಜು ವೇಳೆ 10 ನಿವೇಶನಗಳನ್ನು ಸಾರ್ವಜನಿಕರು ಬಿಡ್ ಮಾಡಿ ಖರೀದಿಸಬಹುದಾಗಿದೆ.

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…