16 C
Bangalore
Saturday, December 7, 2019

ಮಂಗಳೂರಿಗೆ ಐಪಿಎಲ್ ಫ್ಯಾನ್ ಪಾರ್ಕ್

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ಪಿ.ಬಿ.ಹರೀಶ್ ರೈ ಮಂಗಳೂರು

ದೇಶದೆಲ್ಲೆಡೆ ಈಗ ಚುನಾವಣೆಯ ಕಾವು. ಜತೆಗೆ ಐಪಿಎಲ್ ಹವಾ. ಕ್ರಿಕೆಟ್ ಸ್ಟೇಡಿಯಂ ಹೊಂದಿರುವ ಮಹಾನಗರದ ಜನರಿಗೆ ನೇರವಾಗಿ ಐಪಿಎಲ್ ಪಂದ್ಯ ವೀಕ್ಷಿಸುವ ಭಾಗ್ಯವಾದರೆ, ಉಳಿದೆಡೆ ಟಿ.ವಿ.ಯಲ್ಲಿ ವೀಕ್ಷಿಸಿ ಖುಷಿ ಪಡುತ್ತಿದ್ದಾರೆ. ಈ ಬಾರಿ ಮಂಗಳೂರಿನ ಕ್ರಿಕೆಟ್ ಪ್ರಿಯರಿಗೆ ಸ್ಟೇಡಿಯಂನಲ್ಲಿ ಕುಳಿತು ಐಪಿಎಲ್ ನೋಡುವ ವಿಶಿಷ್ಟ ಅನುಭವವಾಗಲಿದೆ. ಬಿಸಿಸಿಐ ದೇಶದ 36 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ಆಯೋಜಿಸುತ್ತಿದ್ದು, ಈ ಬಾರಿಯೂ ಮಂಗಳೂರು ಸೇರ್ಪಡೆಯಾಗಿದೆ.

ಬಿಸಿಸಿಐ ದೇಶದ 36 ನಗರಗಳನ್ನು ಫ್ಯಾನ್ ಪಾರ್ಕ್‌ಗಾಗಿ ಆಯ್ಕೆ ಮಾಡಿದೆ. ಕರ್ನಾಟಕದ ಶಿವಮೊಗ್ಗ, ಬೆಳಗಾವಿ, ಮೈಸೂರು ಮತ್ತು ಮಂಗಳೂರು ನಗರದಲ್ಲಿ ನಿರ್ಮಾಣವಾಗುವ ಫ್ಯಾನ್ ಪಾರ್ಕ್‌ನಲ್ಲಿ ಐಪಿಎಲ್ ವೀಕ್ಷಿಸಬಹುದು. ಏ.20 ಮತ್ತು 21ರಂದು ನಡೆಯುವ ಒಟ್ಟು ನಾಲ್ಕು ಪಂದ್ಯಗಳನ್ನು ಮಂಗಳೂರಿನ ನೆಹರು ಮೈದಾನದಲ್ಲಿ ನಿರ್ಮಾಣವಾಗುವ ಫ್ಯಾನ್ ಪಾರ್ಕ್‌ನಲ್ಲಿ ವೀಕ್ಷಿಸಬಹುದು. ಮೈಸೂರಿನ ಕ್ರಿಕೆಟ್ ಪ್ರೇಮಿಗಳಿಗೆ ಈ ಬಾರಿ ಫ್ಯಾನ್ ಪಾರ್ಕ್‌ನಲ್ಲಿ ಫೈನಲ್ ಪಂದ್ಯವನ್ನು ವೀಕ್ಷಿಸುವ ಅವಕಾಶ ಸಿಗಲಿದೆ.

ಏನಿದು ಫ್ಯಾನ್ ಪಾರ್ಕ್?: ಐಪಿಎಲ್ ಪಂದ್ಯಾಟದ ಉತ್ಸಾಹವನ್ನು ಪಸರಿಸಲು ಬಿಸಿಸಿಐ 2015ರಿಂದ ಫ್ಯಾನ್ ಪಾರ್ಕ್ ಆಯೋಜನೆ ಮಾಡುತ್ತಾ ಬಂದಿದೆ. ಕ್ರಿಕೆಟ್ ಅಭಿಮಾನಿಗಳನ್ನು ಐಪಿಎಲ್‌ಗೆ ಇನ್ನಷ್ಟು ಹತ್ತಿರವಾಗಿಸುವುದು ಇದರ ಉದ್ದೇಶ. ಆಯ್ದ ನಗರಗಳಲ್ಲಿ ಕ್ರಿಕೆಟ್ ಸ್ಟೇಡಿಯಂ ಮಾದರಿಯ ವಿಶಾಲ ಪೆಂಡಾಲ್ ನಿರ್ಮಿಸಲಾಗುತ್ತದೆ. ಉಚಿತ ಪ್ರವೇಶವಿದ್ದು, ಬೃಹತ್ ಟಿ.ವಿ ಪರದೆಯಲ್ಲಿ ಐಪಿಎಲ್ ಪಂದ್ಯಾಟದ ನೇರಪ್ರಸಾರ ವೀಕ್ಷಿಸಬಹುದು. ಒಳಗೆ ಪ್ರವೇಶಿಸಿದರೆ ಜನಸಾಗರ. ಕಿವಿಗಡಚಿಕ್ಕುವ ಹರ್ಷೋದ್ಘಾರ. ಸ್ಟೇಡಿಯಂ ವಾತಾವರಣದಲ್ಲಿ ಕ್ರಿಕೆಟ್ ನೋಡುವಂತಹ ಅನುಭವ ಸಿಗುತ್ತದೆ. ಜತೆಗೆ ಸಂಗೀತ, ಆಹಾರ ಹಾಗೂ ತಂಪು ಪಾನೀಯದ ಸ್ಟಾಲ್‌ಗಳು ಪಾರ್ಕ್‌ನಲ್ಲಿ ಇದೆ.

ಪಾರ್ಕ್ ಜನಪ್ರಿಯತೆ: ವರ್ಷದಿಂದ ವರ್ಷಕ್ಕೆ ಐಪಿಎಲ್ ಫ್ಯಾನ್ ಪಾರ್ಕ್ ಜನಪ್ರಿಯವಾಗುತ್ತಿದೆ. ಇದುವರೆಗೆ 21 ರಾಜ್ಯಗಳ 65 ನಗರಗಳಲ್ಲಿ ಫ್ಯಾನ್ ಪಾರ್ಕ್ ಆಯೋಜನೆಯಾಗಿದೆ. ಕಳೆದ ಸಾಲಿನಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಫ್ಯಾನ್ ಪಾರ್ಕ್‌ನಲ್ಲಿ ಐಪಿಎಲ್‌ನ ಮಜಾ ಅನುಭವಿಸಿದ್ದಾರೆ. ಉತ್ತರ ಭಾರತದ ಕುಲು ಮನಾಲಿಯಿಂದ ತೊಡಗಿ ದಕ್ಷಿಣದ ತಿರುನಲ್ವೇಲಿ ತನಕ ದೇಶದ ಎಲ್ಲ ಮೂಲೆಗಳಲ್ಲಿ ಫ್ಯಾನ್ ಪಾರ್ಕ್ ಆಯೋಜನೆಗೊಂಡಿದ್ದು, ಈ ವರ್ಷ ಶಿವಮೊಗ್ಗ ನಗರ ಹೊಸತಾಗಿ ಸೇರ್ಪಡೆಯಾಗಿದೆ.

ಮಳೆಯಲ್ಲಿ ತೊಯ್ದ ಪಾರ್ಕ್: ಕಳೆದ ವರ್ಷ ಐಪಿಎಲ್‌ನ ಐಪಿಎಲ್ ಫೈನಲ್ ಪಂದ್ಯದಂದು ನೆಹರು ಮೈದಾನದಲ್ಲಿ ಫ್ಯಾನ್‌ಪಾರ್ಕ್ ಆಯೋಜಿಸಲಾಗಿತ್ತು. ಆದರೆ ಸಿಡಿಲು ಹಾಗೂ ಭಾರಿ ಮಳೆಯಿಂದಾಗಿ ಕ್ರಿಕೆಟ್ ವೀಕ್ಷಿಸಲು ಸಾಧ್ಯವಾಗದೆ ಅಭಿಮಾನಿಗಳು ನಿರಾಸೆ ಅನುಭವಿಸಿದ್ದರು. ಪಂದ್ಯ ವೀಕ್ಷಿಸುತ್ತಿದ್ದ ಸಂದರ್ಭ ಪೊಲೀಸ್ ಸಿಬ್ಬಂದಿಯೊಬ್ಬರು ಸಿಡಿಲ ಆಘಾತಕ್ಕೊಳಗಾಗಿ ಬಳಿಕ ಚೇತರಿಸಿಕೊಂಡಿದ್ದರು.

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...