ನವದೆಹಲಿ: ಐಪಿಎಲ್ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೋಲ್ಕತದಲ್ಲಿ ತುರ್ತು ಅಪೆಕ್ಸ್ ಕೌನ್ಸಿಲ್ ಸಭೆ ನಿಗದಿಗೊಳಿಸಿದ್ದು, ತಂಬಾಕು, ಮದ್ಯದ ಉತ್ಪನ್ನಗಳ ಜಾಹೀರಾತುಗಳ ಪ್ರಸಾರಕ್ಕೆ ರ್ನಿಬಂಧ ಸೇರಿದಂತೆ ಸೇರಿ ಇತರ ವಿಷಯಗಳ ಕುರಿತು ಚರ್ಚಿಸಲಿದೆ ಎನ್ನಲಾಗಿದೆ. ಮಾ.22ರಂದು ಕೋಲ್ಕತದ ಈಡನ್ ಗಾರ್ಡನ್ಸ್ನಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ಆರ್ಸಿಬಿ ತಂಡಗಳ ನಡುವೆ ನಿಗದಿಯಾಗಿರುವ ಉದ್ಘಾಟನಾ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನ ಈ ಸಭೆ ನಡೆಯಲಿದೆ.
ತವರಿನ ಋತುವಿನಲ್ಲಿ ಭಾರತ ತಂಡ ಆಡಲಿರುವ ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ದಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಮೈದಾನಗಳನ್ನು ಅಂತಿಮಗೊಳಿಸುವುದು ಸಭೆಯ ಅಜೆಂಡಾದಲ್ಲಿರುವ ಮತ್ತೊಂದು ನಿರ್ಣಾಯಕ ಅಂಶ ಎನಿಸಿದೆ. ಭಾರತ ತಂಡ ಅಕ್ಟೋಬರ್ನಲ್ಲಿ ವೆಸ್ಟ್ ಇಂಡೀಸ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ದಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿ ನವೆಂಬರ್& ಡಿಸೆಂಬರ್ನಲ್ಲಿ ನಿಗದಿಯಾಗಿದೆ.
ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ಜೂನ್ 20ರಿಂದ ಆಗಸ್ಟ್ 5ರವರೆಗೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಭಾರತ ತಂಡದ ಋತುವು ಆರಂಭವಾಗಲಿದೆ. ಈ ವಿಷಯಗಳ ಜತೆಗೆ 2025&26ರ ದೇಶೀಯ ಟೂರ್ನಿಗಳ ಸ್ವರೂಪದ ರ್ನಿಣಯಿಸುವುದು ಸಭೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. 2024&25ರ ಋತುವಿನಲ್ಲಿ ದುಲೀಪ್ ಟ್ರೋಫಿಯನ್ನು ಪುನರ್ರಚನೆ ಮಾಡಿದರೆ, ರಣಜಿ ಟ್ರೋಫಿಯನ್ನು ಎರಡು ಚರಣದಲ್ಲಿ ಆಡಿಸಲಾಗಿತ್ತು. 2013ರ ಬಳಿಕ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಬಿಸಿಸಿಐ, ಐಸಿಸಿ ಟೂರ್ನಿಯ ಆಯೋಜನೆಗೆ ಸ್ಥಳಿಯ ಸಂಟನಾ ಸಮಿತಿ ರಚನೆ ಹಾಗೂ ಪಂದ್ಯಗಳ ತಾಣಗಳನ್ನು ಸಭೆಯಲ್ಲಿ ಅಂತಿಮಗೊಳಿಸುವುದು ಅಜೆಂಡಾಗಳಲ್ಲಿ ಒಂದಾಗಿದೆ. ಅಕ್ಟೋಬರ್ನಲ್ಲಿ ಮಹಿಳಾ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ.
ತಂಬಾಕು ಪ್ರಾಯೋಜಕತ್ವಕ್ಕೆ ನಿಷೇಧ!: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ ಐಪಿಎಲ್ ಕಾರ್ಯಕ್ರಮಗಳು ನಡೆಯುವ ಕ್ರೀಡಾಂಗಣದ ಆವರಣ ಹಾಗೂ ಪಂದ್ಯಗಳ ನೇರಪ್ರಸಾರ ವೇಳೆ ತಂಬಾಕು, ಮದ್ಯದ ಉತ್ಪನ್ನಗಳ ಜಾಹೀರಾತುಗಳು ನಿಷೇಧದ ಜತೆಗೆ ಕ್ರಿಪ್ಟೋ ಕರೆನ್ಸಿ ಬ್ರಾ$್ಯಂಡ್ಗಳ ಪ್ರಾಯೋಜಕತ್ವದ ಕುರಿತು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ.