ವಿಶ್ವಕಪ್​ನಿಂದ ಪಾಕ್​ ಪ್ರತ್ಯೇಕಿಸಲು ಹೋಗಿ ನಾವೇ ಪ್ರತ್ಯೇಕವಾಗಬಾರದು: ನಿಷೇಧದ ಆಂತಕದಲ್ಲಿ ಬಿಸಿಸಿಐ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ 2019ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪಂದ್ಯವನ್ನು ಬಹಿಷ್ಕರಿಸುವ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಸರ್ಕಾರದ ಮೂಲಗಳು ಸಲಹೆ ನೀಡಿವೆ ಎನ್ನಲಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಶೂಟಿಂಗ್​ ವಿಶ್ವಕಪ್​ನಲ್ಲಿ ಭಾಗವಹಿಸಲು ಪಾಕ್​ ಶೂಟರ್ಸ್​ ವಿಸಾ ನಿರಾಕರಿಸುವುದರಿಂದ ಅಸಮಾಧಾನಗೊಂಡಿರುವ ಅಮಾನತಿಗಾಗಿ ಅಂತಾರಾಷ್ಟ್ರೀಯ ಓಲಂಪಿಕ್​ ಸಮಿತಿ ಭವಿಷ್ಯದಲ್ಲಿ ಭಾರತ ಆತಿಥ್ಯ ವಹಿಸುವ ಸ್ಪರ್ಧಾ ಕಾರ್ಯಕ್ರಮಗಳ ಅಮಾನತಿಗಾಗಿ ನಿರ್ಧರಿಸಿರುವುದರಿಂದ ಕ್ರಿಕೆಟ್ ವಿಶ್ವಕಪ್​ ವಿಚಾರದಲ್ಲಿ ಹೀಗಾಗಬಾರದು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದು ಹೇಳಲಾಗಿದೆ.

ಸಿಆರ್​ಪಿಎಫ್​ ಯೋಧರ ಮೇಲಿನ ಉಗ್ರರ ದಾಳಿಗೆ ಪ್ರತೀಕಾರವಾಗಿ ದೇಶವೇ ಮೊದಲು ಎಂಬ ಘೋಷವಾಕ್ಯದಡಿ ಪಾಕ್​ ವಿರುದ್ಧದ ವಿಶ್ವಕಪ್​ ಪಂದ್ಯವನ್ನು ಬಹಿಷ್ಕರಿಸಬೇಕು ಹಾಗೂ ಟೂರ್ನಿಯಿಂದಲೇ ಪಾಕಿಸ್ತಾನವನ್ನು ನಿಷೇಧಿಸಬೇಕು ಎಂಬ ಕೂಗು ಭಾರತದಾದ್ಯಂತ ಬಲವಾಗಿ ಕೇಳಿಬರುತ್ತಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಶೂಟಿಂಗ್​ ವಿಶ್ವಕಪ್​ನಲ್ಲಿ ಭಾಗವಹಿಸಲು ಪಾಕ್​ ಶೂಟರ್ಸ್​ ವಿಸಾ ನಿರಾಕರಿಸುವುದರಿಂದ ಅಸಮಾಧಾನಗೊಂಡಿರುವ ಅಮಾನತಿಗಾಗಿ ಅಂತಾರಾಷ್ಟ್ರೀಯ ಓಲಂಪಿಕ್​ ಸಮಿತಿ ಭವಿಷ್ಯದಲ್ಲಿ ಭಾರತ ಆತಿಥ್ಯ ವಹಿಸುವ ಸ್ಪರ್ಧಾ ಕಾರ್ಯಕ್ರಮಗಳ ಅಮಾನತಿಗಾಗಿ ನಿರ್ಧರಿಸಿರುವುದರಿಂದ ಕ್ರಿಕೆಟ್ ವಿಶ್ವಕಪ್​ ವಿಚಾರದಲ್ಲಿ ಹೀಗಾಗಬಾರದು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದು ಹೇಳಲಾಗಿದೆ.

ಪಾಕ್​ ವಿರುದ್ಧ ಆಡದಿರುವ ನಿರ್ಧಾರ ಭಾರತಕ್ಕೇ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಹೆಚ್ಚು. ವಿಶ್ವದಿಂದ ಪಾಕಿಸ್ತಾನವನ್ನು ಪ್ರತ್ಯೇಕಿಸಲು ಹೋಗಿ ನಾವೇ ಏಕಾಂಗಿಯಾಗಬಾರದು. ಆದ್ದರಿಂದ ಸಮಗ್ರವಾಗಿ ವಿವೇಚಿಸಿ, ಸಾಧಕಬಾಧಕಗಳೆಲ್ಲವನ್ನೂ ತಾಳೆ ಹಾಕಿದ ನಂತರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳೋಣ ಎಂದು ಸರ್ಕಾರಿ ಮೂಲಗಳು ಸಲಹೆ ನೀಡಿವೆ ಎನ್ನಲಾಗಿದೆ.

ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಆಡದಿದ್ದರೆ, ನಾವು ಅವರಿಗೆ ವಾಕ್​ ಓವರ್​ ನೀಡಿದಂತಾಗುತ್ತದೆ. ಇದರಿಂದ ಅವರಿಗೆ 2 ಅಂಕ ಸಿಕ್ಕುವುದರಿಂದ ಭಾರತಕ್ಕೆ ನಷ್ಟವಾಗುತ್ತದೆ. ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡರೆ ನಮ್ಮ ವಿರುದ್ಧವೇ ಐಸಿಸಿ ಕ್ರಮಗೊಳ್ಳಬಹುದು. ಬಿಸಿಸಿಐ ಮೇಲೆ ನಿಷೇಧ ಹೇರಬಹುದು ಎಂಬುದು ಸೇರಿ ಭಾರತಕ್ಕೆ ಮುಂದಾಗಬಹುದಾದ ಅನನುಕೂಲಗಳ ಸರ್ಕಾರಿ ಮೂಲಗಳು ಎಚ್ಚರಿಕೆ ನೀಡಿವೆ.

ಇಂಗ್ಲೆಂಡ್​ನಲ್ಲಿ ನಡೆಯುವ ಈ ಬಾರಿಯ ವಿಶ್ವಕಪ್​ನಲ್ಲಿ ವೇಳಾಪಟ್ಟಿಯ ಪ್ರಕಾರ ಟೀಂ ಇಂಡಿಯಾ ಜೂನ್​ 16ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಬೇಕಿದೆ. (ಏಜೆನ್ಸೀಸ್​)

One Reply to “ವಿಶ್ವಕಪ್​ನಿಂದ ಪಾಕ್​ ಪ್ರತ್ಯೇಕಿಸಲು ಹೋಗಿ ನಾವೇ ಪ್ರತ್ಯೇಕವಾಗಬಾರದು: ನಿಷೇಧದ ಆಂತಕದಲ್ಲಿ ಬಿಸಿಸಿಐ”

  1. International Cricket is so heavily dependent on India nothing will happen if we do not play Pakistan. India must move a resolution seeking banning Pakistan from ICC. Even if the move fails still India would have made our intensions clear and during the discussion on the resolutions India can put forward many details of Pakistan terror which is bound to get wide publicity in all cricket playing nations and that itself will be a very big victory for India.

Comments are closed.