More

    ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ; ಜಸ್​ಪ್ರೀತ್ ಬುಮ್ರಾಗೆ ಪಾಲಿ ಉಮ್ರಿಗರ್ ಪ್ರಶಸ್ತಿ, ಶ್ರೀಕಾಂತ್, ಅಂಜುಂಗೆ ಸಿಕೆ ನಾಯ್ಡು ಗೌರವ

    ಮುಂಬೈ: ಭಾರತ ತಂಡದ ವೇಗಿ ಜಸ್​ಪ್ರೀತ್ ಬ್ರಮ್ರಾ 2018-19ನೇ ಸಾಲಿನ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಾಲಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬುಮ್ರಾ ನೀಡಿದ ನಿರ್ವಹಣೆಗಾಗಿ ಈ ಪ್ರಶಸ್ತಿ ಒಲಿದಿದೆ. ಭಾನುವಾರ ನಡೆದ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬುಮ್ರಾ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದರು. ಮಹಿಳಾ ವಿಭಾಗದಲ್ಲಿ ಪೂನಂ ಯಾದವ್ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಲೆಗ್ ಸ್ಪಿನ್ನರ್ ಪೂನಂ ಯಾದವ್ ಇತ್ತೀಚೆಗಷ್ಟೇ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದರು.

    ಶ್ರೀಕಾಂತ್-ಅಂಜುಂಗೆ ಸಿಕೆ ನಾಯ್ಡು ಪ್ರಶಸ್ತಿ; ಮಾಜಿ ನಾಯಕರಾದ ಕೃಷ್ಣಮಾಚಾರಿ ಶ್ರೀಕಾಂತ್ ಹಾಗೂ ಅಂಜುಂ ಚೋಪ್ರಾಗೆ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. 1983ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಶ್ರೀಕಾಂತ್, ಭಾರತ ತಂಡದ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ಆಯ್ಕೆ ಸಮಿತಿ ಮುಖ್ಯಸ್ಥರೂ ಆಗಿದ್ದರು. 2018-19ನೇ ಸಾಲಿನ ಇತರ ಪ್ರಶಸ್ತಿಗಳು: ಅತ್ಯುತ್ತಮ ಬೌಲರ್: ಬುಮ್ರಾ; ಅತ್ಯುತ್ತಮ ಬ್ಯಾಟ್ಸ್​ಮನ್: ಪೂಜಾರ; ಅಂತಾರಾಷ್ಟ್ರೀಯ ಪದಾರ್ಪಣೆ ಆಟಗಾರ: ಮಯಾಂಕ್ ಅಗರ್ವಾಲ್; ಪಾಲಿ ಉಮ್ರಿಗರ್ ಪ್ರಶಸ್ತಿ: ಬುಮ್ರಾ; ಬಿಸಿಸಿಐ ವಿಶೇಷ ಪ್ರಶಸ್ತಿ: ದಿಲೀಪ್ ದೋಷಿ; ಅತ್ಯುತ್ತಮ ತಂಡ: ವಿದರ್ಭ; ಅತ್ಯುತ್ತಮ ಅಂಪೈರ್: ವೀರೇಂದ್ರ ಶರ್ಮ ಮಹಿಳಾ ವಿಭಾಗ: ಅತ್ಯುತ್ತಮ ಬೌಲರ್: ಜೂಲನ್ ಗೋಸ್ವಾಮಿ; ಅತ್ಯುತ್ತಮ ಬ್ಯಾಟುಗಾರ್ತಿ: ಸ್ಮೃತಿ ಮಂದನಾ; ಅಂತಾರಾಷ್ಟ್ರೀಯ ಪದಾರ್ಪಣೆ ಆಟಗಾರ್ತಿ: ಶೆಫಾಲಿ; ಅತ್ಯುತ್ತಮ ಆಟಗಾರ್ತಿ: ಪೂನಂ ಯಾದವ್ .

    ಸೆಹ್ವಾಗ್ ಉಪನ್ಯಾಸ

    ಸಮಾರಂಭದಲ್ಲಿ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ 7ನೇ ಮನ್ಸೂರ್ ಅಲಿ ಖಾನ್ ಪಟೌಡಿ ಸ್ಮಾರಕ ಉಪನ್ಯಾಸ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts