4,611 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿದ ಬಿಬಿಎಂಪಿ

|ಗಿರೀಶ್ ಗರಗ

ಬೆಂಗಳೂರು: ರಾಜ್ಯ ಬಜೆಟ್​ನಲ್ಲಿ ಈ ಬಾರಿಯೂ ಬಿಬಿಎಂಪಿಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ. ವಿವಿಧ ಕಾಮಗಾರಿಗಳಿಗಾಗಿ 4,611 ಕೋಟಿ ರೂ. ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಮಂಡಿಸಲಾಗುತ್ತಿರುವ ರಾಜ್ಯ ಬಜೆಟ್​ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ಸಂಚಾರ ದಟ್ಟಣೆ ನಿವಾರಣೆ, ತ್ಯಾಜ್ಯ ನಿರ್ವಹಣೆ, ರಸ್ತೆ ಗುಂಡಿ ದುರಸ್ತಿ ಸೇರಿ ಇನ್ನಿತರ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. 4,611 ಕೋಟಿ ರೂ.ಗಳನ್ನು ಯಾವ ಕಾಮಗಾರಿಗಳಿಗೆ ಬಳಸಲಾಗುತ್ತದೆ ಎಂಬ ಪಟ್ಟಿ ನೀಡಲಾಗಿದೆ.

2 ವರ್ಷಕ್ಕೆ 7 ಸಾವಿರ ಕೋಟಿ ರೂ.: ಬಿಬಿಎಂಪಿ ಸಿದ್ಧಪಡಿಸಿರುವ ಪಟ್ಟಿಯಲ್ಲಿನ ಕಾಮಗಾರಿಗಳ ಅನುಷ್ಠಾನಕ್ಕೆ 2019-20 ಮತ್ತು 2020-21ನೇ ಸಾಲಿಗೆ 6,967 ಕೋಟಿ ರೂ. ಅವಶ್ಯಕತೆಯಿದೆ. ಅದರಲ್ಲಿ 2019-20ಕ್ಕೆ 4,611 ಕೋಟಿ ರೂ. ಮತ್ತು 2020-21ಕ್ಕೆ 2,355 ಕೋಟಿ ರೂ. ಅವಶ್ಯಕತೆಯಿದೆ ಎಂದು ತಿಳಿಸಲಾಗಿದೆ.

ರಸ್ತೆಗಾಗಿ 2,918 ಕೋಟಿ ರೂ.: ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ನಗರದ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಅತಿ ಹೆಚ್ಚು ಹಣ ವ್ಯಯಿಸಲಾಗುತ್ತದೆ. ರಸ್ತೆಗಳ ಅಭಿವೃದ್ಧಿ, ವೈಟ್ ಟಾಪಿಂಗ್ ರಸ್ತೆಗಳ ನಿರ್ವಣ, 110 ಹಳ್ಳಿಗಳಲ್ಲಿನ ರಸ್ತೆಗಳ ದುರಸ್ತಿ ಸೇರಿ ಇನ್ನಿತರ ರಸ್ತೆ ಕಾಮಗಾರಿಗಳಿಗಾಗಿಯೇ 2,918 ಕೋಟಿ ರೂ. ವ್ಯಯಿಸಲು ಯೋಜನೆ ರೂಪಿಸಲಾಗಿದೆ.

ಬಿಡಿಎ ಕಾಮಗಾರಿಗಳಿಗೆ 242.74 ಕೋಟಿ ರೂ.: ಬಿಡಿಎಗೆ ಹಸ್ತಾಂತರಿಸಲಾದ ಕಾಮಗಾರಿಗಳ ಅನುಷ್ಠಾನಕ್ಕಾಗಿ 242.74 ಕೋಟಿ ರೂ. ನೀಡುವಂತೆ ಮನವಿ ಮಾಡಲಾಗಿದೆ.

ಮೂರು ವರ್ಷಗಳಲ್ಲಿ 1,243 ಕಾಮಗಾರಿ

ಬಿಬಿಎಂಪಿ ಸಿದ್ಧಪಡಿಸಿರುವ ಕಾಮಗಾರಿಗಳ ಪಟ್ಟಿಯಂತೆ 2018-19ರಿಂದ 2020-21ರವರೆಗೆ ಒಟ್ಟು 9,467.69 ಕೋಟಿ ರೂ. ಕಾಮಗಾರಿ ಕೈಗೊಳ್ಳ

ಬೇಕಿದೆ. ಅದರಲ್ಲಿ ಪ್ರಸಕ್ತ ಸಾಲಿಗೆ 2,500 ಕೋಟಿ ರೂ. ಮೊತ್ತದ ಕಾಮಗಾರಿ ಗಳಿಗೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ಉಳಿದ 6,967 ಕೋಟಿ ರೂ. ಗಳನ್ನು ಬಜೆಟ್​ನಲ್ಲಿ ನಿಡುವಂತೆ ಮನವಿ ಮಾಡಲಾಗುತ್ತಿದೆ. ಅಲ್ಲದೆ, ಈ 3 ವರ್ಷಗಳಲ್ಲಿ ಒಟ್ಟು 1,243 ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿ ಗಳಿಗೆ ಸಂಬಂಧಿಸಿದಂತೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಬಜೆಟ್​ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ.

| ಗಂಗಾಂಬಿಕೆ ಮೇಯರ್

Leave a Reply

Your email address will not be published. Required fields are marked *