6 ಸಾವಿರ ರಸ್ತೆಗುಂಡಿ ಮುಚ್ಚಿದ ಬಿಬಿಎಂಪಿ

ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗಳಿಂದ ಉಂಟಾಗಿರುವ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಈವರೆಗೆ 6 ಸಾವಿರ ಗುಂಡಿಗಳನ್ನು ದುರಸ್ತಿಪಡಿಸಿದ್ದು, ಬಾಕಿ ಇರುವೆಡೆ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್, ಸೆ.2ರಂದು ಡಿಸಿಎಂ ರಸ್ತೆಗುಂಡಿ ಮುಚ್ಚಲು ಗಡುವು ನೀಡಿದ ವೇಳೆ 2,500 ಗುಂಡಿಗಳನ್ನು ಗರುತಿಸಲಾಗಿತ್ತು. ಆ ಬಳಿಕ ಸಾರ್ವಜನಿಕರಿಂದ ನಿತ್ಯ ‘ಗಮನ’ ಆ್ಯಪ್ ಮೂಲಕ ನಿತ್ಯ 1000 ದೂರುಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಸದ್ಯ ಪ್ರಮುಖ ರಸ್ತೆಗಳಲ್ಲಿದ್ದ ಇಂಜಿನಿಯರ್‌ಗಳು ಗುರುತಿಸಿದ್ದ 3 ಸಾವಿರ ಹಾಗೂ ನಾಗರಿಕರಿಂದ ಬಂದ ದೂರಿನ ಪೈಕಿ 3 ಸಾವಿರ ಗುಂಡಿಗಳು ಸೇರಿ ಒಟ್ಟು 6 ಸಾವಿರ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ನಾಲ್ಕು ಚದರ ಮೀ. ವಿಸ್ತೀಣದಷ್ಟು ರಸ್ತೆಯ ಮೇಲ್ಪದರ ಕಿತ್ತುಹೋಗಿರುವ 8 ಸಾವಿರ ಜಾಗಗಳಲ್ಲಿ ದುರಸ್ತಿ ಕೈಗೊಳ್ಳಲಾಗಿದೆ. ಜತೆಗೆ 9 ಸಾವಿರ ಬ್ಯಾಗ್‌ನಷ್ಟು ಹಾಟ್ ಮಿಕ್ಸ್ ಬ್ಯಾಗ್ ಬಳಸಿಕೊಂಡು 5 ಸಾವಿರ ಸಣ್ಣ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ ಎಲ್ಲ 224 ವಾರ್ಡ್‌ಗಳಲ್ಲಿ ರಸ್ತೆಗುಂಡಿ ಮುಚ್ಚಲು ತಲಾ 15 ಲಕ್ಷ ರೂ.ನಂತೆ 30 ಕೋಟಿ ರೂ. ಅನುದಾನ ನಿಗದಿ ಮಾಡಲಾಗಿದೆ. ರಸ್ತೆ ಮೂಲಸೌಕರ್ಯ ವಿಭಾಗದಡಿ ಕೈಗೆತ್ತಿಕೊಳ್ಳುವ ಗುಂಡಿ ಮುಚ್ಚುವ ಕಾರ್ಯಕ್ಕೆ 15 ಕೋಟಿ ರೂ. ಸೇರಿ ವಾರ್ಷಿಕ 45 ಕೋಟಿ ರೂ. ಹಣ ಲಭ್ಯವಿದೆ. ಈಗಾಗಲೇ 15 ಕೋಟಿ ರೂ. ಖರ್ಚಾಗಿದ್ದು, ಮುಂದಿನ ಏಪ್ರಿಲ್‌ವರೆಗೂ ಹೊಸದಾಗಿ ಸೃಷ್ಟಿಯಾಗುವ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಗತಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಹೈ ಡೆನ್ಸಿಟಿ ಕಾರಿಡಾರ್ ಹಾಗೂ ವರ್ತುಲ ರಸ್ತೆಯ ಮುಖ್ಯ ಕ್ಯಾರೇಜ್ ಪಥವನ್ನು ಮೆಟ್ರೋದವರು ದುರಸ್ತಿ ಪಡಿಸಲಿದ್ದಾರೆ. ಸರ್ವಿಸ್‌ರಸ್ತೆಯನ್ನು ಪಾಲಿಕೆಯೇ ನಿರ್ವಹಿಸಲಿದ್ದು, 240 ಕೋಟಿ ರೂ. ಮೊತ್ತದ ಟೆಂಡರ್ ಅಡಿಯಲ್ಲಿ ಈ ಕಾಮಗಾರಿಯನ್ನು ತೆಗೆದುಕೊಳ್ಳಲಾಗುವುದು ಎಂದರು.

ಕಸ ಟೆಂಡರ್ ರದ್ದು, ದೂರು ಬಂದಿಲ್ಲ:

ಆಡಳಿತ ವಿಕೇಂದ್ರೀಕರಣ ಹಿನ್ನೆಲೆಯಲ್ಲಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಪಾಲಿಕೆಯ ಆಯಾ ವಲಯದ ಆಯುಕ್ತರು ಮೇಲ್ವಿಚಾರಣೆ ನಡೆಸಿ ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತಾರೆ. ಅಕ್ರಮವಾಗಿದ್ದಲ್ಲಿ ಆಯಾ ವಲಯ ಆಯುಕ್ತರೇ ತನಿಖೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಸದ್ಯ ಈವರೆಗೆ ಗುತ್ತಿಗೆದಾರರ ಕಸದ ಟೆಂಡರ್ ರದ್ದುಪಡಿಸುವ ಬಗ್ಗೆ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ಗುತ್ತಿಗೆದಾರ ಚಲುವರಾಜ್ ಪ್ರಕರಣಕ್ಕೆ ಮುಖ್ಯ ಆಯುಕ್ತರು ಸಮಜಾಯಿಸಿ ನೀಡಿದರು.

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…