More

    ನಾಳೆ ಮತ ಎಣಿಕೆ ಕಾರ್ಯಕ್ಕೆ ಬಿಬಿಎಂಪಿ ಸಿದ್ಧತೆ: ತುಷಾರ್ ಗಿರಿನಾಥ್ ಮಾಹಿತಿ

    ಬೆಂಗಳೂರು: ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ನಗರದ ನಾಲ್ಕು ಕಡೆಗಳಲ್ಲಿ ಶನಿವಾರ ನಡೆಯಲಿದೆ. ಸ್ಟ್ರಾಂಗ್‌ರೂಂಗಳಲ್ಲಿ ಇವಿಎಂ ಮೆಷಿನ್‌ಗಳನ್ನು ಸುರಕ್ಷಿತವಾಗಿ ಇಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ಯಾರಾಮಿಲಿಟರಿ ಪಡೆ ಸೇರಿ ಪೋಲಿಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ಮಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

    ಮತ ಎಣಿಕೆ ಕೇಂದ್ರಗಳಲ್ಲಿ ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಸಿಬ್ಬಂದಿ 3 ವಿಧದಲ್ಲಿ ಇರಲಿದ್ದಾರೆ. ಪ್ರತಿ ಟೇಬಲ್ಗೆ ಮೈಕ್ರೋ ಅಬ್ಸರ್ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. ಪ್ರತಿ ಮತ ಎಣಿಕೆ ಕೊಠಡಿಗೆ 10 ರಿಂದ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 2 ಟೇಬಲ್ಗಳನ್ನು ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆಗೆ ಮೀಸಲಿಡಲಾಗಿದೆ. ಒಟ್ಟು 620 ಟೇಬಲ್ ಹಾಕಲಾಗಿದೆ. ಪ್ರತಿ ಟೇಬಲ್‌ಗೆ ಕ್ಯಾಮರಾ ಹಾಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆಯಿದೆ. ಮೊದಲು ಪೋಸ್ಟಲ್ ಬ್ಯಾಲೆಟ್‌ನಲ್ಲಿ ಬಿದ್ದಿರುವ ಮತಗಳ ಎಣಿಕೆ ಶುರು ಮಾಡಿದ ನಂತರ ಇವಿಎಂ ಮತಗಳನ್ನು ಎಣಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮುಖ್ಯ ಆಯುಕ್ತರು ಮಾಹಿತಿ ನೀಡಿದರು.

    ಇದನ್ನೂ ಓದಿ: ಇಸ್ಲಮಾಬಾದ್​ ಹೈಕೋರ್ಟ್​ನಿಂದ ಜಾಮೀನು ಮಂಜೂರು: ಇಮ್ರಾನ್​ ಖಾನ್​ಗೆ ತಾತ್ಕಾಲಿಕ ರಿಲೀಫ್​

    ಪ್ರವಾಹ ತಡೆಗೆ ಕ್ರಮ: ನಗರಾದ್ಯಂತ ಹಿಂದೆ 155 ಪ್ರವಾಹ ಸ್ಥಳಗಳನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ಪ್ರವಾಹ ತಡೆಗೆ ಅಗತ್ಯ ಕ್ರಮ ಕೈಗೊಂಡಿದ್ದ ಪರಿಣಾಮ ಈಗ 15-20 ಪ್ರವಾಹ ಸ್ಥಳಗಳಿವೆ. ಒತ್ತುವರಿ ತೆರವು ಸಂಬಂಧ ಕೋರ್ಟ್ ತಡೆ ನೀಡಿದ್ದರಿಂದ ಇದರ ಬಗ್ಗೆ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ಸಹ ಕೋರ್ಟ್‌ಗೆ ಒತ್ತುವರಿ ಜಾಗದ ಬಗ್ಗೆಯೂ ಮನವರಿಕೆ ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಪಾಲಿಕೆಗೆ ಸೇರಿದ್ದ ಜಾಗವನ್ನು ವಶಪಡಿಸಿಕೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ಮಾಹಿತಿ ವಿವರಿಸಿದರು.

    ಎಲ್ಲೆಲ್ಲಿ ಎಣಿಕೆ ಕೇಂದ್ರ?

    * ಬೆಂಗಳೂರು ಕೇಂದ್ರ: ಬಿಎಂಎಸ್ ಕಾಲೇಜು, ಕಹಳೆ ಬಂಡೆ ರಸ್ತೆ, ಗಾಂಧಿ ಬಜಾರ್, ಬಸವನಗುಡಿ.
    * ಬೆಂ. ದಕ್ಷಿಣ: ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು, 26ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ
    * ಬೆಂ. ಉತ್ತರ: ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ
    * ಬೆಂ. ನಗರ: ಸೇಂಟ್ ಜೋಸ್‌ಸೆ ಇಂಡಿಯನ್ ಹೈಸ್ಕೂಲ್, ವಿಠ್ಠಲ್ ಮಲ್ಯ ರಸ್ತೆ.

    VIDEO| ಕಾರನ್ನು ನಿಲ್ಲಿಸಲು ಹೋಗಿ ಸರಣಿ ಅಪಘಾತ ಮಾಡಿದ ಮಹಿಳೆ!

    VIDEO| ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ‘ದಿ ಕೇರಳ ಸ್ಟೋರಿ’ ಚಿತ್ರ ವೀಕ್ಷಿಸಿದ ಯುಪಿ ಸಿಎಂ!

    30 ಸಾವಿರ ರೂ. ಸಂಬಳ ಪಡೆಯುವ ಇಂಜಿನಿಯರ್ ನಿವಾಸದ ಮೇಲೆ ದಾಳಿ ಪ್ರಕರಣ; 20 ಕಾರು, 100 ನಾಯಿ, 30 ಲಕ್ಷದ ದುಬಾರಿ ಟಿವಿ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts