ಬಿಬಿಎಂಪಿ ಬಜೆಟ್​ 2019 | ಬೆಂಗಳೂರು ಅಭಿವೃದ್ಧಿಗೆ ಯೋಜನೆಗಳೇನು? ಇಲ್ಲಿದೆ ಮಾಹಿತಿ

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಆಡಳಿತವಿರುವ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ 2019-20ನೇ ಸಾಲಿನ ಬಜೆಟ್​ ಅನ್ನು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು ಇಂದು ಮಂಡಿಸಿದ್ದಾರೆ.

ಒಟ್ಟಾರೆ 10,691 ಕೋಟಿ ರೂಪಾಯಿಗಳ ಬಜೆಟ್​ ಇದಾಗಿದ್ದು, ರಾಜ್ಯ ಸರ್ಕಾರದಿಂದ ಸರ್ಕಾರದಿಂದ 3,606 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ನಿರೀಕ್ಷಿಸಲಾಗಿದೆ.

ಬಿಬಿಎಂಪಿ ಬಜೆಟ್​ ಮಂಡನೆಗೂ ಮೊದಲು ಹೇಮಲತಾ ಗೋಪಾಲಯ್ಯ ಅವರು ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಆದಿಶಕ್ತಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ನೇರವಾಗಿ ಬಿಬಿಎಂಪಿ ಸಭಾಂಗಣಕ್ಕೆ ಆಗಮಿಸಿದ ಅವರು 2019-20ನೇ ಸಾಲಿನ ಬಜೆಟ್​ ಮಂಡಿಸಿದರು.

ಬಜೆಟ್​ ಮುಖ್ಯಾಂಶಗಳು

ನಗರದ ಸ್ವಚ್ಛತೆಗೆ 375 ಕೋಟಿ ರೂ. ಅನುದಾನ
ಸಸಿ ನೆಡಲು 5 ಕೋಟಿ ರೂ.
ನರ್ಸರಿ ಸ್ಥಾಪನೆಗೆ 3 ಕೋಟಿ ರೂ.: ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರದ ಅನುದಾನದಿಂದ ವೇತನ. ಇದಕ್ಕಾಗಿ 375 ಕೋಟಿ ರೂ ಅನುದಾನ
ಕೆರೆಗಳ ನಿರ್ವಹಣೆಗೆ 25 ಕೋಟಿ ರೂ. ಮೀಸಲು
ಐಟಿ ಬಿಟಿ ಕಾರಿಡಾರ್ ಅಭಿವೃದ್ಧಿಗೆ 3 ಕೋಟಿ ರೂ.
ರಸ್ತೆ ಸುರಕ್ಷತೆಗಾಗಿ 142 ಕೋಟಿ ರೂ. ಮೀಸಲು
ಮೇಲ್ಸೇತುವೆ ನಿರ್ವಹಣೆಗೆ 50 ಕೋಟಿ ರೂ.
ಮೇಯರ್ ವಿವೇಚನೆಗೆ 175 ಕೋಟಿ ರೂ.
ಉಪಮೇಯರ್ ವಿವೇಚನೆಗೆ 72 ಕೋಟಿ ರೂ.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ವಿವೇಚನೆಗೆ 75 ಕೋಟಿ ರೂ. ಮೀಸಲು
ಅನಾಥ ಪ್ರಾಣಿಗಳ ರಕ್ಷಣೆ ಮತ್ತು ಬೀದಿ ನಾಯಿಗಳ ಎಬಿಸಿ ಚಿಕಿತ್ಸೆಗೆ 5 ಕೋಟಿ ರೂ.
ಪ್ರಾಣಿಗಳಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಆಂಬುಲೆನ್ಸ್​ ಸೇವೆ ಆರಂಭಿಸಲು 25 ಲಕ್ಷ ರೂ. ಬೊಮ್ಮನಹಳ್ಳಿಯ ಕೆಸಿಡಿಸಿ ಅಭಿವೃದ್ಧಿಗೆ 20 ಕೋಟಿ ರೂ.
ಮಂಡೂರು ಸುತ್ತಮುತ್ತಲಿನ ಅಭಿವೃದ್ಧಿಗೆ 20 ಕೋಟಿ ರೂ.
ಬೆಳ್ಳಹಳ್ಳಿ- ಮಿಟಗಾನಹಳ್ಳಿ ಕ್ವಾರಿ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ 20 ಕೋಟಿ ರೂ.
ಮಾವಳ್ಳಿಪುರ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ 20 ಕೋಟಿ ರೂ.
ದೊಡ್ಡಬಿದರಕಲ್ಲು ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ 15 ಕೋಟಿ ರೂ.
ಲಿಂಗದೀರನಹಳ್ಳಿ, ಸುಬ್ರಮಣ್ಯಪುರ ಕಣ್ಣಳ್ಳಿ, ಸಿಗೇಹಳ್ಳಿ ಡಂಪಿಂಗ್ ಯಾರ್ಡ್ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ 15 ಕೋಟಿ ರೂ.
ಸಂಜಯಗಾಂಧಿ ಆಸ್ಪತ್ರೆಗೆ 4 ಕೋಟಿ ರೂ.
ಜಯದೇಯ ಹೃದ್ರೋಗ 5 ಕೋಟಿ ರೂ.
ಕಿದ್ವಾಯಿ 4 ಕೋಟಿ ರೂ.
ರಾಜೀವ್ ಗಾಂಧಿ 2 ಕೋಟಿ ರೂ.
ಡಾ.ಶಿವಕುಮಾರ ಸ್ವಾಮೀಜಿ ಪ್ರತಿಮೆ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ಅನುದಾನ ರೂ.
ಸ್ವಾಮೀಜಿ ಹೆಸರಿನಲ್ಲಿ ಬಡವರ್ಗದ ವಿದ್ಯಾರ್ಥಿಗಳು, ವಿಕಲಚೇತನರಿಗೆ ಸೇವೆ ಒದಗಿಸುತ್ತಿರುವ ಶಿಕ್ಷಣ ಸಂಸ್ಥೆ, ಸಂಘಗಳಿಗೆ 25 ಲಕ್ಷ ರೂಪಾಯಿ ನಗದು ಪ್ರಶಸ್ತಿ.
ಸಾಂಸ್ಕೃತಿಕ ಹಬ್ಬ, ಕಡಲೆಕಾಯಿ ಪರಿಷೆ, ದಸರಾ ಹಬ್ಬಕ್ಕೆ 2.50 ಕೋಟಿ ರೂ.
ಗ್ರಾಮೀಣ ಕ್ರೀಡಾ ಚಟುವಟಿಕೆ, ಅಂಬೇಡ್ಕರ್ ದಿನಾಚರಣೆ, ಪೌರ ಕಾರ್ಮಿಕರ ದಿನಾಚರಣೆಗೆ 5.50 ಕೋಟಿ ರೂ.
ಕೆಂಪೇಗೌಡ ದಿನಾಚರಣೆಗೆ ಕೇಂದ್ರ ಮತ್ತು ವಾಡ್ ಮಟ್ಟದಲ್ಲಿ ಆಚರಿಸಲು 5 ಕೋಟಿ ರೂ.
ಕ್ರೀಡಾ ಪಟುಗಳು ದೇಶ, ವಿದೇಶಗಳಲ್ಲಿ ಭಾಗವಹಿಸಲು 1 ಕೋಟಿ ಅನುದಾನ
ಎಲ್ಲಾ ವಾರ್ಡ್ ಗಳಲ್ಲಿ ಮಹಿಳೆಯರು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರತಿ ವಾರ್ಡ್​ಗೆ 10 ಲಕ್ಷದಂತೆ ಒಟ್ಟು 19.80 ಕೋಟಿ ರೂ. ಮೀಸಲು
ಮಹಿಳೆಯರ ಆರೋಗ್ಯಕ್ಕೆ 3 ಕೋಟಿ ರೂ.
ಮಾರುಕಟ್ಟೆ ಕಟ್ಟಡಗಳ ನವೀಕರಣಕ್ಕೆ 5 ಕೋಟಿ ರೂ.
ನಿರಾಶ್ರಿತರ ತಂಗುದಾಣಕ್ಕೆ 1 ಕೋಟಿ ಮೀಸಲು ರೂ.
ದಿವ್ಯಾಂಗ ಚೇತನ ಕಲ್ಯಾಣ ಕಾರ್ಯಕ್ರಮಕ್ಕೆ 75 ಕೋಟಿ ರೂ. ಮೀಸಲು
ಅಂಗವಿಕಲರಿಗೆ ದ್ವಿಚಕ್ರ ವಾಹನಕ್ಕೆ 10 ಕೋಟಿ ರೂ. ಮೀಸಲು
ಮಂಗಳ ಮುಖಿಯರಿಗೆ ವಿಶೇಷ ಯೋಜನೆಗೆ 1 ಕೋಟಿ ರೂ. ಅನುದಾನ
ಮಳೆನೀರು ಕೊಯ್ಲು ಇಂಗು ಗುಂಡಿಗಳ ಸ್ಥಾಪನೆಗೆ 5 ಕೋಟಿ ರೂ. ಮೀಸಲು
ಪರಿಶಿಷ್ಟ ಜಾತಿ ಪಂಗಡದವರಿಗೆ 100 ಕೋಟಿ ರೂ. ಮೀಸಲು
ಒಂಟಿ ಮನೆ ಯೋಜನೆಗೆ 10 ಕೋಟಿ ರೂ.
ಅನ್ನಪೂರ್ಣೇಶ್ವರಿ ಯೋಜನೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 4 ಸಂಚಾರಿ ಕ್ಯಾಂಟೀನ್
ಬಡವರ ಬಂಧು ಕಾರ್ಯಕ್ರಮಕ್ಕೆ 4 ಕೋಟಿ ರೂ. ಮೀಸಲು
ಪಾಲಿಕೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ 150 ಕೋಟಿ ರೂ.
ಪಾಲಿಕೆ ಶಾಲೆಗೆ ಕಲಿತು ಎಸ್ಎಸ್ಎಲ್ಸಿ ಅತಿ ಹೆಚ್ಚು ಅಂಕ ಪಡೆದ 150 ವಿದ್ಯಾರ್ಥಿಗಳಿಗೆ ತಲಾ 35000 ಪ್ರೋತ್ಸಾಹಧನ
ಪಿಯುಸಿ 100 ವಿದ್ಯಾರ್ಥಿಗಳಿಗೆ 35 ಸಾವಿರ ನಗದು ಬಹುಮಾನ
ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. ಮೀಸಲು
ಬಡ ಹೃದಯ ರೋಗಿಗಳಿಗೆ ಉಚಿತ ಸ್ಟಂಟ್ ಅವಳಡಿಕೆಗೆ 4 ಕೋಟಿ ರೂ. ಅನುದಾನ
ಬೈಕ್ ಆಂಬುಲೆನ್ಸ್ ಖರೀದಿಗೆ 2 ಕೋಟಿ ರೂ. ಮೀಸಲು
ಕಿದ್ವಾಯಿ ಆಸ್ಪತ್ರೆಯ ಪಾಲಿಕೆಯ ಧರ್ಮಶಾಲೆಗೆ 5 ಕೋಟಿ ರೂ.
ತಾಯಿ ಮಡಿಲು ಯೋಜನೆಗೆ 1.50 ಕೋಟಿ ರೂ. ಅನುದಾನ
ಕ್ಯಾನ್ಸರ್ ಕಾಯಿಲೆ ಪತ್ತೆಹಚ್ಚಲು ಸಂಚಾರಿ ಬಸ್ ಖರೀದಿಧಿಗೆ ಮೂರು ಕೋಟಿ ರೂ.
ಕ್ಯಾನ್ಸರ್ ಚಿಕಿತ್ಸೆ ವಿಭಾಗ ಆರಂಭಕ್ಕೆ 50 ಲಕ್ಷ ರೂ.
400 ಸ್ಥಳಗಳಲ್ಲಿ ಉಚಿತ ವೈಫೈ
ಪಾಲಿಕೆಯ ಸದಸ್ಯರ ವೈದ್ಯಕೀಯ ಅನುದಾನ ನಾಲ್ಕು ಲಕ್ಷದಿಂದ ಆರು ಲಕ್ಷ ಏರಿಕೆ.
ಪಾಲಿಕೆ ಎಂಟು ವಲಯಗಳಲ್ಲಿ ಟೋಟಲ್ ಸ್ಟೇಷನ್ ಸರ್ವೆಗೆ ಕ್ರಮ.
ಹಾಲಿ ಮತ್ತು ನಿವೃತ್ತ ಸೈನಿಕರಿಗೆ ಶೇಕಡಾ ನೂರರಷ್ಟು ತೆರಿಗೆ ವಿನಾಯಿತಿ
ಆಸ್ತಿ ತೆರಿಗೆಯಿಂದ 3317 ಆದಾಯ ನಿರೀಕ್ಷೆ
ಆದಾಯ ಹೆಚ್ಚಿಸಲು ಜಾಗೃತದಳ ಸ್ಥಾಪನೆ.
ಪ್ರತಿ ವಾರ್ಡ್ ನ ಎಸಿ-ಎಸ್ಟಿ ಮತ್ತು ಸ್ಲಂ ಬೋರ್ಡ್ ಅಭಿವೃದ್ಧಿಗೆ 30 ಕೋಟಿ ರೂ.
ಪೌರಕಾರ್ಮಿಕರ ಬಿಸಿ ಊಟಕ್ಕೆ 12 ಕೋಟಿ ರೂ.
ಪ್ರತಿ ವಾರ್ಡನ ಎಸ್ಸಿ, ಎಸ್ ಟಿ ಸ್ಲಂ ಬೋರ್ಡ್ ಅಭಿವೃದ್ದಿಗೆ ೩೦ ಕೋಟಿ ರೂ.

ಇನ್ನು ಬಜೆಟ್​ ಬಗ್ಗೆ ಪ್ರತಿಪಕ್ಷ ನಾಯಕ, ಬಿಜೆಪಿ ಸದಸ್ಯ ಪದ್ಮನಾಭ ರೆಡ್ಡಿ ಟೀಕೆ ಮಾಡಿದ್ದಾರೆ. ಇದು ಜನ ವಿರೋಧಿ ಬಜೆಟ್​ ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್​, ಜೆಡಿಎಸ್ ಸದಸ್ಯರಿರುವ ವಾರ್ಡ್​ಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಲಿಕೆಯ ವೆಚ್ಚ

ವೇತನಕ್ಕೆ 7 ಕೋಟಿ ರೂ.
ಬೀದಿ ದೀಪ ವಿದ್ಯುತ್ ಪಾವತಿಗೆ 257 ಕೋಟಿ ರೂ.
ಆಡಳಿತ ವೆಚ್ಚಕ್ಕೆ 247 ಕೋಟಿ ರೂ.
ಸಾಲ, ಬಡ್ಡಿ ಪಾವತಿ 392 ಕೋಟಿ ರೂ.
ಘನತ್ಯಾಜ್ಯ ನಿರ್ವಹಣೆಗೆ 1186 ಕೋಟಿ ರೂ.
ತೋಟಗಾರಿಕೆ, ಕೆರೆ ಅಭಿವೃದ್ಧಿ 356 ಕೋಟಿ ರೂ.
ಆರೋಗ್ಯ, ಶಿಕ್ಷಣಕ್ಕೆ 231 ಕೋಟಿ ರೂ.
ಕಲ್ಯಾಣ ಕಾರ್ಯಕ್ರಮಕ್ಕೆ 1071 ಕೋಟಿ ರೂ.
ನಿರ್ವಹಣೆ ಕೆಲಸ 851 ಕೋಟಿ ರೂ.
ಅಭಿವೃದ್ಧಿ ಕಾಮಗಾರಿಗೆ 4945 ಕೋಟಿ ರೂ.
ಠೇವಣಿ, ಮರುಪಾವತಿಗೆ 351 ಕೋಟಿ ರೂ.
ಒಟ್ಟು ಬಜಟ್ ಗಾತ್ರ 10688.63 ಕೋಟಿ ರೂ.

ಬೀದಿ ದೀಪ ವಿದ್ಯುತ್ ಪಾವತಿಗೆ 257 ಕೋಟಿ ರೂ.
ಆಡಳಿತ ವೆಚ್ಚಕ್ಕೆ 247 ಕೋಟಿ ರೂ.
ಸಾಲ, ಬಡ್ಡಿ ಪಾವತಿ 392 ಕೋಟಿ ರೂ.
ಘನತ್ಯಾಜ್ಯ ನಿರ್ವಹಣೆಗೆ 1186 ಕೋಟಿ ರೂ.
ತೋಟಗಾರಿಕೆ, ಕೆರೆ ಅಭಿವೃದ್ಧಿ 356 ಕೋಟಿ ರೂ.
ಆರೋಗ್ಯ, ಶಿಕ್ಷಣಕ್ಕೆ 231 ಕೋಟಿ ರೂ.
ಕಲ್ಯಾಣ ಕಾರ್ಯಕ್ರಮಕ್ಕೆ 1071 ಕೋಟಿ ರೂ.
ನಿರ್ವಹಣೆ ಕೆಲಸ 851 ಕೋಟಿ ರೂ.
ಅಭಿವೃದ್ಧಿ ಕಾಮಗಾರಿಗೆ 4945 ಕೋಟಿ ರೂ.
ಠೇವಣಿ, ಮರುಪಾವತಿಗೆ 351 ಕೋಟಿ ರೂ.
ಒಟ್ಟು ಬಜಟ್ ಗಾತ್ರ 10688.63 ಕೋಟಿ ರೂ.