ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 11 ಪ್ರಾರಂಭಗೊಂಡು ಇಂದಿಗೆ ಒಂದು ತಿಂಗಳು ಕಳೆದಿದ್ದು, ಮನೆಯಲ್ಲಿ ಸ್ಪರ್ಧಿಗಳ ಆಟದ ಜಗ್ಗಾಟ ಜೋರಾಗಿದೆ. ಕಳೆದ ವಾರ ನಟ, ನಿರೂಪಕ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ವಾರಾಂತ್ಯ ಸಾಗಿತ್ತು. ಆದರೆ, ಐದನೇ ವಾರಕ್ಕೆ ವೇದಿಕೆಗೆ ಹಾಜರಾದ ಕಿಚ್ಚ ಸುದೀಪ್, ತಾಯಿಯ ಅಗಲಿಕೆಯ ನೋವಿದ್ದರೂ, ಭಾರವಾದ ಮನಸ್ಸಿನಿಂದಲೇ ವಾರದ ಕಥೆ ಕಿಚ್ಚನ ಜತೆ ಸಂಚಿಕೆಗೆ ಆಗಮಿಸಿದರು. ಈ ಮಧ್ಯೆ ಇಂದು ನಡೆದ ಸೂಪರ್ ಸಂಡೆ ವಿತ್ ಸುದೀಪ ಸಂಚಿಕೆಯಲ್ಲಿ ಐದನೇ ವಾರದಂದು ಮನೆಯಿಂದ ಹೊರಬಿದ್ದವರು ಯಾರು ಎಂಬುದನ್ನು ಅಧಿಕೃತವಾಗಿ ಘೋಷಿಸಿದರು.
ಇದನ್ನೂ ಓದಿ: ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ವಿಚಿತ್ರ ಶಬ್ದ! ಇಣುಕಿ ನೋಡಿದ ಕುಟುಂಬಸ್ಥರಿಗೆ ಕಾದಿತ್ತು ಬೆಚ್ಚಿಬೀಳುವ ಸಂಗತಿ | Well
ವಾರದ ಕಥೆ ಕಿಚ್ಚನ ಜತೆ ಸಂಚಿಕೆಯ ಆರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ತಂಡದ ಸದಸ್ಯರು ಸುದೀಪ್ ಅವರ ತಾಯಿಗೆ ಹಾಡಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ವಿಷಯಕ್ಕೆ ಧನ್ಯವಾದ ತಿಳಿಸಿದ ಸುದೀಪ್ ಅವರು, ತದನಂತರ ಎಂದಿನಂತೆ ಕಾರ್ಯಕ್ರಮ ನಡೆಸಿಕೊಟ್ಟರು. ಶನಿವಾರ ಮನೆ ಮಂದಿಗೆಲ್ಲಾ ತಮ್ಮ ಖಡಕ್ ಮಾತಿನಿಂದಲೇ ಅವರವರ ತಪ್ಪುಗಳನ್ನು ಎತ್ತಿಹಿಡಿದ ಕಿಚ್ಚ, ಅಲ್ಲಲ್ಲಿ ಕೆಲವರಿಗೆ ಬುದ್ಧಿ ಹೇಳಿ, ತಿದ್ದಿ ತೀಡಿದರು.
ಇನ್ನು ಭಾನುವಾರದ ಸಂಚಿಕೆಯಲ್ಲಿ ತಮಾಷೆ, ಮೋಜು-ಮಸ್ತಿಗೆ ಹೆಚ್ಚು ಸಮಯ ಕೊಟ್ಟ ಸುದೀಪ್, ಧನರಾಜ್-ಮಂಜು ಕಾಂಬಿನೇಷನ್ನಲ್ಲಿ ಹಾಸ್ಯ ಅರಳಿಸಿದ್ದು ವೀಕ್ಷಕರಲ್ಲಿ ನಗೆ ತರಿಸಿತು. ಈ ನಗುವಿನ ಸಿಹಿಯ ಜತೆಗೆ ಸಂಚಿಕೆಯ ಕಡೆಯಲ್ಲಿ ಕಹಿ ಉಣಿಸಿದ ಕಿಚ್ಚ, ಮಾನಸಾ ಅವರು ಎಲಿಮಿನೇಟ್ ಆಗಿದ್ದೀರಾ ಎಂದು ತಿಳಿಸಿದರು.
ಪೆಟ್ರೋಲ್ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ | Petrol