ಬೆಂಗಳೂರು: ನಿನ್ನೆ ನಡೆದ ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ ಸಂಚಿಕೆಯಲ್ಲಿ ತಮಾಷೆ, ಮೋಜು-ಮಸ್ತಿಯೊಂದಿಗೆ ನಗುವಿನ ಸಿಹಿ ಹಂಚಿದ ಕಿಚ್ಚ ಸುದೀಪ್, ಕಾರ್ಯಕ್ರಮದ ಕಡೆಯಲ್ಲಿ ಮಾನಸಾ ಅವರು ಎಲಿಮಿನೇಟ್ ಆಗಿದ್ದೀರಾ ಎಂದು ಹೇಳುವ ಮೂಲಕ ಮನೆ ಮಂದಿಗೆಲ್ಲಾ ಕಹಿ ಉಣಿಸಿದರು. ಇದಾದ ಬೆನ್ನಲ್ಲೇ ಆರನೇ ವಾರದ ಮೊದಲ ದಿನಕ್ಕೆ ಕಾಲಿಟ್ಟ ಸ್ಪರ್ಧಿಗಳಿಗೆ ಬಿಗ್ ಬಾಸ್ (BBKS11) ಹೊಸ ಟಾಸ್ಕ್ವೊಂದನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ವಿಚಾರಣೆಗೆ ಹಾಜರಾಗುವಂತೆ ಸಿಎಂಗೆ ಲೋಕಾಯುಕ್ತ ನೋಟಿಸ್!
ಒಂದೆಡೆ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ಹನುಮಂತು, ಮನೆಯೊಳಗಿನ ಸದಸ್ಯರ ಹುಬ್ಬೇರುವಂತೆ ಆಟವಾಡುತ್ತಿದ್ದು, ಅಚ್ಚರಿ ಎಂಬಂತೆ ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಭರ್ಜರಿ ಪೈಪೋಟಿಗೆ ಇಳಿದಿದ್ದಾರೆ. ಇದು ಬಿಗ್ ಸ್ಪರ್ಧಿಗಳಿಗೆ ಒಂದು ರೀತಿ ಸವಾಲಾಗಿದ್ದರು ಸಹ ತಮ್ಮ ಗುರುತಿಸುವಿಕೆ ಹೇಗೆ? ಎಂಬ ಸ್ಪಷ್ಟತೆ ಕಂಡುಕೊಳ್ಳುವುದೇ ಬಹಳ ಕಷ್ಟಕರ ಎನ್ನುವಂತೆ ಕಾಣಿಸುತ್ತಿದೆ. ಈ ಮಧ್ಯೆ ಪಗಡೆ ಆಟದಲ್ಲಿ ಉರುಳುವ ಕಾಯಿಗಿಂತ, ಮಾತಿನ ಭರಾಟೆ ಇಬ್ಬರ ನಡುವೆ ಕಿಡಿ ಹೊತ್ತಿಸಿದೆ.
ಪಗಡೆ ಆಟದ ಮಹಿಮೆಯಲ್ಲಿ ಚೂರಾಯ್ತಾ ಮನಸ್ಸುಗಳು?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/QttgRNJa8Z— Colors Kannada (@ColorsKannada) November 4, 2024
ತಮಗೆ ಸಿಕ್ಕ ಅವಕಾಶದಲ್ಲಿ ಎದುರಾಳಿ ತಂಡದಿಂದ ಗೌತಮಿಯನ್ನು ಪಾರು ಮಾಡಿದ ಚೈತ್ರಾಗೆ ಅನುಷಾ ನಾವ್ಯಾರು ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ವಿಷಯಕ್ಕೆ ಇಬ್ಬರ ಮಧ್ಯೆ ವಾಗ್ವಾದ ಜೋರಾಗಿದ್ದು, ಮಾತು ಮಿತಿಮೀರಿ ಏಕವಚನಕ್ಕೆ ತಿರುಗಿದೆ. ಸಂಚಿಕೆಯ ಪ್ರೋಮೋ ಇದೀಗ ಹೊರಬಿದ್ದಿದ್ದು, ಇಬ್ಬರ ನಡುವಿನ ಜಗಳದ ಹಿಂದಿರುವ ಕಾರಣವೇನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಪೆಟ್ರೋಲ್ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ | Petrol