BBK11: ‘ಬಿಗ್’ ಮನೆಯಿಂದ ಹೊರಬಂದ ಬೆನ್ನಲ್ಲೇ ಶೋಭಾ ಶೆಟ್ಟಿ ಪೋಸ್ಟ್​! ಬರಹದಲ್ಲಿ ಹೊರಬಿತ್ತು ನಟಿಯ ಮನಸ್ಸಿನ ಮಾತು

blank

ಬೆಂಗಳೂರು: ಕನ್ನಡದ ಬಿಗ್ ಬಾಸ್​ ಸೀಸನ್​ 11ರ 50 ದಿನಗಳ ಸಂಭ್ರಮದ ಸಮಯಕ್ಕೆ ಸರಿಯಾಗಿ ಮನೆಯೊಳಗೆ ವೈಲ್ಡ್​ಕಾರ್ಡ್​ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ, ಮೊದಲ ದಿನ ಇತರೆ ಸ್ಪರ್ಧಿಗಳಲ್ಲಿ ಹುಟ್ಟಿಸಿದ ನಡುಕ, ಎರಡು-ಮೂರು ದಿನಗಳ ನಂತರ ಉಳಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ಎಡವಿದರು. ತೆಲುಗು ಬಿಗ್​ ಬಾಸ್​ನಲ್ಲಿ ಕನ್ನಡದ ಹುಡುಗಿ ಮಾಡಿದ್ದ ಸದ್ದು ಅಂದು ಸಖತ್​ ವೈರಲ್ ಆಗಿತ್ತು. ಕನ್ನಡ ಭಾಷೆಯ ಕಂಪನ್ನು ತೆಲುಗು ನೆಲದಲ್ಲಿ ಪಸರಿಸಿದ ಶೋಭಾ, ಕನ್ನಡದ ಬಿಗ್​ ಬಾಸ್​ನಲ್ಲಿಯೂ ಸಖತ್​ ಸೌಂಡ್​ ಮಾಡುತ್ತಾರೆ ಎಂದೇ ವೀಕ್ಷಕರು ನಿರೀಕ್ಷಿಸಿದ್ದರು. ಆದರೆ, ಅವರ ಸ್ವಂತ ನಿರ್ಧಾರವೇ ಇಂದು ಅವರ ಪಯಣಕ್ಕೆ ಬ್ರೇಕ್ ನೀಡಿರುವುದು ಸದ್ಯ ಅಚ್ಚರಿ ಸಂಗತಿ.

ಇದನ್ನೂ ಓದಿ: ಚಂದ್ರಶೇಖರನಾಥ ಸ್ವಾಮೀಜಿ ಹೇಳಿದಂತೆ ಬಿಜೆಪಿಗರು ಹೇಳಲಿ; ಸಚಿವೆ ಹೆಬ್ಬಾಳ್ಕರ್ ಸವಾಲು

ಭಾನುವಾರದ ಸಂಚಿಕೆಯಲ್ಲಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿ ಹಾಟ್​ಸೀಟ್​ನಲ್ಲಿ ಕುಳಿತಿದ್ದ ಶೋಭಾ ಶೆಟ್ಟಿಯನ್ನು ಜನರು ವೋಟ್ ಮಾಡಿ ಉಳಿಸಿದ್ದರು. ಈ ವಿಷಯವನ್ನು ತಿಳಿಸಿ, ಅವರನ್ನು ಸಂತೋಷಪಡಿಸಿದ ನಟ ಕಿಚ್ಚ ಸುದೀಪ್​ ಅವರಿಗೆ ಕಾಡಿದ್ದು ಅಚ್ಚರಿ ಹಾಗೂ ಅತೀವ ಬೇಸರ. ನನಗೆ ಮನೆಯಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಕುಗ್ಗಿದ ಶೋಭಾ ಶೆಟ್ಟಿ, ನಾನೇ ಮನೆಯಿಂದ ಹೊರಹೋಗ್ತೀನಿ ಎಂದು ಹೇಳಿದರು. ಈ ಮಾತುಗಳಿಂದ ಕೆರಳಿದ ಸುದೀಪ್, ಮೊದಲಿಗೆ ಒಂದಷ್ಟು ಬುದ್ಧಿ ಮಾತುಗಳನ್ನು ತಿಳಿ ಹೇಳಿ, ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇ ಆದರೂ ಕೊನೆಯಲ್ಲಿ ಅದು ವಿಫಲವಾಯಿತು.

ಕಡೆಗೂ ಶೋಭಾ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಸುದೀಪ್, ಮನೆಯಿಂದ ಹೊರಡಿ ಎಂದು ಹೇಳಿ, ಭಾನುವಾರದ ಸಂಚಿಕೆ ಅಲ್ಲಿಗೆ ಮುಗಿಸಿದರು. ಸದ್ಯ ಬಿಗ್ ಮನೆಯಿಂದ ಹೊರಬಂದಿರುವ ನಟಿ ಶೋಭಾ, ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಬರಹದ ಮುಖೇನ ಕನ್ನಡಿಗರೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಹೇಳಿಕೊಂಡ ವಿಷಯವೇನು? ಕನ್ನಡಿಗರಿಗೆ ತಲುಪಿಸಿದ ಮಾತೇನು ಎಂಬುದರ ವಿವರ ಹೀಗಿದೆ ನೋಡಿ.

ಮನದ ಮಾತು

“ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಇಲ್ಲಿಗೆ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಾಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ! ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು .ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ನಿಮ್ಮ ಪ್ರೀತಿಯ, ಶೋಭಾ ಶೆಟ್ಟಿ” ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಬಲವಂತದ ಮದುವೆ, ಐಟಂ ಸಾಂಗ್​ಗಳಿಂದಲೇ ಜೀವನ​; ‘ಸಿಲ್ಕ್’​ ಆಗಿ ಮಿಂಚಿದ ಸ್ಮಿತಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ!

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…