ಬೆಂಗಳೂರು: 5ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನ (ಪಿಬಿಎಲ್) ಫೈನಲ್ ಸೇರಿದಂತೆ ಅಂತಿಮ ಚರಣದ ಆತಿಥ್ಯ ಬೆಂಗಳೂರಿಗೆ ಕೈತಪು್ಪವ ಸಾಧ್ಯತೆಗಳಿವೆ. ಫೆಬ್ರವರಿ 5 ರಿಂದ 9 ರವರೆಗೆ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಚರಣ ನಿಗದಿಯಾಗಿವೆ. ಈ ವೇಳೆ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ವತಿಯಿಂದ ಮಿನಿ ಒಲಿಂಪಿಕ್ಸ್ ಆಯೋಜಿಸಲಾಗುತ್ತಿದ್ದು, ದಿನಾಂಕ ಹೊಂದಾಣಿಕೆಯಿಂದಾಗಿ ಪಿಬಿಎಲ್ ಚರಣ ಸಿಲಿಕಾನ್ ಸಿಟಿಯ ಕೈತಪು್ಪವ ಸಾಧ್ಯತೆಗಳಿವೆ. ಈ ಸಂಬಂಧ ಕೆಒಎ ಹಾಗೂ ಪಿಬಿಎಲ್ ಫ್ರಾಂಚೈಸಿ ಬೆಂಗಳೂರು ರ್ಯಾಪ್ಟರ್ಸ್ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಶುಕ್ರವಾರ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಗಳಿವೆ.
ಕೆಒಎ ವತಿಯಿಂದ ಫೆಬ್ರವರಿ 3 ರಿಂದ 9 ರವರೆಗೆ ಕಂಠೀರವ ಹೊರಾಂಗಣ ಹಾಗೂ ಒಳಾಂಗಣ ಸ್ಟೇಡಿಯಂಗಳಲ್ಲಿ ರಾಜ್ಯದ ಚೊಚ್ಚಲ ಮಿನಿ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಸುಮಾರು 18 ಕ್ರೀಡೆಗಳು ನಡೆಯುತ್ತಿದ್ದು, ಎರಡು ಸ್ಟೇಡಿಯಂಗಳಲ್ಲಿ ಸ್ಪರ್ಧೆಗಳು ನಿಗದಿಯಾಗಿವೆ. ‘ಪಿಬಿಎಲ್ ಆಯೋಜಕರು ಇದುವರೆಗೂ ಸ್ಟೇಡಿಯಂ ಬುಕ್ ಮಾಡಿಲ್ಲ. ಎರಡು ಸ್ಟೇಡಿಯಂಗಳಲ್ಲಿ ಮಿನಿ ಒಲಿಂಪಿಕ್ ಕ್ರೀಡಾಕೂಟದ ಸ್ಪರ್ಧೆಗಳು ನಿಗದಿಯಾಗಿವೆ. ಏಕಕಾಲದಲ್ಲಿ ಎರಡು ಕ್ರೀಡಾ ಸ್ಪರ್ಧೆಗಳು ನಡೆಸಲು ಸಾಧ್ಯವಾಗುವುದಿಲ್ಲ’ ಎಂದು ಕ್ರೀಡಾ ಇಲಾಖೆಯ ಮೂಲಗಳು ತಿಳಿಸಿವೆ. ಕ್ರೀಡಾ ಇಲಾಖೆ ಕೆಲ ಧೋರಣೆಗಳಿಂದಾಗಿ ಪ್ರೊ ಕಬಡ್ಡಿ ಲೀಗ್ನ ಬೆಂಗಳೂರು ಚರಣದ ಪಂದ್ಯಗಳು ಎರಡು ವರ್ಷ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದವು.-ಪಿಟಿಐ/ಏಜೆನ್ಸೀಸ್
ಫೈನಲ್ಗೆ ಹೈದರಾಬಾದ್ಗೆ ಶಿಫ್ಟ್ ?
ಒಂದು ವೇಳೆ ಸೆಮಿಫೈನಲ್ ಹಾಗೂ ಫೈನಲ್ ಬೆಂಗಳೂರು ಕೈತಪ್ಪಿದರೆ ಹೈದರಾಬಾದ್ಗೆ ಸ್ಥಳಾಂತರವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರಿಂದ ಸತತ 2ನೇ ಬಾರಿಗೆ ಫೈನಲ್ ಆಯೋಜಿಸುವ ಅವಕಾಶ ಬೆಂಗಳೂರು ಕೈತಪ್ಪಲಿದೆ. ವಿಶ್ವ ನಂ.1 ಆಟಗಾರ್ತಿ ತೈ ಜು ಯಿಂಗ್, ವಿಶ್ವ ಚಾಂಪಿಯನ್ ಪಿವಿ ಸಿಂಧುರಂಥ ಸ್ಟಾರ್ ಆಟಗಾರ್ತಿಯರ ಆಟ ನೋಡುವ ಅವಕಾಶದಿಂದ ಸಿಲಿಕಾನ್ ಸಿಟಿ ಮಂದಿ ವಂಚಿತರಾಗಲಿದ್ದಾರೆ. ಕಳೆದ ಬಾರಿ ನಡೆದ 4ನೇ ಆವೃತ್ತಿಯ ಅಂತಿಮ ಚರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸಾಕ್ಷಿಯಾಗಿದ್ದರು.
20ರಂದು ಚೆನ್ನೈನಲ್ಲಿ ಚಾಲನೆ
5ನೇ ಆವೃತ್ತಿಯ ಪಿಬಿಎಲ್ಗೆ ಜನವರಿ 20 ರಂದು ಚೆನ್ನೈನಲ್ಲಿ ಚಾಲನೆ ಸಿಗಲಿದೆ. ಎರಡು ವರ್ಷಗಳ ಬಳಿಕ ಚೆನ್ನೈನಲ್ಲಿ ಲೀಗ್ ನಡೆಯುತ್ತಿದ್ದು, 21 ದಿನಗಳ ಕಾಲ 4 ನಗರಗಳಲ್ಲಿ ಲೀಗ್ ಆಯೋಜಿಸಲಾಗುತ್ತಿದೆ. ಈ ಬಾರಿಯ ಲೀಗ್ನಲ್ಲಿ 5 ಮಂದಿ ಒಲಿಂಪಿಕ್ ಪದಕ ವಿಜೇತರು ಹಾಗೂ 15 ಮಂದಿ ವಿಶ್ವ ಚಾಂಪಿಯನ್ಷಿಪ್ ಪದಕ ವಿಜೇತರು ಪಾಲ್ಗೊಳ್ಳುತ್ತಿದ್ದಾರೆ. ಮೊದಲ ಆವೃತ್ತಿಯಲ್ಲಿ ಹೈದರಾಬಾದ್ ತಂಡದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಹಾಗೂ ವಿಶ್ವ ನಂ.1 ಬೆಂಗಳೂರು ರ್ಯಾಪ್ಟರ್ಸ್ ತಂಡದ ತೈ ಜು ಯಿಂಗ್ ಎದುರಾಗಲಿದ್ದಾರೆ.
ಕೆಒಎ ಜತೆಗೆ ಶುಕ್ರವಾರ ಸಭೆ ಇದೆ. ಬಳಿಕವಷ್ಟೇ ಅಂತಿಮ ತೀರ್ಮಾನ ಹೊರಬೀಳಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಫೈನಲ್ ನಡೆಸುವುದು ಕಷ್ಟ. ಬದಲಿ ದಿನಾಂಕವನ್ನು ಪರಿಗಣಿಸಲಾಗುತ್ತಿದೆ. ಕನಿಷ್ಠ ಬೆಂಗಳೂರು ಚರಣದ ಪಂದ್ಯಗಳನ್ನಾದರೂ ಆಡಿಸಲು ಪ್ರಯತ್ನಿಸುತ್ತೇವೆ.
| ಪ್ರಶಾಂತ್ ಬೆಂಗಳೂರು ರ‍್ಯಾಪ್ಟರ್ಸ್ ಸಿಇಒ