ಬಸವೇಶ್ವರ ಬ್ಯಾಂಕ್ ಮೂಡಲಗಿ ಶಾಖೆ ಉದ್ಘಾಟನೆ

ಮೂಡಲಗಿ: ಬಾಗಲಕೋಟೆ ಬಸವೇಶ್ವರ ಸಹಕಾರಿ ಬ್ಯಾಂಕ್ ಸದ್ಯ ರೂ. 455 ಕೋಟಿಗೂ ಅಧಿಕ ಠೇವಣಿ ಹೊಂದಿ, ಸಹಕಾರಿ ರಂಗದಲ್ಲಿ ಮುಂಚೂಣಿಯಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ತಿಳಿಸಿದ್ದಾರೆ.

ಇಲ್ಲಿಯ ಪೂಜೇರಿ ವಾಣಿಜ್ಯ ಮಳಿಗೆಯಲ್ಲಿ ಭಾನುವಾರ ಬಾಗಲಕೋಟೆ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್​ನ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತ ನಾಡಿ, ಬ್ಯಾಂಕ್ ಕಳೆದ ವರ್ಷ 573 ಕೋಟಿ ರೂ. ಬಂಡವಾಳ ಹೊಂದಿ ರೂ. 273 ಕೋಟಿ ವಿವಿಧ ರೂಪದ ಸಾಲ ನೀಡಿ ರೂ. 3.51 ಕೋಟಿ ರೂ. ಲಾಭಗಳಿಸಿ ಪ್ರಗತಿಯತ್ತ ಸಾಗುತ್ತಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಸಿದ್ದ ಸಂಸ್ಥಾನ ಮಠದ ಶ್ರೀಪಾದಬೋಧ ಶ್ರೀ ಮಾತನಾಡಿ, ಸಹಕಾರಿ ರಂಗಗಳ ಬೆಳವಣಿಗೆಯಲ್ಲಿ ಗ್ರಾಹಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು. ಬೆಳಗಾವಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಶ ಢವಳೇಶ್ವರ ಮಾತನಾಡಿದರು. ಬ್ಯಾಂಕ್ ಉಪಾಧ್ಯಕ್ಷ ಎಂ.ಜಿ. ವಾಲಿ, ಆಡಳಿತ ಸಲಹೆಗಾರ ಡಿ.ಎಸ್. ನಾವಲಗಿ, ಪುರಸಭೆ ಅಧ್ಯಕ್ಷೆ ಕಮಲವ್ವಾ ಹಳಬರ, ಬಿ.ಬಿ. ಹಂದಿಗುಂದ, ಎಸ್.ಆರ್. ಸೋನವಾಲ್ಕರ್, ಡಾ.ಕೆ.ವಿ. ದಂತಿ, ಸಲಹಾ ಸಮಿತಿ ಸದಸ್ಯರಾದ ಎಸ.ಬಿ. ತಾಂಶಿ, ಡಿ.ಬಿ. ಪಾಟೀಲ, ವೈ.ಎಚ್. ಪೂಜೇರಿ, ಚಿ.ಎಸ್. ಅಂಗಡಿ, ಆರ್.ವಿ. ತಾಂವಶಿ, ಎಸ್.ಆರ್. ನೀಲನ್ನವರ್, ಎಸ್.ಎ. ಶೀಲವಂತ, ಐ.ಡಿ. ಗೋಲಶೆಟ್ಟಿ, ಎಸ್.ಟಿ. ಹುಚರಡ್ಡಿ, ಡಾ. ಎ.ಎಸ್. ಆನಿಖಿಚಿಡಿ, ಕಮಲವ್ವಾ ಪಾಟೀಲ, ಪ್ರಧಾನ ವ್ಯವಸ್ಥಾಪಕ ಬಿ.ಪಿ. ಬಣಗಾರ, ಶಾಖಾ ವ್ಯವಸ್ಥಾಪಕ ರಮೇಶ ತಾಂವಶಿ ಇದ್ದರು.