ಬಸವ ನೆಲದಲ್ಲೇ ಮೌಢ್ಯ

Latest News

ಅಲೆ ತಡೆಗೋಡೆ ಕಾಮಗಾರಿಗೆ ವಿರೋಧ

ಕಾರವಾರ: ತಖೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗಾಗಿ ಟ್ಯಾಗೋರ್ ಕಡಲ ತೀರದಿಂದ ಅಲೆ ತಡೆಗೋಡೆ ಕಾಮಗಾರಿ ಆರಂಭವಾಗಿದೆ. ಅದಕ್ಕೆ ಮೀನುಗಾರರು ವಿರೋಧ...

ಪ್ರೇಮಲೋಕ 2ರಲ್ಲಿ ಕ್ರೇಜಿಸ್ಟಾರ್ ಸನ್ಸ್!

ಬೆಂಗಳೂರು: 1987ರಲ್ಲಿ ತೆರೆಕಂಡ ಮ್ಯೂಸಿಕಲ್ ಹಿಟ್ ‘ಪ್ರೇಮಲೋಕ’ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆ ಇಲ್ಲ. ಆ ಸಿನಿಮಾ ನಿರ್ವಿುಸಿದ ದಾಖಲೆ ಒಂದೆರಡಲ್ಲ....

ರಫೇಲ್ ರಗಳೆ ಅಂತ್ಯ

ರಫೇಲ್ ಪ್ರಕರಣದಲ್ಲಿ ಸರ್ಕಾರಕ್ಕೆ ನೀಡಿದ್ದ ಕ್ಲೀನ್​ಚಿಟ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಈ ಬಗ್ಗೆ ಯಾವುದೇ...

ಅನನ್ಯ ಸಾಂಸ್ಕೃತಿಕ ಪ್ರಜ್ಞೆಯ ಕನಕದಾಸ

ಕನಕದಾಸರು 16ನೇ ಶತಮಾನದ ಕರ್ನಾಟಕದಲ್ಲಿ ಆಗಿ ಹೋದ ಭಕ್ತಕವಿ. ಕೀರ್ತನೆ, ನಳಚರಿತೆ, ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಹಾಗೂ ಅನೇಕ...

ಒಳ್ಳೆಯದನ್ನು ಮಾಡುವುದೇ ಧರ್ಮದ ಸರ್ವಸ್ವ

ಪಶ್ಚಿಮದ ಭೋಗಭೂಮಿಯಲ್ಲಿ ಮೈಕೊಡವಿ ನಿಂತ ಈ ಪೂರ್ವರಾಷ್ಟ್ರದ ತ್ಯಾಗಮೂರ್ತಿ ಅವರುಗಳಿಗೆ ತ್ಯಾಗ-ಯೋಗವನ್ನು ಬೋಧಿಸಿದರು. ಅಲ್ಲದೆ ಅಲ್ಲಿ ತನ್ನ ಮಾತೃಭೂಮಿಗಾಗಿ ವೈಯಕ್ತಿಕ ಜೀವನವನ್ನೇ ಸಾರ್ಥಕವಾಗಿ...

ಕೂಡಲಸಂಗಮ:12ನೇ ಶತಮಾನದಲ್ಲೇ ವೈಚಾರಿಕ ಕ್ರಾಂತಿ ಸಾರಿದ್ದ ಬಸವಣ್ಣನ ನೆಲದಲ್ಲೇ ಪಟ್ಟಭದ್ರ ಹಿತಾಶಕ್ತಿಗಳು ಮೌಢ್ಯ ಬಿತ್ತುವ ಕೆಲಸ ಆರಂಭಿಸಿರುವುದು ಆತಂಕ ಮೂಡಿಸಿದೆ.

ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಸಂಪ್ರದಾಯವಾದಿಗಳು ಮೂಢನಂಬಿಕೆ ಬಿತ್ತುವ ಕಾರ್ಯ ಮಾಡುತ್ತಿದ್ದು, ಅದನ್ನು ತಡೆಗಟ್ಟಬೇಕಿದ್ದ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಬಸವ ಅನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಿತ್ಯ ಸುಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಕೆಲವರು ನಿಮ್ಮ ಬಯಕೆ, ಸಂಕಲ್ಪ ಈಡೇರಬೇಕಾದರೆ ಬಸವಣ್ಣನ ಐಕ್ಯಸ್ಥಳ ಸಮೀಪದ ಆಲದ ಮರ ಹಾಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಕಾರ್ಯಾಲಯದ ಮುಂದಿನ ಬನ್ನಿ ಮರಕ್ಕೆ ಲಿಂಬೆ ಹಣ್ಣು ಅಥವಾ ತೆಂಗಿನಕಾಯಿ ಕಟ್ಟಬೇಕು ಎಂದು ಮೌಢ್ಯತೆ ಬಿತ್ತುತ್ತಿದ್ದಾರೆ. ಭಕ್ತರು ಇದನ್ನು ನಂಬಿ ಮರಗಳಿಗೆ ತೆಂಗಿನಕಾಯಿ ಹಾಗೂ ಲಿಂಬೆಹಣ್ಣು ಕಟ್ಟುತ್ತಿದ್ದಾರೆ.

ಬಸವಣ್ಣನವರ ತತ್ತ್ವ, ವಿಚಾರಗಳನ್ನು ಅಧ್ಯಯನ ಮಾಡಿ ಆಕರ್ಷಿತರಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರು, ವಿಚಾರವಾದಿಗಳು ಬಸವಣ್ಣನ ಐಕ್ಯ ಸ್ಥಳದಲ್ಲೇ ಮೂಢನಂಬಿಕೆ ಆಚರಿಸುತ್ತಿ ರುವುದನ್ನು ಕಂಡು ದಿಗಮೆಗೊಂಡಿದ್ದಾರೆ.

ಬಸವಣ್ಣನ ನೆಲದಲ್ಲಿ ಶರಣರ ಆಶಯಕ್ಕೆ ವಿರುದ್ಧವಾದ ಯಾವುದೇ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವುದು ಅಭಿವೃದ್ಧಿ ಪ್ರಾಧಿಕಾರದ ಕೆಲಸ. ಆಲದ ಮರ, ಬನ್ನಿ ಮರಕ್ಕೆ ಕಟ್ಟಿದ ಲಿಂಬೆ ಹಣ್ಣು, ತೆಂಗಿನಕಾಯಿ ಮತ್ತು ದೇವಾಲಯದ ಆವರಣದಲ್ಲಿನ ಹನುಮಂತನ ದೇವಾಲಯದ ಬಳಿ ಬಿದ್ದಿರುವ ದೇವರ ಭಾವಚಿತ್ರಗಳ ರಾಶಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಗ್ರಾಮದ ಸಂಶೋಧನಾ ವಿದ್ಯಾರ್ಥಿ ಆದಪ್ಪ ಗೊರಚಿಕ್ಕನವರ ಆಗ್ರಹಿಸಿದ್ದಾರೆ.

ಬಸವ ಭಕ್ತರಿಗೆ ಕೂಡಲಸಂಗಮ ಪವಿತ್ರ ಸ್ಥಳ. ಬಸವಣ್ಣನ ಐಕ್ಯ ಮಂಟಪದ ಬಳಿ ಮೂಢನಂಬಿಕೆ ಬಿತ್ತುವ ಕಾರ್ಯವನ್ನು ಮಂಡಳಿ ತಡೆಯಬೇಕು. ಬಸವ ತತ್ತ್ವಕ್ಕೆ ವಿರುದ್ಧವಾದ ಯಾವುದೇ ಚಟುವಟಿಕೆ ಇಲ್ಲಿ ನಡೆಯದಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ನೋಡಿಕೊಳ್ಳಬೇಕು.

| ಮಾತೆ ಮಹಾದೇವಿ ಪೀಠಾಧ್ಯಕ್ಷೆ, ಬಸವ ಧರ್ಮ ಪೀಠ, ಕೂಡಲಸಂಗಮ

ಇಲ್ಲಿಯವರೆಗೂ ಕೂಡಲಸಂಗಮದಲ್ಲಿ ಯಾವುದೇ ಮೌಢ್ಯತೆ ಬಿತ್ತುವ ಚಟುವಟಿಕೆ ಸಾರ್ವಜನಿಕವಾಗಿ ಕಂಡು ಬಂದಿರಲಿಲ್ಲ. ಬಸವಣ್ಣನ ತತ್ತ್ವಳಿಗೆ ಅಪಚಾರ ಎಸಗುವ ದುರುದ್ದೇಶದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಗ್ಧ ಜನರನ್ನು ಸುಲಿಗೆ ಮಾಡಿ ಕ್ಷೇತ್ರಕ್ಕೆ ಕಪ್ಪು ಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಕಾರ್ಯವನ್ನು ಮಂಡಳಿ ಕೂಡಲೇ ತಡೆಯಬೇಕು.

| ಬಸವಜಯ ಮೃತ್ಯುಂಜಯ ಸ್ವಾಮೀಜಿ ಜಗದ್ಗುರು, ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ

- Advertisement -

Stay connected

278,469FansLike
563FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...