ಕಲ್ಯಾಣಕ್ಕೆ 4000 ಮನೆ ಮಂಜೂರು

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣ
ನಗರದಲ್ಲಿ ವಿವಿಧ ವಸತಿ ಯೋಜನೆಗಳಡಿ ಪ್ರಸ್ತುತ ಸಾಲಿನಲ್ಲಿ 4000 ಮನೆ ಮಂಜೂರಾಗಿವೆ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಬಿ.ನಾರಾಯಣರಾವ ಹೇಳಿದರು.

ನಾರಾಯಣಪುರ ಕ್ರಾಸ್ ಹತ್ತಿರ ನಿರ್ಮಿಸಿರುವ ನಗರಸಭೆ ಕಚೇರಿ ಕಟ್ಟಡ ಉದ್ಘಾಟಿಸಿದ ಅವರು, ಕೊಳಚೆ ನಿರ್ಮುಲನಾ ಮಂಡಳಿಯಿಂದ 1350, ರಾಜೀವ್ಗಾಂಧಿ ಹೌಸಿಂಗ್ ಕಾಪ್ರೋರೇಷನ್ನಿಂದ 2400 ಸೇರಿ 4000 ಮನೆ ಮಂಜೂರಾಗಿವೆ. ಎರಡು ವರ್ಷದಲ್ಲಿ ಗುಡಿಸಲುಮುಕ್ತ ನಗರವಾಸುವುದು ತಮ್ಮ ಸಂಕಲ್ಪವಾಗಿದೆ ಎಂದರು.

ನಗರಸಭೆ ಕಚೇರಿ ಎದುರು 40-50 ಮಳಿಗೆಗಳನ್ನು ಒಳಗೊಂಡ ವ್ಯಾಪಾರಿ ಸಂಕೀರ್ಣ ನಿರ್ಮಿಸಲು ಎಚ್ಕೆಆರ್ಡಿಬಿಯಿಂದ 5 ಕೋಟಿ ಅನುದಾನ ಮಂಜೂರಿಗೆ ಪ್ರಯತ್ನಿಸಲಾಗುವುದು. ಇದು ನಗರಸಭೆ ಆದಾಯ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಮೀರ್ ಅಜರಅಲಿ ನವರಂಗ್ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಉಪಾಧ್ಯಕ್ಷೆ ಚಮ್ಮಾಬಾಯಿ ಮಾಲಗಾರ, ಸದಸ್ಯರಾದ ರವಿ ಗಾಯಕವಾಡ, ಅನೀಲಕುಮಾರ ಕುಲಕಣರ್ಿ, ಶಹಜಾಹಾನ್ ಬೇಗ್ ಶೇಖ ತನ್ನೀರ್ ಅಹ್ಮದ್, ಗಫೂರ್ ಪೇಶಮಾಮ್, ರವಿ ಕೊಳಕೂರ, ಸೈಯದ್ ಅಕ್ತರ್, ಸುಲ್ತಾನ್ ಸಲಾವುದ್ದೀನ್, ಬಸವರಾಜ ಮೇತ್ರೆ, ಖಯಾಮುದ್ದೀನ್, ಸಿರಾಜಸಾಬ್, ಕಾವೇರಿ, ಯುವರಾಜ ಭೆಂಗೆ, ಕರುಣಾದೇವಿ ಗ್ಯಾನೋಬಾ, ನಯಿಮೋದ್ದಿನ್ ಜಾಗೀರದಾರ, ಮುಸಾಮಿಯಾ, ಹಾಜರಾಬಿ, ಜಾಕಿಯಾ ಬೇಗಂ, ಮುಖಂಡರಾದ ಸುನೀಲ ರಾಯವಾಡೆ, ರಾಮ ಗೋಡಬೋಲೆ, ರಾಜಕುಮಾರ, ಖಾಸಿಂಬೇಗ್, ರಾಜಕುಮಾರ, ವಿಶ್ವನಾಥ ಪಾಟೀಲ್ ಇತರರಿದ್ದರು. ಪೌರಾಯುಕ್ತ ಸುರೇಶ ಬಬಲಾದ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.