ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದಿಲ್ಲ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ಯಾಕೆ?

Latest News

ಬೆಂಗಳೂರಿಗೆ ಇನ್ನೊಂದು ರೈಲು

ಶ್ರವಣ್‌ಕುಮಾರ್ ನಾಳ ಪುತ್ತೂರು ಅಗತ್ಯವಿರುವ 2ಪ್ರದೇಶಗಳಿಗೆ ಅಥವಾ ಬೃಹತ್ ನಗರದಿಂದ ಸಣ್ಣ ಪಟ್ಟಣಗಳಿಗೆ ವೇಗವಾಗಿ ಸಂಪರ್ಕಿಸಲು ನೆರವಾಗುವ ಉದ್ದೇಶದಿಂದ ತುಮಕೂರು-ಯಶವಂತಪುರ ಸೇರಿ ದೇಶದಲ್ಲಿ 10 ಸೇವಾ ಸರ್ವೀಸ್...

ಕ್ರಿಕೆಟಲ್ಲೂ ಹನಿಟ್ರ್ಯಾಪ್!

ಬೆಂಗಳೂರು: ‘ಸಭ್ಯರ ಕ್ರೀಡೆ’ ಕ್ರಿಕೆಟ್​ಗೆ ಬೆಟ್ಟಿಂಗ್ ದಂಧೆಯ ಕಳಂಕ ಮೆತ್ತಿದ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಹಿಂದೆ ಹನಿಟ್ರಾ್ಯಪ್ ಅಪಸವ್ಯವೂ ಕಾಣಿಸಿಕೊಂಡಿದೆ. ಮ್ಯಾಚ್ ಫಿಕ್ಸಿಂಗ್​ನಲ್ಲಿ ಸಿಕ್ಕಿಬಿದ್ದ ಆಟಗಾರರನ್ನು...

ಜೋಡಿ ಕೊಲೆ ಆರೋಪಿ ಸೆರೆ

ಈಶ್ವರಮಂಗಲ: ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಜಲಾಡಿ ಸಮೀಪದ ಹೊಸಮಾರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್...

ಕೆಪಿಎಸ್​ಸಿ ​ಸಂದರ್ಶನದ ವೇಳೆ ನಡೆಯುವ ಅವ್ಯವಹಾರ ತಪ್ಪಿಸಲು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಣಯ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್​ಸಿ) ಸಂದರ್ಶನ ವೇಳೆ ಆಗಬಹುದಾದ ಅವ್ಯವಹಾರ ನಿಯಂತ್ರಿಸಿ ನೇಮಕಾತಿಯಲ್ಲಿ ಬಿಗಿ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಬುಧವಾರ...

ಖಂಡಿಗೆ ಕಿಂಡಿ ಅಣೆಕಟ್ಟು ದುರಸ್ತಿಗಿಲ್ಲ ಕ್ರಮ

ಲೋಕೇಶ್ ಸುರತ್ಕಲ್ ಪಾವಂಜೆ ಖಂಡಿಗೆ ಬಳಿ ಇರುವ ನಂದಿನಿ ನದಿ ಕಿಂಡಿ ಅಣೆಕಟ್ಟಿನ ದುರಸ್ತಿಗೆ ಅಧಿಕಾರಿಗಳು ಖಚಿತ ಯೋಜನೆ ರೂಪಿಸಿಲ್ಲ. ಅಣೆಕಟ್ಟು ನಿರ್ವಹಣೆಗೆ ಸಮಿತಿಯೇ ರಚನೆಯಾಗಿಲ್ಲ. ಹಾಗಾಗಿ...

ಹುಬ್ಬಳ್ಳಿ: ಮೈತ್ರಿ ಸರ್ಕಾರದಿಂದ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. ಅದನ್ನು ನಾ ಒಪ್ಪಿಕೊಳ್ಳುವೆ. ಆದರೆ, ಆ ಒಂದೇ ಕಾರಣಕ್ಕೆ ಮೈತ್ರಿ ಮುರಿಯಲು ಸಾದ್ಯವಿಲ್ಲ. ಗಂಡ ಹೆಂಡತಿ ಜಗಳ ಸಾಮಾನ್ಯ. ಮತ ಬಂದಿಲ್ಲಾ ಎನ್ನುವ ಕಾರಣಕ್ಕೆ ಮದುವೆ ಮುರಿಯಲು ಸಾದ್ಯವಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಬಂಧ ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ಡಿವೋರ್ಸ್ ಕೊಡುವುದು ಸರಿಯಲ್ಲ. ಗಂಡ ಸರಿಯಾಗಿಲ್ಲ ಎಂದಾಕ್ಷಣ ವಿಚ್ಛೇದನ ನೀಡಲು ಆಗುವುದಿಲ್ಲ. ಗಂಡ ಹೆಂಡಿರ ಸಂಬಂಧ ಎಲ್ಲಿವರೆಗೂ ಹೋಗುತ್ತದೆ ಹೋಗಲಿ. ನನಗೆ ತಿಳಿದ ಮಟ್ಟಿಗೆ 12ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಯಡಿಯೂರಪ್ಪ ಮೇಲಿದೆ. ಹೀಗಾಗಿ ಬಿ.ಎಸ್.ವೈ ಕನಸು ನನಸಾಗುವುದಿಲ್ಲ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದಿಲ್ಲ ಎನ್ನುವ ವಿಶ್ವಾಸ ನನಗೆ ಇದೆ ಎಂದು ಹೇಳಿದ್ದಾರೆ.

ರಾಜೀನಾಮೆ ಕೊಡಿಸಿ ಕುದುರೆ ವ್ಯಾಪಾರ ಮಾಡುವ ಯೋಜನೆಯನ್ನು ಬಿಜೆಪಿ ಹೊಂದಿದೆ. ಹೆಚ್ಚು ಅಂದರೆ ವಿಧಾನ ಮಂಡಲವನ್ನು ಸಸ್ಪೆಂಡ್ ಮಾಡಬಹುದು. ಇದು ಕಾನೂನು ಬಾಹಿರ ಕೆಲಸ. ಇದನ್ನು ಮಾಡುವುದರಲ್ಲಿ ಬಿಜೆಪಿಯವರು ಪ್ರವೀಣರು. ಸದ್ಯ ರಾಜೀನಾಮೆ ನೀಡಿದ ಸಚಿವರು ಏನೂ ಆಗುವುದಿಲ್ಲ. ಬಿಜೆಪಿಗೆ ಸೇರುವ ಶಾಸಕರು ಮರು ಆಯ್ಕೆ ಆದರೂ ಪಕ್ಷಾಂತರ ಕಾಯ್ದೆ ಪ್ರಕಾರ ಮಂತ್ರಿ ಆಗಲು ಸಾಧ್ಯವಿಲ್ಲ. 14 ಶಾಸಕರನ್ನು ಖರೀದಿ ಮಾಡುವುದಕ್ಕೆ 600 ಕೋಟಿ ಬೇಕು. ಹೀಗಾಗಿ ಬಿಜೆಪಿ ಈ ಹರಸಾಹಸಕ್ಕೆ ಕೈ ಹಾಕಲಿಕ್ಕಿಲ್ಲ. ಬಿಜೆಪಿ ಬಹಳ‌ ನಯ-ನಾಜೂಕಿನಿಂದ ವರ್ತಿಸುತ್ತಿದೆ‌ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಅರ್ಜೆಂಟಾಗಿ ಸಿಎಂ ಆಗಬೇಕಾಗಿದೆ. ಹೇಗಾದರೂ ಮಾಡಿ ದೋಸ್ತಿ ಸರ್ಕಾರವನ್ನು ಅಸ್ಥಿರ ಮಾಡುವುದು ಅವರ ಉದ್ದೇಶ. ನಾನು ರಾಜಕಾರಣಿಯಾಗಿ ಮಾತನಾಡುತ್ತಿಲ್ಲ. ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಪತನ ಆಗುವುದಿಲ್ಲ. ಬಿಜೆಪಿ ಕೇಂದ್ರ ನಾಯಕರು ದೋಸ್ತಿ ಸರ್ಕಾರದ ಪತನಕ್ಕೆ ಅವಕಾಶ ಕೊಡುವುದಿಲ್ಲ‌. ಕೆಜೆಪಿ ಪಕ್ಷ ಕಾಂಗ್ರೆಸ್ ಜತೆ ವಿಲೀನವಾಗಿದೆ. ನಾನು 120 ಶಾಸಕರ ಬಲ ಹೊಂದಿದ್ದೇವೆ. ಬಿಜೆಪಿಯದ್ದು ಕೇವಲ 105. ನಮ್ಮ 16 ಜನ ರಾಜೀನಾಮೆ ನೀಡಿದರೆ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ಈಗ ಇಬ್ಬರು ಮಾತ್ರ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಸಿಂಧು ಆಗಲಿದೆ. ಆನಂದ್ ಸಿಂಗ್ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕ ವಿಧಾನ ಮಂಡಲ ಕಾಯ್ದೆ ಪ್ರಕಾರ ಕೈ ಬರಹದಲ್ಲಿ ಸ್ಪೀಕರ್‌ಗೆ ರಾಜೀನಾಮೆ ನೀಡಬೇಕು. ಹೀಗಾಗಿ ಆನಂದ ರಾಜೀನಾಮೆ ಅಸಿಂಧು ಆಗಲ್ಲ. ಇನ್ನು ರಮೇಶ ಜಾರಕಿಹೋಳಿ ತಮ್ಮ ರಾಜೀನಾಮೆಯನ್ನು ಫ್ಯಾಕ್ಸ್ ಮೂಲಕ ಕಳಿಸಿದ್ದಾರೆ. ಮೇಲಾಗಿ ಅವರೇ ಖುದ್ದು ಸ್ಪೀಕರ್ ಕೈಗೆ ಕೊಡಬೇಕಿತ್ತು. ರಾಜೀನಾಮೆ ಅಂಗೀಕಾರಕ್ಕೆ ಒಂದು ತಿಂಗಳ ಅವಧಿ ಇರುತ್ತದೆ. ರಾಜೀನಾಮೆ ತಕ್ಷಣವೇ ರಾಜ್ಯ ಸರ್ಕಾರ ಪತನಗೊಳ್ಳುತ್ತದೆ ಎನ್ನುವುದು ತಪ್ಪು ಕಲ್ಪನೆ. ಜು. 12ಕ್ಕೆ ವಿಧಾನಮಂಡಲ ಅಧಿವೇಶನ ನಡೆಯಲಿದೆ. ವಿಶ್ವಾಸ ಮತ ಕೇಳುವ ಅಧಿಕಾರ ಸಿಎಂಗೆ ಇದೆ. ಅವಿಶ್ವಾಸ ಕೇಳುವ ಅಧಿಕಾರ ವಿರೋಧ ಪಕ್ಷಕ್ಕಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

- Advertisement -

Stay connected

278,638FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...