ಜ್ಞಾನ ಸಂಪತ್ತು ಕಸಿದುಕೊಳ್ಳದ ಅಮೂಲ್ಯ ಆಸ್ತಿ

ಬಸವನಬಾಗೇವಾಡಿ: ಜ್ಞಾನವೆಂಬುದು ದೊಡ್ಡ ಸಂಪತ್ತು ಅದನ್ನು ಶಿಕ್ಷಕರ ಪ್ರೀತಿಯಿಂದ ಗಳಿಸಬೇಕು. ಜ್ಞಾನ ಸಂಪತ್ತು ಕಸಿದುಕೊಳ್ಳದ ಅಮೂಲ್ಯ ಆಸ್ತಿಯಾಗಿದೆ ಎಂದು ವಿಜಯಪುರದ ಓಂಕಾರ ಆಶ್ರಮದ ವಿರುಪಾಕ್ಷಿ ದೇವರು ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಸ್ಟುಡೆಂಟ್ ಸ್ಟಡಿ ಸರ್ಕಲ್ ನೇತೃತದಲ್ಲಿ ನಡೆದ 2 ತಿಂಗಳ ಬೇಸಿಗೆ ತರಬೇತಿ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಓದುವ ಕಾಲಕ್ಕೆ ಉತ್ತಮ ರೀತಿಯಲ್ಲಿ ಓದಿಕೊಳ್ಳಬೇಕು. ಸಮಯಕ್ಕೆ ಮಹತ್ವ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲೇ ಸಾಧನೆ ಮಾಡಲು ಛಲ ಹೊಂದಿರಬೇಕು ಎಂದರು.
ಬಡತನದಲ್ಲಿ ಜನಿಸಿದರೂ ಶಿಕ್ಷಣ ಪಡೆದುಕೊಳ್ಳಲಿಕ್ಕೆ ಬಡತನವಿಲ್ಲ. ನಾವು ಉನ್ನತ್ತ ಶಿಕ್ಷಣ ಪಡೆಯುದರೊಂದಿಗೆ ಉನ್ನತ್ತ ಶ್ರೇಣಿಯಲ್ಲಿ ಅಂಕಗಳನ್ನು ಪಡೆದುಕೊಳ್ಳಬೇಕು. ಇಂದಿನ ಯುಗದಲ್ಲಿ ಯುವಕರಲ್ಲಿನ ನಡತೆ ಬದಲಾಗಬೇಕು. ಜ್ಞಾನವೆಂಬುದು ಪ್ರತಿಯೊಬ್ಬರಿಗೂ ಮಹತ್ವದಾಗಿದೆ. ಕಡಿಮೆ ಅಂಕಗಳನ್ನು ಪಡೆದುಕೊಂಡಿವೆ ಎಂದು ನಮ್ಮ ತಲೆಯಲ್ಲಿ ಇರಬಾರದೆಂದು ಹೇಳಿದರು.
ಐಎಎಸ್ ವಿದ್ಯಾರ್ಥಿ ವಿಶಾಲ ಯಳಮೇಲಿ ಮಾತನಾಡಿ, ನಮ್ಮಲ್ಲಿ ನೈತಿಕ ಮೌಲ್ಯವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಮೌಲ್ಯಗಳಿಂದ ಉನ್ನತ ಶಿಕ್ಷಣಕ್ಕೆ ದಾರಿ ದೀಪವಾಗಲಿದೆ. ಶ್ರೀನಿವಾಸ ರಾಮನುಜರು ಗಣಿತ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದರು. ಉಳಿದ ವಿಷಯಗಳಲ್ಲಿ ಅನುತ್ತೀರ್ಣರಾದರು. ವಿದ್ಯಾರ್ಥಿಗಳು ಅನಂತತೆ ಅರಿತುಕೊಂಡು ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡು ವಿದ್ಯಾವಂತರಾಗಬೇಕು ಎಂದರು.
ಶಿಕ್ಷಕ ಎಸ್.ಬಿ. ಹಿರೇಮಠ, ಪತ್ರಕರ್ತ ನಾಗೇಶ ನಾಗೂರ ಮಾತನಾಡಿದರು. ಆರ್.ಎನ್. ಸಾರವಾಡ, ಜಿ.ಬಿ. ಮೇಟಿ ಇದ್ದರು, ಸಂಜಯ ಪೂಜಾರಿ ಪ್ರಾರ್ಥಿಸಿದರು. ಶಿಕ್ಷಕ ಆರ್.ಎ. ದೇಸಾಯಿ ಸ್ವಾಗತಿಸಿದರು. ಕುಮಾರಿ ರೋಹಿಣಿ ನಿರೂಪಿಸಿದರು. ಎಸ್.ಬಿ. ಜಂಗಿ ವಂದಿಸಿದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Leave a Reply

Your email address will not be published. Required fields are marked *