ಉತ್ತಮ ಸಂಸ್ಕಾರದಿಂದ ಗೌರವ ಹೆಚ್ಚಳ

ಬಸವನಬಾಗೇವಾಡಿ : ಪಾಲಕರು ಮನೆಯಲ್ಲಿ ನೀತಿ ಪಾಠ ಹೇಳುವ ಮೂಲಕ ಉತ್ತಮ ಸಂಸ್ಕಾರ ನೀಡಿದರೆ ಸಮಾಜದಲ್ಲಿ ಮಕ್ಕಳ ವ್ಯಕ್ತಿತ್ವ ಹಾಗೂ ಗೌರವ ಹೆಚ್ಚುತ್ತದೆ ಎಂದು ಇಂಗಳೇಶ್ವರ ಹಿರೇಮಠದ ಬೃಂಗೀಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಇಂಗಳೇಶ್ವರದ ಹಿರೇಮಠದಲ್ಲಿ ‘ಗುಡ್ಡಾಪುರ ದಾನಮ್ಮದೇವಿ ಪುರಾಣ’ ನಿಮಿತ್ತ ಸೋಮೇಶ್ವರ ದೇವಸ್ಥಾನದಲ್ಲಿ ಯುವಕರಿಗಾಗಿ ಹಮ್ಮಿಕೊಂಡಿದ್ದ ‘ದುಶ್ಚಟಗಳಿಂದ ದೂರವಿರಿ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಕರು ದುಶ್ಚಟಗಳಿಂದ ದೂರವಿದ್ದು, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಾಲಕರು ಶ್ರಮಿಸಬೇಕು ಎಂದರು.
ಗದಗದ ಅನ್ನದಾನೀಶ್ವರ ಶಾಸಿಗಳು ಮಾತನಾಡಿದರು.
ರೈತ ಮುಖಂಡ ಅರವಿಂದ ಕುಲಕರ್ಣಿ, ಮಹೇಶಗೌಡ ಬಿರಾದಾರ, ಕೈಲಾಸ ಸಜ್ಜನ, ಸಿದ್ರಾಮಪ್ಪ ಬಾಗೇವಾಡಿ, ಮಲ್ಲಪ್ಪ ಹಳ್ಳಿ, ರಾಚಪ್ಪ ತುಬಾಕಿ, ಶ್ರೀಶೈಲ ತಾಳಿಕೋಟಿ, ಶಂಕರ ಹದಿಮೂರ, ದುಂಡಪ್ಪ ಐಗಳಿ, ರಾಮ ಹೆಗಡಿಹಾಳ, ವಿಶ್ವನಾಥ ಹಳ್ಳಿ, ಕೆ.ಎಸ್.ಬಾಗೇವಾಡಿ, ಬಿ.ಬಿ. ಬಾಗೇವಾಡಿ, ಮುದಕಣಗೌಡ ಹಿರೇಮಠ ಮತ್ತಿತರರಿದ್ದರು. ಮಹೇಶಗೌಡ ಬಿರಾದಾರ ಸ್ವಾಗತಿಸಿದರು. ಎ.ಬಿ. ಹೊನವಾಡ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *