ಬಸವನಬಾಗೇವಾಡಿ: ಶತಮಾನದಿಂದಲೂ ನಾಟಕಗಳು ಗ್ರಾಮೀಣರ ಮನರಂಜನೆ ಕೇಂದ್ರಗಳಾಗಿದ್ದವು. ಆಧುನಿಕತೆ ಭರಾಟೆಯಲ್ಲಿ ನಾಟಕಗಳನ್ನು ನೋಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಅತ್ಯಂತ ಶೋಚನಿಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಕರಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಟಕ್ಕಳಕಿಯ ಕರಿಸಿದ್ಧೇಶ್ವರ ನಾಟ್ಯ ಸಂಘದ ‘ರೈತನ ಹೆಸರು ನಾಡಿನ ಹೆಸರು’ ಎಂಬ ಸಾಮಾಜಿಕ ನಾಟಕವನ್ನು ಶನಿವಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಮಾತ್ರ ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಜಾತ್ರೆ, ಉತ್ಸವ, ಹಬ್ಬ ಹರಿದಿನಗಳ ಆಚರಣೆ ಹೆಚ್ಚು ಉಳಿದಿದೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಗಮೇಶ ಓಲೇಕಾರ ಮಾತನಾಡಿ, ನಾಟಕಗಳು ಸಮಾಜದ ನ್ಯೂನತೆಗಳನ್ನು ಸರಿಪಡಿಸಿ ಸನ್ಮಾರ್ಗ ತೋರಿಸುತ್ತವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ರವಿ ಕಿತ್ತೂರ ಮಾತನಾಡಿದರು.
ಮುಖಂಡ ದುಂಡಯ್ಯ ಹಿರೆೀಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಟಿ.ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ, ರಾಜೇಸಾಬ ಶಿವನಗುತ್ತಿ, ಶಂಕರಗೌಡ ಬಿರಾದಾರ, ಶಪೀಕ ಹೊಕ್ರಾಣಿ, ಭೀಮಣ್ಣ ಜಗ್ಗಲ, ರುದ್ರಗೌಡ ಪಾಟೀಲ, ಶರಣಪ್ಪ ಬಳ್ಳಾವೂರ, ಜೆ.ಸಿ.ವಂದಾಲ, ಚಂದ್ರಶೇಖರಗೌಡ ಪಾಟೀಲ, ತಿಪ್ಪಣ್ಣ ಜ್ಯೋತಿ, ಸುರೇಶ ಚಿಮ್ಮಲಗಿ, ಅರವಿಂದ ಗಂಗೂರ, ಎಸ್.ಜಿ.ಪಾಟೀಲ, ನೀಲಾ ಪಾಟೀಲ, ಶಂಕರಗೌಡ ಬಿರಾದಾರ, ಶ್ರೀಶೈಲ ಪೂಜಾರಿ, ಹಣಮಂತ ಟಕ್ಕಳಕಿ, ಗುರುಸಿದ್ದ ಪೂಜಾರಿ, ಕರೆಪ್ಪ ಬಂಜೋಡಿ ಇತರರಿದ್ದರು. ಪಾಂಡುಗೌಡ ಬಿರಾದಾರ ಸ್ವಾಗತಿಸಿದರು. ಸಾಯಬಣ್ಣ ಹಡಪಡ ನಿರೂಪಿಸಿದರು.