ರಾಜಿ ಸಂಧಾನದಿಂದ ನೆಮ್ಮದಿ

ಬಸವನಬಾಗೇವಾಡಿ: ಸಣ್ಣಪುಟ್ಟ ವಿಷಯಗಳಿಗಾಗಿ ಕೋರ್ಟ್ ಮೆಟ್ಟಿಲೇರದೆ ಪರಸ್ಪರ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡರೆ ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಬಾನಾಬೇಗಂ ಲಾಡಖಾನ್ ಹೇಳಿದರು.
ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಪರಿವರ್ತನೆಗಾಗಿ ಲೋಕ ಅದಾಲತ್ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದರು.
ಸಿವಿಲ್ ನ್ಯಾಯಾಧೀಶರಾದ ಅಶ್ವಿನಿ ಹತ್ತಿಹೋಳಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರು, ಪ.ಜಾತಿ, ಪ.ಪಂಗಡ, ಮಹಿಳೆ ಹಾಗೂ ಕಾರ್ಮಿಕರಿಗೆ ಕಾನೂನು ಸೇವಾ ಸಮಿತಿ ಉಚಿತ ಕಾನೂನು ಸೇವೆ ಒದಗಿಸುತ್ತಿದೆ. ಪ್ರಕರಣ ಇತ್ಯರ್ಥ್ಯಕ್ಕಾಗಿ ಅಂತಹ ವ್ಯಕ್ತಿಗಳ ಪರವಾಗಿ ನುರಿತ ವಕೀಲರನ್ನು ಸಮಿತಿ ನೇಮಕ ಮಾಡುತ್ತದೆ ಎಂದು ಹೇಳಿದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ವೀರನಗೌಡ ಪಾಟೀಲ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವರಾಜು ಎಚ್.ಎಸ್., ವಕೀಲರ ಸಂಘದ ಅಧ್ಯಕ್ಷ ಎನ್.ಎಸ್. ಪಾಟೀಲ, ಹಿರಿಯ ನ್ಯಾಯವಾದಿ ವಿ.ಜಿ. ಕುಲಕರ್ಣಿ, ಬಿ.ಕೆ. ಕಲ್ಲೂರ, ನ್ಯಾಯಾಂಗೇತರ ಸಂಧಾನಕಾರ, ವಕೀಲ ಎನ್.ಎಸ್. ಬಿರಾದಾರ, ವೈ.ಎಂ. ಆನಂದಶೆಟ್ಟಿ, ಎಸ್.ಎಂ. ಗಬ್ಬೂರ, ಬಿ.ಪಿ. ಪತ್ತಾರ, ವಕೀಲರಾದ ಸಂಗಮೇಶ ಕೋಳೂರ, ಎನ್.ಎಂ. ಕದಂ, ಎಂ.ಎಸ್. ಗೊಳಸಂಗಿ, ಅಶೋಕ ಕೋಲಕಾರ, ಶಿವಾನಂದ ಒಣರೊಟ್ಟಿ, ಆರ್.ಐ. ಬಿರಾದಾರ ಇತರರು ಇದ್ದರು.
ದಾಖಲೆ ಸಂಖ್ಯೆಯಲ್ಲಿ ಪ್ರಕರಣಗಳ ಇತ್ಯರ್ಥ: ಒಎಸ್ 71, ಸಿಸಿ 199, ಎಂವಿಸಿ 4, ಕ್ರಿಮಿನಲ್ ಮಿಸಲೆನಿಯಸ್ 45, ವ್ಯಾಜ್ಯ ಪೂರ್ವ ಪ್ರಕರಣ 41, ಇಸಿಎ 5 ಸೇರಿ ಒಟ್ಟಾರೆ 365 ಪ್ರಕರಣಗಳನ್ನು ದಾಖಲೆ ಸಂಖ್ಯೆಯಲ್ಲಿ ರಾಜೀ ಸಂಧಾನ ಮುಖಾಂತರ ಇತ್ಯರ್ಥಗೊಳಿಸಲಾಯಿತು. ನ್ಯಾಯಾಲಯದಿಂದ ಜನನ ಪ್ರಮಾಣ ಪತ್ರ ಪೂರೈಸಲು ಆದೇಶ ಪಡೆದ 100 ಜನರಿಗೆ ಇದೇ ವೇಳೆ ಜನನ ಪ್ರಮಾಣ ಪತ್ರ ವಿತರಿಸಲಾಯಿತು.

Leave a Reply

Your email address will not be published. Required fields are marked *