17.8 C
Bengaluru
Wednesday, January 22, 2020

ಭಗವಂತನನ್ನು ಕೃತಜ್ಞತಾಭಾವದಿಂದ ಸ್ಮರಿಸಿ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಬಸವನಬಾಗೇವಾಡಿ: ಪ್ರಕೃತಿ ದೇವತೆ ಮನುಕುಲಕ್ಕೆ ದೊಡ್ಡ ಕೊಡುಗೆ ನೀಡಿದ್ದಾಳೆ. ಪಂಚಭೂತಗಳಲ್ಲಿ ಅದ್ಭುತ ಶಕ್ತಿ ಅಡಗಿದೆ. ಭಗವಂತನನ್ನು ನಾವೆಲ್ಲರೂ ಕೃತಜ್ಞತಾಭಾವದಿಂದ ಸ್ಮರಿಸಬೇಕೆಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಸ್ಥಳೀಯ ಇಕ್ಬಾಲ್‌ನಗರದ ಅಮೋಘಸಿದ್ಧೇಶ್ವರ ಜಾತ್ರೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸೃಷ್ಟಿಯಲ್ಲಿ ಭಗವಂತನಿದ್ದಾನೆ. ಚಂದ್ರಲೋಕದಲ್ಲಿ ಇಲ್ಲದ ಸೌಲಭ್ಯಗಳನ್ನು ದೇವರು ನಮಗೆ ಕಲ್ಪಿಸಿದ್ದಾನೆ. ಅದನ್ನಿರುತ ನಡೆದಾಗ ಜೀವನ ಸುಂದರವಾಗುವುದು ಎಂದು ಹೇಳಿದರು.
ವಿವಿಧ ಜಾತಿ, ಪಂಥ, ಧರ್ಮ ಎಂದು ಲೆಕ್ಕ ಹಾಕದೇ ಎಲ್ಲರೂ ಒಂದೇ ಎಂಬ ಭಾವದಿಂದ ಮುನ್ನಡೆದಾಗ ಸಮಾಜದಲ್ಲಿ ಸಾಮರಸ್ಯ ಮನೋಭಾವ ವಿಕಾಸಗೊಂಡು ಸಮಾಜದ ಪರಿವರ್ತನೆಗೆ ನಾಂದಿಯಾಗ್ತುದೆ. ಭಗವಂತನ ಇಚ್ಛೆಯಂತೆ ಪ್ರತಿಯೊಬ್ಬರು ಬದುಕುಸಾಗಿಸಬೇಕು. ಇಕ್ಬಾಲ್‌ನಗರದಲ್ಲಿ ಸರ್ವ ಧರ್ಮಿಯರು, ವಿವಿಧ ಸಮುದಾಯದವರು ಇದ್ದರೂ ಒಗ್ಗೂಡಿ ಜಾತ್ರೆ ಆಚರಿಸುತ್ತಿರುವುದು ಶ್ಲಾಘನಾರ್ಹ ಎಂದು ಹೇಳಿದರು.
ಪುರಸಭೆ ಸದಸ್ಯ ಅಶೋಕ ಹಾರಿವಾಳ, ನಿವೃತ್ತ ಉಪಪ್ರಾಚಾರ್ಯ ಎಸ್.ಎಸ್. ಕುದರಕರ, ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಸಂಗಮೇಶ ಓಲೇಕಾರ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಇತರರು ಮಾತನಾಡಿದರು.
ಈರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಡಾ.ಮಹಾಂತೇಶ ಜಾಲಗೇರಿ, ಡಾ.ಅಮರೇಶ ಮಿಣಜಗಿ, ಅಂಬೇಡ್ಕರ್ ಅಭಿವೃದ್ಧಿ ನಿಮಗಮದ ಸಂಗಮೇಶ ಪೂಜಾರಿ, ಪುರಸಭೆ ಸದಸ್ಯರಾದ ಪ್ರವೀಣ ಪೂಜಾರಿ, ದೇವೇಂದ್ರ ನಾಯಕ, ರಾಜು ಭೂತನಾಳ, ಸಾಹಿತಿ ಲ.ರು. ಗೊಳಸಂಗಿ, ಶರಣಪ್ಪ ಬೆಲ್ಲದ, ಸಂಗಮೇಶ ಕಳ್ಳಿಮನಿ, ಅಬ್ದುಲ್ ಶಿವಣಗಿ, ಎಸ್.ಎಂ. ಬೂದಿಹಾಳ, ಗುರಪ್ಪ ಗೊಲ್ಲರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಎಸ್.ಜೆ. ಹೆಗಡ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಬೂಬಸಾಬ ನಾಯ್ಕೋಡಿ ನಿರೂಪಿಸಿ, ವಂದಿಸಿದರು.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...