More

    ಪ್ರಾಚಾರ್ಯರನ್ನು ಅಮಾನತುಗೊಳಿಸಿ

    ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬುಧವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಎನ್.ಚೋರಗಸ್ತಿ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
    ಎಬಿವಿಪಿ ತಾಲೂಕು ಸಂಚಾಲಕ ಶಿವಾನಂದ ಬೆಲ್ಲದ ಮಾತನಾಡಿ, ಸರ್ಕಾರಿ ಕಾಲೇಜು ಪ್ರಾಚಾರ್ಯ ರೇಣುಕಾ ರೆಡ್ಡಿ ಅವರು ಸರ್ಕಾರದ ಆದೇಶವಿದ್ದರೂ ವಿವೇಕಾನಂದ ಜಯಂತಿ ಆಚರಿಸಲಿಲ್ಲ. ಈ ಕುರಿತು ವಿದ್ಯಾರ್ಥಿಗಳು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಆದರೆ, ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಿಸಲು ಅನುಮತಿ ಕೇಳಿದರೆ ಉನ್ನತ ಶಿಕ್ಷಣ ಇಲಾಖೆ ನಿರ್ದೇಶಕರ ಅನುಮತಿ ಕೇಳುತ್ತೇನೆ ಎನ್ನುತ್ತಾರೆ. ಇಲಾಖೆ ಆದೇಶವಿಲ್ಲದೆ ಸ್ವತಃ ಪ್ರಾಚಾರ್ಯರೇ ಕಾಲೇಜಿನ ಕ್ಯಾಂಪಸ್‌ನಲ್ಲಿ ಹೊಸ ವರ್ಷ ಆಚರಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳ ಹೆಸರಲ್ಲಿ ಚೆಕ್ ಬರೆದು ಹಣ ತಂದು ಕೊಡಲು ಸೂಚಿಸಿ ಸರ್ಕಾರದ ಹಣ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಕೂಡಲೇ ಅವರನ್ನು ಅಮಾನುತು ಮಾಡಬೇಕೆಂದು ಆಗ್ರಹಿಸಿದರು.
    ಎಬಿವಿಪಿ ನಗರ ಕಾರ್ಯದರ್ಶಿ ಸಂತೋಷ ಪಟೇದ ಮಾತನಾಡಿದರು. ಮುತ್ತು ಹಾಲಿಹಾಳ, ಸಂಜುಕುಮಾರ ತಳವಾರ, ಭೀಮು ನಾಗರಾಳ, ತಾನಾಜಿ ತಿಳಗೋಳ, ಶಿವರಾಜ ದೊಡಮನಿ, ರಾಜು ಬಂಡಿವಡ್ಡರ, ವಿಜು ಓಂಕಾರ, ಆಕಾಶ ಗುರುವಿನ, ಅಯ್ಯಪ್ಪ ಕಡ್ಲಿಮಟ್ಟಿ, ಕೃಷ್ಣ ಹಡಪದ, ರಮೇಶ ಕುಂಬಾರ, ಅರುಣ ಹೊಸಮನಿ, ಆನಂದ ಈಶ್ವರಗೊಂಡ, ದೇವೇಂದ್ರ ದೊಡಮನಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts