ನಂದೀಶ್ವರ ದೇವಸ್ಥಾನದಲ್ಲಿ ಅಸಭ್ಯವಾಗಿ ನೃತ್ಯ ಮಾಡಿದ ಯುವತಿಯರು

ವಿಜಯಪುರ: ಬಸವನ ಬಾಗೇವಾಡಿಯ ಮೂಲ ನಂದೀಶ್ವರ ದೇವಸ್ಥಾನದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಲಾಗಿದ್ದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಮೂಲ ನಂದೀಶ್ವರ ಐತಿಹಾಸಿಕ ದೇವಸ್ಥಾನ. ಅಲ್ಲಿ ಜಾತ್ರೆ ನಡೆಯುತ್ತಿದ್ದು ಆ.28ರಂದು ಯುವತಿಯರು ಮೈಮಾಟ ತೋರಿಸುತ್ತ ಅಶ್ಲೀಲವಾಗಿ ನೃತ್ಯಮಾಡಿದ್ದಾರೆ. ಈ ಡಾನ್ಸ್​ ಮಾಡಿದವರ ಹಾಗೂ ಆಯೋಜನೆ ಮಾಡಿದವರ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳಾ ಸಮಾನತೆ, ಗೌರವದ ಬಗ್ಗೆ ಧ್ವನಿ ಎತ್ತಿದ ಬಸವಣ್ಣನ ದೇವಸ್ಥಾನದ ಆವರಣದಲ್ಲಿ ಈ ರೀತಿ ನೃತ್ಯ ಪ್ರದರ್ಶನ ಮಾಡಿಸಿದ್ದು ಎಳ್ಳಷ್ಟೂ ಸರಿಯಲ್ಲ ಎಂದು ಭಕ್ತರು, ಪ್ರಜ್ಞಾವಂತರು ಅಸಮಾಧಾನ ಹೊರಹಾಕಿದ್ದಾರೆ.