
ಕ್ಷೇತ್ರ ಪರಿಚಯ
ಬಸವನಗುಡಿ ವಿಧಾನಸಭಾ ಕ್ಷೇತ್ರವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಲ್ಲಿ ಒಂದಾಗಿದೆ. ಬಸವನಗುಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಭಾಗವಾಗಿದೆ.
ಬಸವನಗುಡಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ವಸತಿ ಮತ್ತು ವಾಣಿಜ್ಯ ಬಡಾವಣೆ. ಇದರ ದಕ್ಷಿಣ ಭಾಗದಲ್ಲಿ ಜಯನಗರ ಬಡಾವಣೆ ಇದೆ. ಈ ಪ್ರದೇಶದಲ್ಲಿರುವ ದೊಡ್ಡ ಬಸವಣ್ಣ (ನಂದಿ) ದೇವಸ್ಥಾನದಿಂದಾಗಿ ಇದಕ್ಕೆ ಬಸವನಗುಡಿ ಎಂದು ಹೆಸರು ಬಂದಿದೆ. ಇದು ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಬಸವನಗುಡಿಯಲ್ಲಿ ಹೆಚ್ಚಾಗಿ ಕನ್ನಡಿಗರು ವಾಸಿಸುತ್ತಾರೆ. ಈ ಪ್ರದೇಶ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಗೆ ಹೆಸರುವಾಸಿಯಾಗಿದೆ.