ಮಠಗಳು ಸಮಾಜದ ಪರಿವರ್ತನೆ ಕೇಂದ್ರಗಳು

ಬಸವನಬಾಗೇವಾಡಿ: ಮಠಗಳು ಶ್ರದ್ಧಾ ಭಕ್ತಿ ಕೇಂದ್ರಗಳಾಗಿದ್ದು, ಧರ್ಮ ಗುರುಗಳ ತಪೋನುಷ್ಠಾನ ಹಾಗೂ ಭಕ್ತರನ್ನು ಧರ್ಮದ ದಾರಿಯಲ್ಲಿ ಮುನ್ನಡೆಸುವ ಶಕ್ತಿಕೇಂದ್ರಗಳಾಗಿವೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿವಬಸವ ಸ್ವಾಮಿಗಳ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ, ಹಿರೇಮಠದ ಉದ್ಘಾಟನೆ ಹಾಗೂ ಭೃಂಗೀಶ್ವರ ಶಿವಾಚಾರ್ಯರ ಪಟ್ಟಾಧಿಕಾರ ರಜತ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಹೇಳಿದರು.

ಧಾರ್ಮಿಕ ನಾಯಕ ವಿಶ್ವಗುರು ಬಸವಣ್ಣನವರು ಹಾಗೂ ಜಗದ್ಗುರು ರೇವಣಸಿದ್ಧರು ಸಮಾಜದಲ್ಲಿ ವಿಶಾಲ ಭಾವನೆ ಮೂಡಿಸುವ ಮೂಲಕ ಜಾತಿ ಜಂಜಡ ನಿರ್ಮೂಲನೆಗೆ ಶ್ರಮಿಸಿದರು. ಗ್ರಾಮಕ್ಕೆ ನಾನು 15-20 ವರ್ಷಗಳ ಹಿಂದೆ ಬಂದಾಗ ಗ್ರಾಮದಲ್ಲಿ ಐದು ದಿನಗಳ ಇದ್ದ ಪರಿಸ್ಥಿತಿಗೂ ಇಂದಿನ ಸ್ಥಿತಿಗತಿಗಳು ಬದಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಐದು ದಿನಗಳ ಇದ್ದು ಅನುಷ್ಠಾನ ಕೈಗೊಳ್ಳುವೆ ಎಂದು ಶ್ರೀಗಳು ಹೇಳಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಸಮಾರಂಭ ಉದ್ಘಾಟಿಸಿ, ತಾಲೂಕಿನ ಅನೇಕ ಮಠ ಮಂದಿರಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದು, ಮಠಗಳು ಜೀರ್ಣೋದ್ಧಾರಗೊಂಡಿವೆ. ಮುಂಬರುವ ದಿನಗಳಲ್ಲಿ ಜ್ಞಾನ ದೇಗುಲವಾಗಿರುವ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

ಕೊಟ್ಟೂರು-ಡೋಣೂರಿನ ಡಾ.ಸಿದ್ಧ್ದಲಿಂಗ ಶಿವಾಚಾರ್ಯರು, ಬೆಂಗಳೂರು ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯರು, ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಸ್ವಾಮೀಜಿ ಮಾತನಾಡಿದರು. ಬಬಲೇಶ್ವರ ಬ್ರಹನ್ಮಠದ ಡಾ.ಮಹಾದೇವ ಶಿವಾಚಾರ್ಯರು, ಕೆರೂರಿನ ಡಾ. ಶಿವಕುಮಾರ ಶಿವಾಚಾರ್ಯರು, ಮಸಬಿನಾಳದ ಸಿದ್ಧ್ದರಾಮ ಸ್ವಾಮೀಜಿ, ನಿಡಗುಂದಿಯ ಡಾ.ರುದ್ರಮುನಿ ಶಿವಾಚಾರ್ಯರು, ಮನಗೂಳಿಯ ಸಂಗನಬಸವ ಶಿವಾಚಾರ್ಯರು, ಮುತ್ತಗಿಯ ವೀರರುದ್ರಮುನಿ ಶಿವಾಚಾರ್ಯರು, ಇಟ್ಟಗಿಯ ಗುರುಶಾಂತ ಶಿವಾಚಾರ್ಯರು, ಬಿಲ್ ಕೆರೂರಿನ ಸಿದ್ಧ್ದಲಿಂಗ ಶಿವಾಚಾರ್ಯರಯ, ಜೈನಾಪುರದ ರೇಣುಕಾ ಶಿವಾಚಾರ್ಯರು, ದೇವರಹಿಪ್ಪರಗಿಯ ವೀರಗಂಗಾಧರ ಶಿವಾಚಾರ್ಯರು, ಕರಬಂಟನಾಳದ ಶಿವಕುಮಾರ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಂಕರ ಹದಿಮೂರು ಸ್ವಾಗತಿಸಿದರು. ವಿಶ್ವನಾಥ ಹಳ್ಳಿ ಪ್ರಾರ್ಥಿಸಿದರು. ಎಚ್.ಬಿ. ಬಾರಿಕಾಯಿ ನಿರೂಪಿಸಿದರು. ಮಹೇಶ ಬಿರಾದಾರ ವಂದಿಸಿದರು.

Leave a Reply

Your email address will not be published. Required fields are marked *