ಅಗಸಬಾಳ ಕೆರೆಗೆ ನೀರು ತುಂಬಿಸಿ

ಬಸವನಬಾಗೇವಾಡಿ: ಅಗಸಬಾಳ ಕೆರೆಗೆ ಹೂವಿನಹಿಪ್ಪರಗಿ ಶಾಖಾ ಕಾಲುವೆಯಿಂದ ಶೀಘ್ರ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕದ ರೈತ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಅವರಿಗೆ ಮನವಿ ಸಲ್ಲಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸತತ 3-4 ವರ್ಷಗಳ ಭೀಕರ ಬರದಿಂದ ಹಳ್ಳಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಸಂಕಷ್ಟ ಎದುರಾಗಿದೆ. ಅಗಸಬಾಳ ಗ್ರಾಮದಲ್ಲಿ ಎಲ್ಲ ಕೊಳವೆ ಬಾವಿಗಳು ಸಂಪೂರ್ಣ ಬತ್ತಿದ್ದು, ಜನತೆ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ. 3 ಕಿ.ಮೀ. ಅಂತರದಲ್ಲಿರುವ ಅಗಸಬಾಳ ಕಾಲುವೆಯಿಂದ ಕಿರು ಕಾಲುವೆ ನಿರ್ಮಿಸಿ ಕೆರೆಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.

ನೀರು ಹರಿಸದಿದ್ದಲ್ಲಿ ಆಲಮಟ್ಟಿ ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಕಚೇರಿಗೆ ಬೀಗ ಜಡಿದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ಸದಾಶಿವ ಬರಟಗಿ, ಈರಣ್ಣ ದೇವರಗುಡಿ, ಬಾಬುಲಾಲ ಖೋಜಗೀರ, ಚಂದ್ರಾಮ ತೆಗ್ಗಿ, ಹನುಮಂತ ತೋಟದ, ಅರ್ಜುನ ಹಾವಗೊಂಡ, ಶಾರದಾ ಲಮಾಣಿ, ರೇಣುಕಾ ತಳವಾರ, ಗುರುಬಾಯಿ ಹಾದಿಮನಿ, ಗುರಲಿಂಗಪ್ಪಗೌಡ ಪಾಟೀಲ, ಪಾವಡೆಪ್ಪ ಹಳೇಗೌಡರ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *