ಗೂಡ್ಸ್ ವಾಹನ ಪಲ್ಟಿ, ಇಬ್ಬರ ಸಾವು

ಬಸವನಬಾಗೇವಾಡಿ: ಮುದ್ದೇಬಿಹಾಳ ತಾಲೂಕಿನ ತಮದಡ್ಡಿ ಗ್ರಾಮದಿಂದ ಹತ್ತಿ ತುಂಬಿಕೊಂಡು ವಿಜಯಪುರಕ್ಕೆ ತೆರಳುತ್ತಿದ್ದ ಗೂಡ್ಸ್ ವಾಹನ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಪಲ್ಟಿಯಾಗಿ ಇಬ್ಬರು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ತಮದಡ್ಡಿ ಗ್ರಾಮದ ಸಾಹೇಬಗೌಡ ಬಸವಂತರಾಯ ಕುಂಠರೆಡ್ಡಿ (65) ಸ್ಥಳದಲ್ಲೇ ಸಾವಿಗೀಡಾಗಿದರೆ, ಕೋಡೆಪ್ಪ ಗುರಪ್ಪ ಮಡಿವಾಳರ (60) ಚಿಕಿತ್ಸೆ ಲಕಾರಿಯಾಗದೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ನಾಗಪ್ಪ ದೊಡಮನಿ, ಭೀಮಣ್ಣ ವಜ್ಜಲ, ಸಿದ್ದನಗೌಡ ಬಂಟನೂರ ಗಾಯಗೊಂಡಿದ್ದಾರೆ. ಚಾಲಕನ ನಿರ್ಲಕ್ಷೃದಿಂದ ಘಟನೆ ನಡೆದಿದೆ ಎಂದು ದೂರು ದಾಖಲಾಗಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಮಹೇಶ್ವರಗೌಡ ನೇತೃತ್ವದಲ್ಲಿ ಸಿಬ್ಬಂದಿ ತೆರಳಿ ಪರಿಶೀಲಿಸಿದರು.ಬಸವನ ಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *