ಶರಣರ ತತ್ವ ಅಧ್ಯಯನ ಮಾಡಿ

ಬಸವಕಲ್ಯಾಣ: ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಶರಣರ ವಚನಗಳು ದಿವ್ಯ ಔಷಧಿಗಳಾಗಿವೆ ಎಂದು ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪದಿಂದ ನಗರದ ಬಿರಾದಾರ ಕಾಲನಿಯ ಹನುಮಾನ ದೇವಾಲಯದ ಪರಿಸರದಲ್ಲಿ ಆಯೋಜಿಸಿದ ತಿಂಗಳ ಅನುಭವ ಮಂಟಪ-4 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ವಚನ ಪ್ರಜ್ಞೆ ಮೂಡಿಸುವದೇ ಈ ಕಾರ್ಯಕ್ರಮದ ಮೂಲ ಆಶಯ ಎಂದರು.

ಹರಳಯ್ಯ ಪೀಠದ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿದರು. ಉಸ್ತೂರಿಯ ಶ್ರೀ ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ್ ಗಡ್ಡೆ, ಪ್ರಮುಖರಾದ ರೇವಣಪ್ಪ ರಾಯವಡೆ, ಶಂಕರಣ್ಣ ಕೋಳಕುರ್ ಉಪಸ್ಥಿತರಿದ್ದರು. ಸಂಗಮೇಶ್ ತೋಗರಖೇಡ ನಿರೂಪಣೆ ಮಾಡಿದರು.

ಭಾಲ್ಕಿಯ ಕರಡ್ಯಾಳ ಗ್ರಾಮದ ಶ್ರೀ ಚನ್ನಬಸವೇಶ್ವರ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ವೇದಿಕೆಯ ಕಲಾವಿದರಿಂದ ಪ್ರದಶರ್ಿಸಲಾದ ಜೈ ಜವಾನ್ ನಾಟಕ ಗಮನ ಸೆಳೆಯಿತು.