ಬಸವಕಲ್ಯಾಣದಲ್ಲಿ ಮತ ಜಾಗೃತಿಗೆ ಬೈಕ್ ರ್ಯಾಲಿ

ಬಸವಕಲ್ಯಾಣ: ಸ್ವೀಪ್ ಸಮಿತಿಯಿಂದ ನಗರದಲ್ಲಿ ಸೋಮವಾರ ಸಹಾಯಕ ಆಯುಕ್ತ ಗ್ಯಾನೇಂದ್ರಕುಮಾರ ಗಂಗವಾರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಿ ಮತದಾನ ಕುರಿತು ಜನಜಾಗೃತಿ ಮೂಡಿಸಲಾಯಿತು.

ಕೋಟೆಯಿಂದ ಗಾಂಧಿ ವೃತ್ತ, ಬಸವ ವೃತ್ತ, ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ, ತ್ರಿಪುರಾಂತ, ಆಟೋ ನಗರ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ಸಸ್ತಾಪುರ ಬಂಗ್ಲಾವರೆಗೆ ಜಾಗೃತಿ ಮೂಡಿಸುವ ಬ್ಯಾನರ್, ಫಲಕಗಳೊಂದಿಗೆ ಬೈಕ್ ರ್ಯಾಲಿ ನಡೆಯಿತು. ಈ ವೇಳೆ ಕಡ್ಡಾಯ ಮತದಾನ ಎಂಬ ಘೋಷಣೆ ಸಹ ಮೊಳಗಿದವು.

ಮತದಾನ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಕಾರ್ಯ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಕೈಜೋಡಿಸಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ಯಾರೊಬ್ಬರೂ ದೂರ ಉಳಿಯಬಾರದು ಎಂದು ಮನವಿ ಮಾಡಲಾಯಿತು.

ಎಸಿ ಗ್ಯಾನೇಂದ್ರಕುಮಾರ, ತಹಸೀಲ್ದಾರ್ ಸಾವಿತ್ರಿ ಶರಣು ಸಲಗರ್, ಪೌರಾಯುಕ್ತ ಸುರೇಶ ಬಬಲಾದ ಸೇರಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಸಹ ಬೈಕ್ ಹತ್ತಿ ರ್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದರು

Leave a Reply

Your email address will not be published. Required fields are marked *