ವಿಶ್ವಕೋಶದ ಸ್ವರೂಪ ಪಡೆದ ವಿಕಿಪೀಡಿಯಾ

ಬಸವಕಲ್ಯಾಣ: ಆಧುನಿಕ ಕಾಲದಲ್ಲಿ ವಿಕಿಪೀಡಿಯಾ ಜ್ಞಾನ ಶ್ರೀಮಂತಿಕೆಯ ದಾರಿಯಾಗಿದೆ ಎಂದು ಹಿರಿಯ ಪತ್ರಕರ್ತ ರಿಷಿಕೇಶ ಬಹದ್ದೂರ್ ದೇಸಾಯಿ ಹೇಳಿದರು.

ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಬಿಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ ಸಾಹಿತ್ಯ ಸಂಸ್ಕೃತಿ ಸಂಕಥನ 38ನೇ ಉಪನ್ಯಾಸ ಮಾಲೆಯಲ್ಲಿ ವಿಕಿಪೀಡಿಯಾ ಸಾಹಿತ್ಯಕ ಮತ್ತು ಶೈಕ್ಷಣಿಕ ಮಹತ್ವ ಕುರಿತು ಉಪನ್ಯಾಸ ನೀಡಿದ ಅವರು, ಈ ಕಾಲದಲ್ಲಿ ಹುಸಿ ಸುದ್ಧಿ ಮತ್ತು ಸತ್ಯದ ನಂತರದ ಸಂಗತಿಗಳಿಗೆ ಮನ್ನಣೆ ನೀಡದೆ ಮೂಲ ಆಕರವಾಗಿ ವಿಕಿಪೀಡಿಯಾ ಕಾರ್ಯ ನಿರ್ವಹಿಸುತ್ತದೆ. ವಾಟ್ಸ್ಪ್, ೇಸ್ಬುಕ್ನಲ್ಲಿ ಬರುವ ಹುಸಿ ಸುದ್ದಿಗಳಿಗಿಂತ ದಾಖಲೆ ರೂಪದ ವಿಕಿಪೀಡಿಯಾ ಮಹತ್ವ ಪಡೆಯುತ್ತದೆ. ಐಐಟಿ, ಐಐಎಂ, ಜೆಎನ್ಯುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಷಯಗಳನ್ನು ಪೂರ್ಣ ಪ್ರಮಾಣದಲ್ಲಿ ಅಭ್ಯಾಸ, ಅಧ್ಯಯನ ಮಾಡಿದ ನಂತರವೆ ಬೇರೆ ಕಡೆಗೆ ಕಳಿಸುತ್ತಾರೆ ಎಂದು ವಿವರಿಸಿದರು.

ಓದು ಬರಹ ಬಲ್ಲ ಪ್ರಬುದ್ಧರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಬರೆಯಬೇಕಾದರೆ ಸಾಮಾಜಿಕ ಹೊಣೆಗಾರಿಕೆ ಅಗತ್ಯ. ಹೃದಯಕ್ಕೆ ಮನಸ್ಸಿಗೆ ಮೆಚ್ಚುವ ಸಂಗತಿಗಳು, ಅಧ್ಯಯನ ಪೂರ್ಣ ವಿಚಾರಗಳನ್ನು ಬರೆಯುವುದು ಮುಖ್ಯ. ಯುವ ಸಮುದಾಯ ವಿಕಿಪೀಡಿಯಾದಲ್ಲಿ ಬರೆಯುವ, ಸಂಪಾದಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು.


ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿದರು. ಬಿಕೆಇಸಿ ಪ್ರಭಾರಿ ಪ್ರಾಚಾರ್ಯ ಪ್ರೊ. ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯದಶರ್ಿ ದೇವೆಂದ್ರ ಬರಗಾಲೆ, ಪ್ರೊ. ದಯಾನಂದ ಶೀಲವಂತ, ಸಂತೋಷ ಪಾಟೀಲ, ಸುವರ್ಣಲತಾ ಹಿರೇಮಠ, ದಿಲೀಪ ಮಂಠಾಳೆ ಇತರರಿದ್ದರು. ಸಂಜುಕುಮಾರ ಜಲ್ದೆ ಸ್ವಾಗತಿಸಿ, ನಿರೂಪಣೆ ಮಾಡಿದರು. ಬಿಕೆಇಸಿ ರಿಜಿಸ್ಟ್ರಾರ್ ಪ್ರೇಮಸಾಗರ ಪಾಟೀಲ್​ ವಂದಿಸಿದರು.

Leave a Reply

Your email address will not be published. Required fields are marked *