ಜೈಘೋಷಗಳ ಮಧ್ಯೆ ವೈಭವದ ರಥೋತ್ಸವ

ಬಸವಕಲ್ಯಾಣ: ನಗರದ ಮಲ್ಲಿಕಾರ್ಜುನ ಗಲ್ಲಿಯಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರೋತ್ಸವ ನಿಮಿತ್ತ ಗುರುವಾರ ತಡರಾತ್ರಿ ಜೈಘೋಷಗಳ ಮಧೆ ವೈಭವದ ರಥೋತ್ಸವ ಜರುಗಿತು.

ದೇವಸ್ಥಾನ ಬಳಿ ಸಂಜೆ ಶಾಸಕ ಶರಣು ಸಲಗರ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿ ಸಾವಿತ್ರಿ ಸಲಗರ ಪೂಜೆ ಸಲ್ಲಿಸಿ ಪಲ್ಲಕ್ಕಿ ಮತ್ತು ನಂದಿ ಧ್ವಜಗಳ ಮೆರವಣಿಗೆಗೆ ಚಾಲನೆ ನೀಡಿದರು. ಐತಿಹಾಸಿಕ ಕೋಟೆ, ಗಾಂಧಿ ವೃತ್ತದ ಮೂಲಕ ಬಸವೇಶ್ವರ ವೃತ್ತದವರೆಗೆ ಪಲ್ಲಕ್ಕಿ ಮತ್ತು ದೀಪಾಲಂಕೃತ ನಂದಿ ಧ್ವಜಗಳ ಮೆರವಣಿಗೆ ತಾಳ-ಮೇಳ, ವಾದ್ಯ ವೈಭವದೊಂದಿಗೆ ಸಾಗಿತು. ಶ್ವೇತ ಸಮವಸ್ತç ಧರಿಸಿ ತಲೆಗೆ ರುಮಾಲು ಸುತ್ತಿದ್ದ ಬಾಲಕರೇ ನಂದಿ ಧ್ವಜ ಹಿಡಿದು ಹೆಜ್ಜೆ ಹಾಕಿದ್ದು ಗಮನ ಸೆಳೆದಿರುವುದು ವಿಶೇಷ.

ವಿದ್ಯುತ್ ದೀಪಗಳೊಂದಿಗೆ ಪುಷ್ಪಾಲಂಕೃತ ತೆರೆದ ವಾಹನದಲ್ಲಿ ಶಿವನ ಮೂರ್ತಿ ಹಾಗೂ ಇನ್ನೊಂದು ವಾಹನದಲ್ಲಿ ಶಿವನ ದೊಡ್ಡ ಮೂರ್ತಿ ಮೆರವಣಿಗೆ ಆಕರ್ಷಣೆ ಆಗಿದ್ದರೆ, ಮಾರ್ಗದುದ್ದಕ್ಕೂ ತೊಗಲೂರಿನ ಮಹಿಳಾ ಕೋಲಾಟ, ಭಜನೆ ಹಾಗೂ ಯದಲಾಪುರದ ಡೊಳ್ಳು ಕಲಾ ತಂಡದ ಪ್ರದರ್ಶನ ಗಮನ ಸೆಳೆಯಿತು.

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ನಾಗನಾಥ ಸಂಗೋಳಗೆ, ಸೂರ್ಯಕಾಂತ ನಾಸೆ, ಮಲ್ಲಿಕಾರ್ಜುನ ಅಗ್ರೆ, ಬಾಬುರಾವ್ ಚಪಾತೆ, ವಿಜಯಕುಮಾರ ಕಿರಣಗಿ, ಶಿವಶಂಕರ ಮಂಠಾಳೆ, ದೀಪಕ ಅಗ್ರೆ, ಉಮೇಶ ಕೆವಟಿಗೆ, ಗುರುನಾಥ ದುರ್ಗೆ, ಚೆನ್ನಪ್ಪ ರಾಜಾಪುರೆ, ಸಚಿನ್ ಚಡಮುಡೆ, ನಾಗರಾಜ ಸೇರಿಕಾರ, ರಾಜು ಮಂಠಾಳೆ, ಸಂಗಮೇಶ ಅವಸೆ, ಶಿವಕುಮಾರ ಅಗ್ರೆ, ಸಂತೋಷ ದುರ್ಗೆ, ಸೋಮನಾಥ ನಾಸೆ, ಚನ್ನು ಪಾಟೀಲ್, ಶಾಂತು ಚಪಾತೆ, ಸಂತೋಷ, ಬಸವರಾಜ ಅವಸೆ, ಚಂದು ಧುಮ್ಮನಸೂರೆ, ನಾಗೇಶ ಕೊಡಗೆ, ಸೋಮನಾಥ ಸಂಗೋಳಗೆ, ಮಂಜುನಾಥ ಗುರವ, ವೀರಭದ್ರ ಅಂದೇಲಿ ಪಾಲ್ಗೊಂಡಿದ್ದರು.

ಮೆರವಣಿಗೆ ಮರಳಿ ದೇವಸ್ಥಾನಕ್ಕೆ ತಲುಪಿದ ನಂತರ ಮಧ್ಯರಾತ್ರಿ ಅದ್ದೂರಿ ರಥೋತ್ಸವ ಹಾಗೂ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ಜರುಗಿತು. ಮೆರವಣಿಗೆ ಬಸವೇಶ್ವರ ವೃತ್ತದ ಬಳಿ ಆಗಮಿಸಿದಾಗ ಶ್ರೀ ಮಹಾತ್ಮ ಬಸವೇಶ್ವರ ನಂದಿಧ್ವಜ ಸೇವಾ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ದೇವಸ್ಥಾನದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರಿಗೆ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು. ಬೆಳಗ್ಗೆಯಿಂದ ರಾತ್ರಿವರೆಗೆ ಭಕ್ತರು ದರ್ಶನ ಪಡೆದರು.

ಜಾತ್ರೆಗಳಿಂದ ಸಾಮರಸ್ಯ: ಧರ್ಮ, ಅಧ್ಯಾತ್ಮ ಮಾರ್ಗದಲ್ಲಿ ನಡೆದಾಗಲೇ ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದು ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ನುಡಿದರು. ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜಾತ್ರೋತ್ಸವ ನಿಮಿತ್ತ ಬುಧವಾರ ಸಂಜೆ ಏರ್ಪಡಿಸಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತ್ರೆಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಜತೆಗೆ ಸಮಾಜದಲ್ಲಿ ಸಾಮರಸ್ಯ ಬೆಳೆಸಿ ಸೌಹಾರ್ದತೆ ಗಟ್ಟಿಗೊಳಿಸಲು ಸಹಕಾರಿಯಾಗುತ್ತವೆ ಎಂದರು.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…