ಕಲ್ಯಾಣವನ್ನು ಕೈಲಾಸ ಮಾಡಿದ ಬಸವಣ್ಣ

blank

ಬಸವಕಲ್ಯಾಣ: ಕಲ್ಯಾಣದ ಕ್ರಾಂತಿ, ಧರ್ಮಕ್ಕಾಗಿ ಪ್ರಧಾನಿ ಪದವಿ ತ್ಯಾಗ ಮಾಡಿದ್ದರು ಬಸವಣ್ಣ ಎಂದು ಧಾರವಾಡ ಮುರಘಾ ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಹರಳಯ್ಯ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವAತ ಹರಳಯ್ಯ ಪೀಠದ ಸಹಯೋಗದಡಿ ಆಯೋಜಿಸಿರುವ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನ ಕಾರ್ಯಕ್ರಮವನ್ನು ಗುರುವಾರ ಸಂಜೆ ಉದ್ಘಾಟಿಸಿದ ಅವರು, ಆಕಾಶ ಮತ್ತು ಭೂಮಿಗೆ ಇರುವಷ್ಟೇ ಅಂತರ ಬಸವಣ್ಣ ಮತ್ತು ನಮ್ಮವರಿಗಿದೆ ಎಂದರು.

ಬಸವ ತತ್ವ ನಡೆ-ನುಡಿ ಸಿದ್ಧಾಂತ, ಜ್ಞಾನ ಮತ್ತು ಕ್ರಿಯೆಯ ಸಮ ಸಿದ್ಧಾಂತ. ಸತ್ಯವೇ ಸ್ವರ್ಗ, ಮಿಥ್ಯವೇ ನರಕ. ಸ್ವರ್ಗ-ನರಕದ ಕಲ್ಪನೆ ಬದುಕಿನಲ್ಲಿ ತಂದುಕೊಂಡು ಜನರಿಗೆ ಮಾರ್ಗದರ್ಶನ ಮಾಡಿದ ದಾರ್ಶನಿಕ ಬಸವಣ್ಣ. ಕಾಯಕ, ದಾಸೋಹ, ಅನುಭಾವ ಸಿದ್ಧಾಂತದ ಮೂಲಕ ಅದ್ಭುತ ಶರಣ ಕ್ರಾಂತಿ ಮಾಡಿ ಕಲ್ಯಾಣವನ್ನು ಕೈಲಾಸ ಮಾಡಿದ ಮಹಾತ್ಮರು ಎಂದು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ಲಿಂಗಾಯತ ಧರ್ಮೀಯರಿಗೆ ಶರಣ ವಿಜಯೋತ್ಸವ, ಹುತಾತ್ಮ ದಿನ ಅತ್ಯಂತ ಮಹತ್ವದ್ದು. ಸಮ ಸಮಾಜ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಸ್ಥಾಪನೆಗೆ ಪ್ರಾಣ ಬಲಿದಾನ ಮಾಡಿದ ಶರಣರ ಸ್ಮರಣೆ ಮಾಡುವುದು ಈ ಕಾರ್ಯಕ್ರಮದ ಆಶಯ ಎಂದರು.

ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿದರು. ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಟಿಳೇಕರ್ ಧ್ವಜಾರೋಹಣ ನೆರವೇರಿಸಿದರು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥ ರೆಡ್ಡಿ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಬಿಕೆಡಿಬಿ ಎಇಇ ಶಿವಕುಮಾರ ತಳವಾಡೆ, ಬಿಡಿಪಿಸಿ ನಿರ್ದೇಶಕ ಅಶೋಕ ನಾಗರಾಳೆ, ಅನುಭವ ಮಂಟಪ ಟ್ರಸ್ಟ್ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟಿ, ಭಾಲ್ಕಿಯ ಸೋಮನಾಥಪ್ಪ ಅಷ್ಟೂರೆ, ಬೀದರ್ ಮಾತೋಶ್ರೀ ಆಸ್ಪತ್ರೆಯ ಡಾ.ವಿಜಯಶ್ರೀ ಬಶೆಟ್ಟಿ, ಉದ್ಯಮಿ ಕಲ್ಯಾಣರಾವ ಶಿವಣಕರ್, ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿರಾವ ಕಾಂಬಳೆ, ಪ್ರಮುಖರಾದ ಸುಲೋಚನಾ ಗುದಗೆ, ನಿರ್ಮಲಾ ಶಿವಣಕರ ಉಪಸ್ಥಿತರಿದ್ದರು.

ಶಿವಕುಮಾರ ಬಿರಾದಾರ ಸ್ವಾಗತಿಸಿದರು. ಡಾ.ಸಂಗೀತಾ ಮಂಠಾಳೆ ನಿರೂಪಣೆ ಮಾಡಿದರು. ಆಕಾಶವಾಣಿ ಕಲಾವಿದರಾದ ಶಿವಕುಮಾರ ಪಂಚಾಳ ಮತ್ತು ಸಂಗಡಿಗರು ನಡೆಸಿಕೊಟ್ಟ ವಚನ ಸಂಗೀತ ಜನಮನ ಸೂರೆಗೊಳಿಸಿತು.

ವಚನಗಳಿಂದ ಮನುಷ್ಯನ ಅಂತರಂಗದ ವಿಕಾಸವಾಗುತ್ತದೆ. ಶರಣು-ಶರಣಾರ್ಥಿ, ಸಮಾನತೆ, ಬಲಿದಾನ ಈ ಮೂರು ಲಿಂಗಾಯತ ಧರ್ಮದಲ್ಲಿ ಹೊಸ ಮಾರ್ಗ ತೋರಿಸಿಕೊಟ್ಟಿವೆ. ಸಮತೆ ತತ್ವಕ್ಕಾಗಿ ನಡೆದ ಕಲ್ಯಾಣ ಕ್ರಾಂತಿ ಯಶಸ್ವಿಗೊಳಿಸಿದ ಹುತಾತ್ಮ ಶರಣರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
| ಪೂಜ್ಯ ಡಾ.ಗಂಗಾಂಬಿಕಾ ಅಕ್ಕ

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…