ನುಡಿದಂತೆ ನಡೆದು ತೋರಿದ ಶರಣರು

2 Min Read
ನುಡಿದಂತೆ ನಡೆದು ತೋರಿದ ಶರಣರು
ಬಸವಕಲ್ಯಾಣದ ಎಸ್‌ಎಸ್‌ಕೆಬಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣ ಸಮಾರೋಪದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಡಾ.ಬಸವರಾಜ ಡೊಣ್ಣೂರ, ಡಾ.ಬಸವರಾಜ ಎವಲೆ, ಕಲ್ಯಾಣರಾವ ಪಾಟೀಲ್, ಶಿವಕುಮಾರ ಪಾಟೀಲ್ ಇತರರಿದ್ದರು.

ಬಸವಕಲ್ಯಾಣ: ವಚನ ಸಾಹಿತ್ಯದಲ್ಲಿ ಬದುಕಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ವಚನಕಾರರು ಮನುಷ್ಯರಲ್ಲಿನ ಅವಗುಣ ಹೋಗಲಾಡಿಸಿ ಸದ್ಗುಣ ಮೈಗುಡಿಸಿಕೊಳ್ಳುವಂತೆ ಮಾಡಿದ್ದಾರೆ. ಕಾಯಕ ಪರಿಕಲ್ಪನೆ ಒತ್ತಿ ಹೇಳಿದ ಶರಣರು ನುಡಿದಂತೆ ನಡೆದು ತೋರಿಸಿದರು ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಕಲಬುರಗಿಯ ಮಹಾತ್ಮ ಶ್ರೀ ಬಸವೇಶ್ವರ ಅಧ್ಯಯನ ಪೀಠ, ಶರಣಬಸವ ವಿಶ್ವವಿದ್ಯಾಲಯ ಸಹಯೋಗದಡಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹ ಪೀಠಾರೋಹಣಗೈದು ೪೦ ವರ್ಷ ಸಂದ ಸವಿನೆನಪಿಗೆ ಇಲ್ಲಿಯ ಎಸ್‌ಎಸ್‌ಕೆ ಬಸವೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ವಚನ ಸಾಹಿತ್ಯ: ಬಹುಶಿಸ್ತೀಯ ತಾತ್ವಿಕ ನೆಲೆಗಳು ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಬಸವರಾಜ ಡೊಣ್ಣೂರ ಸಮಾರೋಪ ಭಾಷಣ ಮಾಡಿ, ವಚನ ಓದಲು ಸರಳ ಎನಿಸಿದರೂ ಆಂತರಿಕ ವಿಮರ್ಶೆ ಸಂಕೀರ್ಣವಾಗಿದೆ ಎಂದರು.

ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಮನುಷ್ಯ ಬದುಕು ಹಸನುಗೊಳಿಸಲು ಆಂತರಿಕ ಶುದ್ಧಿಗೆ ವಚನಗಳು ದಾರಿದೀಪವಾಗಿವೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿದರು. ಡಾ.ಕಲ್ಯಾಣರಾವ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಶಿವಕುಮಾರ ಪಾಟೀಲ್ ವಂದಿಸಿದರು. ಡಾ.ಚಿದಾನಂದ ಚಿಕ್ಕಮಠ ನಿರೂಪಣೆ ಮಾಡಿದರು. ರಾಜಶ್ರೀ ಪ್ರಾರ್ಥನೆ ಗೀತೆ ಹಾಡಿದರು. ಗಗನಶ್ರೀ ವಚನ ನೃತ್ಯ ಮಾಡಿದರು.
ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್, ಡಾ.ಎಂ.ಜಿ. ಪಾಟೀಲ್, ಪ್ರೊ.ವಿಠೋಬಾ ಡೊಣ್ಣೇಗೌಡರ, ಪ್ರೊ.ಆರ್.ಡಿ. ಬಾಲಿಕಿಲೆ, ಲಕ್ಷ್ಮೀಬಾಯಿ ಬಿ., ಡಾ.ಸುರೇಶ, ಪ್ರೊ.ಎಸ್.ಎಸ್. ಬಾಬನಗೋಳ, ಕಲ್ಯಾಣಪ್ಪ ನಾವದಗಿ, ಶಿವಕುಮಾರ ಕೋಲ್ಲೆ, ಅಂಬರೀಶ ಬಿ., ಸುಮನರೆಡ್ಡಿ, ವಿನಾಯಕ ಮುಳ್ಳೂರು, ಸೂರ್ಯಕುಮಾರ ನಾಸೆ, ಉಲ್ಲಾಸ ಬೊಕ್ಕೆ, ದೀಪಕ ಕಾಡಾದಿ, ಶರಣಬಸವ ಎಂ. ಇತರರಿದ್ದರು.

See also  ಪಾಟೀಲ್ ಜಯ ಕಾರ್ಯಕರ್ತರ ಗೆಲುವು

ವಿವಿಧ ಗೋಷ್ಠಿಗಳು: ವಿಚಾರ ಸಂಕಿರಣದ ಎರಡನೇ ದಿನವಾದ ಭಾನುವಾರ ಮೂರು ಗೋಷ್ಠಿ ಜರುಗಿದವು. ಮೊದಲ ಗೋಷ್ಠಿಯಲ್ಲಿ ಡಾ.ಲಿಂಗಣ್ಣ ಗೋನಾಳ ಮಾತನಾಡಿ, ವಚನಗಳು ಜ್ಞಾನದ ಖಣಿ ಇದ್ದಂತೆ. ಸಕಲ ಜೀವಿಗಳ ಲೇಸು ಬಯಸುವುದೇ ಧರ್ಮ ಎಂದು ವಚನಗಳ ಮೂಲಕ ಶರಣರು ಸಾರಿದ್ದಾರೆ ಎಂದರು. ಡಾ.ಶೈಲಜಾ ಬಾಗೇವಾಡಿ, ಸಾಹಿತಿ ಶಂಭುಲಿಂಗ ಕಾಮಣ್ಣ, ಡಾ.ಲಕ್ಷ್ಮೀಕಾಂತ ಪಂಚಾಳ ಮಾತನಾಡಿದರು. ಕೊನೇ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ಶಶಿಕಾಂತ, ಡಾ.ಅಮರನಾಥ ಸೋಲಾಪುರೆ, ಪ್ರೊ.ರಾಜಶೇಖರ ಬಿರಾದಾರ, ಡಾ.ರೋಳೆಕರ್ ನಾರಾಯಣ ಉಪನ್ಯಾಸ ಮಂಡಿಸಿದರು. ಡಾ.ಗುರುಲಿಂಗಪ್ಪ ಧಬಾಲೆ ಅಧ್ಯಕ್ಷತೆ ವಹಿಸಿದ್ದರು.

Share This Article