ಬಸವತತ್ವ ಪಾಲಿಸಿದ ಕೊಟ್ಟೂರು ಬಸವೇಶ್ವರರು

blank

ಚನ್ನಗಿರಿ: ಕೊಟ್ಟೂರು ಬಸವೇಶ್ವರರು ವಿಶ್ವಗುರು ಬಸವಣ್ಣನವರ ಅನುಯಾಯಿಗಳು, ಪವಾಡ ಪುರುಷರು, ಬಸವತತ್ವ ಪಾಲನೆ ಮಾಡಿದವರು ಎಂದು ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀಗುರು ಕೊಟ್ಟೂರು ಬಸವೇಶ್ವರ ಪಾದಯಾತ್ರೆ ಸಮಿತಿಯಿಂದ ಮಹಾರಥೋತ್ಸವ ಪ್ರಯುಕ್ತ ಮಂಗಳವಾರ 26 ನೇ ವರ್ಷದ ಪಾದಯಾತ್ರೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೊಟ್ಟೂರು ಬಸವೇಶ್ವರರು ಶಿವಯೋಗ ಸಾಧನೆ ಜತೆಗೆ ನಾಡಿನ ಉದ್ದಗಲಕ್ಕೂ ಲಿಂಗವಂತ ಧರ್ಮದ ಪ್ರಚಾರ ಮಾಡುವ ಮೂಲಕ ಭಕ್ತರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರ ಹೆಸರನ್ನು ಸ್ಮರಿಸಿ ಕಷ್ಟ ಹೇಳಿಕೊಂಡರೆ ಸಕಲ ಇಷ್ಟಾರ್ಥ ನೆರವೇರಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.

ಚನ್ನಗಿರಿ ಹಿರೇಮಠ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮಿಗಳು ಮಾತನಾಡಿ, ಪಾದಯಾತ್ರೆ ಮಾಡಿದವರ ಉದ್ದೇಶ ನೆರವೇರುತ್ತದೆ, ಪುರಾಣಗಳಲ್ಲಿ ಪಾದಯಾತ್ರೆ ಮೂಲಕ ದೇವರನ್ನು ಒಲಿಸಿಕೊಳ್ಳುತ್ತಿದ್ದರು ಹಾಗೂ ಪ್ರಪಂಚ ಪರ್ಯಟನೆ ಮಾಡಿ ಜನರಲ್ಲಿ ಧರ್ಮದ ಸಾರವನ್ನು ಬಿತ್ತುವ ಕೆಲಸ ಮಡುತ್ತಾ ಬಂದಿದ್ದಾರೆ ಎಂದರು.

ಪಾದಯಾತ್ರೆ ಮಾಡಿದರೆ ಭಕ್ತರ ಸಂಕಲ್ಪ ಈಡೇರುವ ಜತೆಗೆ ಆರೋಗ್ಯವು ವೃದ್ಧಿಸಲಿದೆ. ದೇವರ ಜಾತ್ರೆ, ರಥೋತ್ಸವದ ಸಮಯದಲ್ಲಿ ಪಾದಯಾತ್ರೆ ಮಾಡುವ ಬದಲಿಗೆ ಪ್ರತಿದಿನ ನಡೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕಾರ್ಯದರ್ಶಿ ಕಾಕನೂರು ನಾಗರಾಜ್ ಮಾತನಾಡಿ, ಕೊಟ್ಟೂರೇಶ್ವರರು ಸದಾಕಾಲ ಜನರ ಒಳಿತನ್ನು ಬಯಸಿದವರು. ಅವರ ಧ್ಯಾನ, ಪೂಜೆ, ಪಾದಯಾತ್ರೆ ಮಾಡುವ ಜತೆಯಲ್ಲಿ ಜನರ ಸೇವೆ ಮಾಡಬೇಕು. ನೊಂದವರ ನುಡಿಯಾಗಿ ದುಡಿದ ಹಣದಲ್ಲಿ ಸ್ವಲ್ಪವಾದರೂ ದಾನ, ದಾಸೋಹ ಮತ್ತು ಉತ್ತಮ ಕೆಲಸ ಮಾಡಿದಾಗ ದೇವರು ಒಲಿಯುತ್ತಾನೆ ಎಂದರು.

ಕೊಟ್ಟೂರು ಪಾದಯಾತ್ರೆ ಸಮಿತಿ ಅಧ್ಯಕ್ಷ ಕೋರಿ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ್ ಶಾಸ್ತ್ರಿ ಪ್ರವಚನ ನಡೆಸಿದರು. ವೀರಶೈವ ಸಮಾಜದ ಅಧ್ಯಕ್ಷ ರಾಜಶೇಖರಯ್ಯ, ಮಾಜಿ ಅಧ್ಯಕ್ಷ ಬಿ.ಆರ್.ಶಿವಲಿಂಗ, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಜಿ.ಪಿ.ರವಿಕುಮಾರ್, ಕೋರಿ ದೀಪಕ್, ಶಿಕ್ಷಕಿ ಕವಿತಾ, ಎಸ್.ಆರ್.ಹಾಲಸ್ವಾಮಿ, ಕಿರಣ್ ಕೋರಿ ಪ್ರಸಾದ್ ಇದ್ದರು.

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…