ಬಾರ್ಜ್​ನ ಸ್ಟೇರಿಂಗ್ ಕಟ್

ಅಂಕೋಲಾ: ಇಲ್ಲಿನ ಗಂಗಾವಳಿ ನದಿಗೆ ಸಂಪರ್ಕ ಕೊಂಡಿಯಾಗಿರುವ ಬಾರ್ಜ್​ನ ಸ್ಟೇರಿಂಗ್ ತುಂಡಾಗಿದ್ದರಿಂದ ಪ್ರಾಣಾಪಾಯದಲ್ಲಿದ್ದ ಪ್ರಯಾಣಿಕರನ್ನು ಸ್ಥಳೀಯರು ಗುರುವಾರ ರಕ್ಷಿಸಿದ್ದಾರೆ.

ಗಂಗಾವಳಿಯಿಂದ ಮಂಜಗುಣಿಗೆ ತೆರಳುತ್ತಿದ್ದ  ಬಾರ್ಜ್​ನ ಸ್ಟೇರಿಂಗ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ, ಗಾಳಿ ಮತ್ತು ನೀರಿನ ರಭಸಕ್ಕೆ ಸಮುದ್ರದ ಅಳಿವೆಯ 200 ಮೀ ದೂರ ತೆರಳಿತ್ತು. ಅಪಾಯದಲ್ಲಿ ಸಿಲುಕಿದ್ದ ವಾಹನ ಮತ್ತು ಪ್ರಯಾಣಿಕರನ್ನು ಸ್ಥಳೀಯರಾದ ಈಶ್ವರ ನಾಯ್ಕ, ಮಾದೇವ ತಾಂಡೇಲ, ರಮೇಶ ತಾಂಡೇಲ್ ಇತರರು ಬೋಟ್​ನ ಮೂಲಕ ತೆರಳಿ ರಕ್ಷಿಸಿದ್ದಾರೆ.