ತ್ರಿವಳಿ ತಲಾಖ್​ ಸಂತ್ರಸ್ತೆ ವಿರುದ್ಧ ಫತ್ವಾ: ಎಫ್ಐಆರ್​ ದಾಖಲು

ಬರೇಲಿ: ತ್ರಿವಳಿ ತಲಾಖ್​ ಸಂತ್ರಸ್ತೆ ವಿರುದ್ಧ ಫತ್ವಾ ಹೊರಡಿಸಿದ್ದ ಮುಸ್ಲಿಂ ಗುರು ಶಾಹಿ ಇಮಾಮ್​ ಹಾಗೂ ಇನ್ನಿಬ್ಬರ ವಿರುದ್ಧ ಬೆದರಿಕೆ ಹಾಗೂ ಮಹಿಳೆಯ ಧಾರ್ಮಿಕ ಹೇಳಿಕೆಗೆ ಧಕ್ಕೆ ಉಂಟುಮಾಡಿದ ಪ್ರಕರಣದಲ್ಲಿ ಎಫ್​ಐಆರ್​ ದಾಖಲಾಗಿದೆ.

ಸಂತ್ರಸ್ತೆ ನಿದಾ ಖಾನ್​ ಹಾಗೂ ಸಾಮಾಜಿಕ ಕಾರ್ಯಕರ್ತೆಯಿಂದ ದಾಖಲಾದ ದೂರಿನ ಆಧಾರದ ಮೇಲೆ ಬಾರಾದಾರಿ ಪೊಲೀಸ್​ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಬುಧವಾರ ಎಫ್​ಐಆರ್ ದಾಖಲಾಗಿದೆ.

ಸಂತ್ರಸ್ತೆ ಪತಿ ಶೀರನ್​ ರಾಜಾ ಖಾನ್​, ಶಾಹಾರ್​ ಇಮಾಮ್​​ ಮುಫ್ತಿ ಮಹಮ್ಮದ್​​ ಖುರ್ಷಿದ್​ ಆಲಂ ಮತ್ತು ಮುಫ್ತಿ ಅಫ್ಜಲ್​ ರಿಝ್ವಿ ಎಂಬುವವರ ವಿರುದ್ಧ ಚಾರ್ಜ್​ಶೀಟ್​ ದಾಖಲಿಸಲಾಗಿದೆ. ​

ಐಪಿಸಿ ಸೆಕ್ಷನ್​ಗೆ​ ಸಂಬಂಧಿಸಿದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಅವರ ಧರ್ಮವನ್ನು ಅವಮಾನಿಸಿದ ಹಾಗೆ, ಶಾಂತಿಯನ್ನು ಕದಡಲು ಉದ್ದೇಶಪೂರಿತವಾಗಿ ಅವಮಾನಿಸುವುದು ಹಾಗೂ ಸಾರ್ವಜನಿಕವಾಗಿ ಕಿರುಕುಳ ನೀಡುವುದು ಅಪರಾಧ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 16 ರಂದು ನಡೆದ ಪ್ರತಿಕಾಗೋಷ್ಠಿಯಲ್ಲಿ ಬರೇಲಿಯ ಜಮಾ ಮಸೀದಿಯ ಇಮಾಮ್ ಅವರು​ ಇಸ್ಲಾಂ ಧರ್ಮದ ವಿರುದ್ಧ ಮಾತನಾಡಿದ ಆರೋಪದ ಮೇಲೆ ನಿದಾ ಖಾನ್​ ವಿರುದ್ಧ ಫತ್ವಾ ಹೊರಡಿಸಿರುವುದಾಗಿ ತಿಳಿಸಿದ್ದರು.

ನಿದಾ ಖಾನ್​ ಅವರನ್ನು ಇಸ್ಲಾಂ ಧರ್ಮದಿಂದ ಬಹಿಷ್ಕರಿಸಲಾಗಿದೆ. ಅವಳ ಹೇಳಿಕೆಗಳು ಧರ್ಮದ ವಿರುದ್ಧವಾಗಿರುವುದರಿಂದ ಫತ್ವಾವನ್ನು ಹೊರಡಿಸಲಾಗಿದೆ ಎಂದು ಸಮರ್ಥನೆ ನೀಡಿದ್ದರು. (ಏಜೆನ್ಸೀಸ್​)