ಹಂದಿಗುಂದ: ಸಮೀಪದ ಪಾಲಬಾವಿ ಗ್ರಾಪಂ ಅಧ್ಯಕ್ಷರು, ಪಿಡಿಒ, ಕೆಲ ಸದಸ್ಯರು ಸೇರಿಕೊಂಡು ಸಾಮಾನ್ಯ ಸಭೆಯಲ್ಲಿ ಬಾರ್, ಆ್ಯಂಡ್ ರೆಸ್ಟೋರೆಂಟ್ ಆರಂಭಿಸಲು ಲೈಸೆನ್ಸ್ ನೀಡಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಗ್ರಾಪಂ ಉಪಾಧ್ಯಕ್ಷೆ ಶೈರಾಬಿ ಬಿರಾದಾರ, ಸದಸ್ಯರಾದ ಬಿಸ್ಮಿಲ್ಲಾ ಕಾಗವಾಡ, ಸಿರಿಯಾಳ ಮಾದರ, ಹುಲೆಪ್ಪ ತೇಗೂರ, ಭರ್ಮಪ್ಪ ನಿಂಗನೂರ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಪಂ ಕಾರ್ಯದರ್ಶಿ ಎನ್.ಜಿ.ಪಾಟೀಲ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
ಗ್ರಾಮದಲ್ಲಿ ಸಾಯಿ ಬಾರ್, ಲಾಡ್ಜ್ ಮತ್ತು ರೆಸ್ಟೋರೆಂಟ್ ಸ್ಥಾಪನೆಗೆ ಲೈಸೆನ್ಸ್ ನೀಡಿರುವುದು ಖಂಡನೀಯ. ಯುವಜನರು ಕುಡಿತಕ್ಕೆ ಅಂಟಿಕೊಳ್ಳುವ ಅಪಾಯವಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಲೈಸೆನ್ಸ್ ರದ್ದುಪಡಿಸಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಗ್ರಾಪಂ ಮಾಜಿ ಅಧ್ಯಕ್ಷ ಭರಮಪ್ಪ ನಿಂಗನೂರ, ಅಸ್ಲಾಂ ಬಿರಾದಾರ, ಭರಮಪ್ಪ ಮಾನಶೆಟ್ಟಿ, ಬಾಬುರಾಜ ತೇಗೂರ, ಸುಭಾಷ ಕಾಡಶೆಟ್ಟಿ, ಚನ್ನಪ್ಪ ನಿಂಗನೂರ, ಗುರು ಮಾದರ, ಭರಮಪ್ಪ ಕಾಡಶೆಟ್ಟಿ, ಬರಮಪ್ಪ ನಿಂಗನೂರ, ಶಿವಲಿಂಗ ನಿಂಗನೂರ, ಪಿಕೆಪಿಎಸ್ ಅಧ್ಯಕ್ಷ ಗುರುಪಾದ ಮರಡಿ, ಚನ್ನಪ್ಪ ಬಳಗಾರ, ಶ್ರೀಶೈಲ ಮರಡಿ, ಭರಮಪ್ಪ ಜೋಗಿ ಇತರರು ಇದ್ದರು.